
ಟೆಕ್ಸಾಸ್: ಪರೀಕ್ಷೆ ವೇಳೆಯಲ್ಲಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ರಾಕೆಟ್ ಸ್ಫೋಟಗೊಂಡಿರುವ ಘಟನೆ ಅಮೆರಿಕದ ಟೆಕ್ಸಾಸ್ ನಲ್ಲಿ ಬುಧವಾರ ರಾತ್ರಿ ನಡೆದಿದೆ.
ಸ್ಪೇಸ್‌ಎಕ್ಸ್‌ನ ಉಡಾವಣಾ ತಾಣವಾದ ಟೆಕ್ಸಾಸ್‌ನ ದಕ್ಷಿಣ ತುದಿಯ ಸ್ಟಾರ್‌ಬೇಸ್‌ನಲ್ಲಿ ಪರೀಕ್ಷಾ ವೇಳೆಯಲ್ಲಿ ರಾತ್ರಿ ಸುಮಾರು 11 ಗಂಟೆ ವೇಳೆಯಲ್ಲಿ ಆಕಾಶದಲ್ಲಿ ಬೆಂಕಿಯುಂಡೆಯಂತೆ ಸ್ಫೋಟ ಸಂಭವಿಸಿದೆ.
ಆ ಸಮಯದಲ್ಲಿ ಸ್ಟಾರ್‌ಬೇಸ್‌ನಲ್ಲಿ ಹತ್ತೇನೆ ಫ್ಲೇಟ್ ನ ಪರೀಕ್ಷೆಗಾಗಿ ಸಿದ್ಧತೆ ನಡೆಸಲಾಗುತಿತ್ತು ಎನ್ನಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಸ್ಪೇಸ್ ಎಕ್ಸ್, ಸ್ಟಾರ್ ಬೇಸ್ ನಲ್ಲಿ ಹತ್ತೇನೆ ಹಾರಾಟದ ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ ಅವಘಡ ಸಂಭವಿಸಿದೆ. ಎಲ್ಲ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದೆ.
ಸ್ಥಳೀಯ ಅಧಿಕಾರಿಗಳ ನೆರವಿನಿಂದ ಪರೀಕ್ಷಾ ಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸುರಕ್ಷಿತವಾಗಿರಿಸಲು ಸ್ಟಾರ್ ಬೇಸ್ ತಂಡ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿವೆ. ಹತ್ತಿರದ ಪ್ರದೇಶದಲ್ಲಿ ಯಾವುದೇ ಹಾನಿಯಾಗಿಲ್ಲ. ರಕ್ಷಣಾ ಕಾರ್ಯ ನಡೆಯುತ್ತಿರುವಾಗ ಅಲ್ಲಿಗೆ ಹೋಗಲು ಯಾರು ಯತ್ನಿಸಬಾರದು ಎಂದು ಸೂಚನೆ ನೀಡಿದೆ.
Advertisement