
ನವದೆಹಲಿ: ಕೆನಡಾದಲ್ಲಿ ನಡೆದ G7 ದುಂಡುಮೇಜಿನ ಸಭೆಯಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕಣ್ಣಲ್ಲೇ ಸಂದೇಶ ರವಾನೆ ಮಾಡಿರುವ ಪ್ರಸಂಗ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.
ಮ್ಯಾಕ್ರನ್ ಜಾರ್ಜಿಯಾ ಮೆಲೋನಿ ಬಳಿ ಏನೋ ಪಿಸುಗುಟ್ಟಿದ್ದು, ಕ್ಯಾಮೆರಾದಲ್ಲಿ ಸೆರೆಯಾಗಿ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.
ಕೆನಡಾದ ಆಲ್ಬರ್ಟಾದಲ್ಲಿ 51ನೇ G7 ಶೃಂಗಸಭೆಯಲ್ಲಿ, ವಿಶ್ವದ ಅತ್ಯಂತ ಶಕ್ತಿಶಾಲಿ ಆರ್ಥಿಕತೆಗಳ ನಾಯಕರು ವ್ಯಾಪಾರ, ಭದ್ರತೆ ಮತ್ತು ತಂತ್ರಜ್ಞಾನ ಸೇರಿದಂತೆ ಜಾಗತಿಕ ಸಮಸ್ಯೆಗಳ ಕುರಿತು ಚರ್ಚಿಸಲು ಒಟ್ಟುಗೂಡಿದ್ದರು. ಅವರಲ್ಲಿ, ಮೆಲೋನಿ ಮತ್ತು ಮ್ಯಾಕ್ರನ್ ಅಕ್ಕಪಕ್ಕದಲ್ಲಿ ಕುಳಿತಿದ್ದರು.
ಅಧಿವೇಶನದ ಸಮಯದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡುತ್ತಿರುವಾಗ, ಮ್ಯಾಕ್ರನ್ ಮೆಲೋನಿಯ ಕಡೆಗೆ ವಾಲಿ ಏನೋ ಪಿಸುಗುಟ್ಟುತ್ತಿದ್ದರು ಕ್ಷಣಗಳ ನಂತರ, ಮ್ಯಾಕ್ರನ್ ಮತ್ತೆ ಮಾತನಾಡಿದಾಗ, ಮೆಲೋನಿ ಪ್ರತಿಕ್ರಿಯೆಯಾಗಿ ಕಣ್ ಸನ್ನೆಯಲ್ಲೇ ಸಂದೇಶ ರವಾನೆ ಮಾಡಿದ್ದಾರೆ.
ಇಬ್ಬರ ನಡುವೆ ಏನು ಸಂಭಾಷಣೆ ನಡೆದಿದೆ ಎಂಬುದು ಈ ವರೆಗೂ ತಿಳಿದುಬಂದಿಲ್ಲ. ಈ ಬಗ್ಗೆ ಯಾವುದೇ ನಾಯಕರು ಕಾಮೆಂಟ್ ಮಾಡಿಲ್ಲ. ಈ ಸಂಕ್ಷಿಪ್ತ ಮಾತುಕತೆ ಕ್ಯಾಮೆರಾಗಳ ಕಣ್ಣಿಗೆ ಬಿದ್ದಿದ್ದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ವೈರಲ್ ಆಗತೊಡಗಿದೆ.
Advertisement