
ದುಬೈ: ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 865 ಜನರು ಮೃತಪಟ್ಟು 3,396 ಜನರು ಗಾಯಗೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪು ಭಾನುವಾರ ತಿಳಿಸಿದೆ.
ಅಮೆರಿಕದ ವಾಷಿಂಗ್ಟನ್ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಗುಂಪು ಈ ಅಂಕಿಅಂಶಗಳನ್ನು ನೀಡಿದ್ದು, ಇದು ಇಡೀ ಇರಾನ್ ನ್ನು ಒಳಗೊಂಡಿದೆ. 363 ನಾಗರಿಕರು ಮತ್ತು 215 ಭದ್ರತಾ ಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ. ಎಂದು ಗುರುತಿಸಲಾಗಿದೆ.
ಮಹ್ಸಾ ಅಮಿನಿಯ ಸಾವಿನ ವಿರುದ್ಧ 2022 ರಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಸಾವುನೋವು ಅಂಕಿಅಂಶಗಳನ್ನು ಒದಗಿಸಿದ ಮಾನವ ಹಕ್ಕುಗಳ ಕಾರ್ಯಕರ್ತರು, ಇಸ್ಲಾಮಿಕ್ ಗಣರಾಜ್ಯದ ಸ್ಥಳೀಯ ವರದಿಗಳನ್ನು ದೇಶದಲ್ಲಿ ಅಭಿವೃದ್ಧಿಪಡಿಸಿದ ಮೂಲಗಳ ಜಾಲದೊಂದಿಗೆ ಪರಿಶೀಲಿಸುತ್ತಾರೆ.
ಸಂಘರ್ಷದ ಸಮಯದಲ್ಲಿ ಇರಾನ್ ನಿಯಮಿತ ಸಾವಿನ ಸಂಖ್ಯೆಯನ್ನು ನೀಡುತ್ತಿಲ್ಲ. ಇರಾನ್‌ನ ಆರೋಗ್ಯ ಸಚಿವಾಲಯವು ಇಸ್ರೇಲ್ ದಾಳಿಯಲ್ಲಿ ಸುಮಾರು 400 ಇರಾನಿಯನ್ನರು ಮೃತಪಟ್ಟು 3,056 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.
ಇರಾನಿನ ಪರಮಾಣು ತಾಣಗಳ ಮೇಲಿನ ಅಮೆರಿಕದ ದಾಳಿಯ ಹಿನ್ನೆಲೆಯಲ್ಲಿ, ದೇಶದ ವಾಯುಪ್ರದೇಶವನ್ನು ಒಳಬರುವ ಮತ್ತು ಹೊರಹೋಗುವ ವಿಮಾನಗಳಿಗೆ ಮುಚ್ಚುವುದಾಗಿ ಇಸ್ರೇಲ್ ವಿಮಾನ ನಿಲ್ದಾಣ ಪ್ರಾಧಿಕಾರ ಭಾನುವಾರ ಘೋಷಿಸಿತು.
ಇತ್ತೀಚಿನ ಬೆಳವಣಿಗೆಗಳಿಂದಾಗಿ ವಾಯು ಸಂಚಾರವನ್ನು ಸ್ಥಗಿತಗೊಳಿಸುತ್ತಿರುವುದಾಗಿ ಸಂಸ್ಥೆ ಹೇಳಿದೆ. ಇಸ್ಫಹಾನ್, ಫೋರ್ಡೊ ಅಥವಾ ನಟಾಂಜ್‌ನಲ್ಲಿರುವ ತನ್ನ ಪರಮಾಣು ತಾಣಗಳಲ್ಲಿ ಯಾವುದೇ ಮಾಲಿನ್ಯದ ಲಕ್ಷಣಗಳಿಲ್ಲ ಎಂದು ಇರಾನ್ ಹೇಳಿದೆ.
ಇರಾನ್‌ನ ರಾಜ್ಯ ಮಾಧ್ಯಮವು ದೇಶದ ರಾಷ್ಟ್ರೀಯ ಪರಮಾಣು ಸುರಕ್ಷತಾ ವ್ಯವಸ್ಥೆ ಕೇಂದ್ರವನ್ನು ಉಲ್ಲೇಖಿಸಿದೆ, ಅದು ದಾಳಿಯ ನಂತರ ಅದರ ವಿಕಿರಣ ಪತ್ತೆಕಾರಕಗಳು ಯಾವುದೇ ವಿಕಿರಣಶೀಲ ಬಿಡುಗಡೆಯನ್ನು ದಾಖಲಿಸಿಲ್ಲ ಎಂದು ಹೇಳಿಕೆ ನೀಡಿತು.
ಈ ಹಿಂದೆಯೂ ಇಸ್ರೇಲ್ ಪರಮಾಣು ಸ್ಥಾವರಗಳ ಮೇಲೆ ನಡೆಸಿದ ವೈಮಾನಿಕ ದಾಳಿಗಳಿಂದಾಗಿ, ಸೌಲಭ್ಯಗಳ ಸುತ್ತಲಿನ ಪರಿಸರಕ್ಕೆ ಯಾವುದೇ ವಿಕಿರಣಶೀಲ ವಸ್ತುಗಳು ಬಿಡುಗಡೆಯಾಗಿಲ್ಲ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಹೇಳಿದೆ.
Advertisement