
ಕನನಾಸ್ಕಿಸ್ (ಕೆನಡಾ): ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾದಲ್ಲಿ ಜಿ7 ಶೃಂಗಸಭೆಯಲ್ಲಿ ಫಲಪ್ರದವಾಗಿ ಭಾಗವಹಿಸಿ ಬಳಿಕ, ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಮೂರನೇ ಮತ್ತು ಕೊನೆಯ ಭಾಗವಾಗಿ ಕ್ರೊಯೇಷಿಯಾಕ್ಕೆ ತೆರಳಿದ್ದಾರೆ.
ಕೆನಡಾ ಭೇಟಿ ಫಲಪ್ರದವಾಗಿತ್ತು. ವೈವಿಧ್ಯಮಯ ಜಾಗತಿಕ ವಿಷಯಗಳ ಕುರಿತು ಫಲಪ್ರದ ಚರ್ಚೆಗಳಿಗೆ ಸಾಕ್ಷಿಯಾದ ಯಶಸ್ವಿ ಜಿ7 ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಕೆನಡಾದ ಜನತೆ ಮತ್ತು ಸರ್ಕಾರಕ್ಕೆ ಧನ್ಯವಾದಗಳು. ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಸುಸ್ಥಿರತೆಯನ್ನು ಮತ್ತಷ್ಟು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ ಎಂದು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಕನನಾಸ್ಕಿಸ್‌ನಲ್ಲಿ, ಪ್ರಧಾನ ಮಂತ್ರಿ ಏಳು ರಾಷ್ಟ್ರಗಳ ನಾಯಕರೊಂದಿಗೆ ಪ್ರಮುಖ ಜಾಗತಿಕ ಸವಾಲುಗಳು ಮತ್ತು ಉತ್ತಮ ಭೂಮಿ, ಪರಿಸರ ಹಂಚಿಕೆಯ ಆಕಾಂಕ್ಷೆಗಳ ಕುರಿತು "ಉತ್ಪಾದಕ" ಮತ್ತು ಫಲಪ್ರದ ಮಾತುಕತೆಗಳನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಹಲವು ವಿಶ್ವ ನಾಯಕರನ್ನು ಭೇಟಿಯಾದರು. ವ್ಯಾಪಾರ ಮತ್ತು ಆರ್ಥಿಕತೆಯಂತಹ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು.
ಅವರು ಭೇಟಿಯಾದ ನಾಯಕರಲ್ಲಿ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ-ಮ್ಯುಂಗ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಅವರ ಆಸ್ಟ್ರೇಲಿಯಾದ ಪ್ರತಿರೂಪ ಆಂಥೋನಿ ಅಲ್ಬನೀಸ್ ಸೇರಿದ್ದಾರೆ.
ಕೆನಡಾ ಪ್ರಧಾನಿ ಕಾರ್ನಿ ಅವರೊಂದಿಗಿನ ಮಾತುಕತೆಯ ಸಮಯದಲ್ಲಿ, ಅವರು ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳು ಅತ್ಯಂತ ಮುಖ್ಯ ಎಂದು ಒತ್ತಿ ಹೇಳಿದರು, ಭಾರತ ಮತ್ತು ಕೆನಡಾ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಲಾಭದಾಯಕ ಸಹಕಾರವನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಮಾತುಕತೆಯ ನಂತರ, ಕೆನಡಾದ ಪ್ರಧಾನ ಮಂತ್ರಿ ಕಚೇರಿಯ ಹೇಳಿಕೆಯ ಪ್ರಕಾರ, ಎರಡೂ ದೇಶಗಳಲ್ಲಿನ ನಾಗರಿಕರು ಮತ್ತು ವ್ಯವಹಾರಗಳಿಗೆ ನಿಯಮಿತ ಸೇವೆಗಳಿಗೆ ಭಾರತ ಮತ್ತು ಕೆನಡಾ ಹೊಸ ಹೈಕಮಿಷನರ್‌ಗಳನ್ನು ನೇಮಿಸಲು ಒಪ್ಪಿಕೊಂಡವು.
ಪ್ರಧಾನಿ ಮೋದಿ ಸೋಮವಾರ ಸಂಜೆ ಸೈಪ್ರಸ್‌ನಿಂದ ಕೆನಡಾದ ಕ್ಯಾಲ್ಗರಿಯನ್ನು ತಲುಪಿದರು. ಕಳೆದ ಒಂದು ದಶಕದಲ್ಲಿ ಕೆನಡಾಕ್ಕೆ ಇದು ಅವರ ಮೊದಲ ಭೇಟಿಯಾಗಿದೆ.
Advertisement