2019 Air Strike ವೇಳೆ ಭಾರತದ Abhinandan Varthaman ರನ್ನು ಸೆರೆ ಹಿಡಿದಿದ್ದ ಪಾಕ್ ಯೋಧ ಉಗ್ರನ ಗುಂಡಿಗೆ ಬಲಿ!

ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್(Abhinandan Varthaman)ಅವರನ್ನು ಸೆರೆ ಹಿಡಿದಿದ್ದ ಪಾಕಿಸ್ತಾನ(Pakistan)ದ ಮೇಜರ್ ಸೈಯದ್ ಮೊಯಿಜ್ ಅಬ್ಬಾಸ್ ಶಾ ದಕ್ಷಿಣ ವಜೀರಿಸ್ತಾನದ ಸರ್ಗೋಧಾದಲ್ಲಿ ಟಿಟಿಪಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
Pakistani special forces officer Major Syed Muiz
ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್
Updated on

ಇಸ್ಲಾಮಾಬಾದ್: ಪುಲ್ವಾಮಾ ಉಗ್ರ ಗಾಳಿಗೆ ಬದಲಾಗಿ ಭಾರತೀಯ ಸೇನೆ 2019ರಲ್ಲಿ ನಡೆಸಿದ್ದ ಬಾಲಾಕೋಟ್ ಏರ್ ಸ್ಟ್ರೈಕ್ ವೇಳೆ ಭಾರತೀಯ ವಾಯುಸೇನೆಯ ಯೋಧ ಅಭಿನಂದನ್ ವರ್ಧಮಾನ್ (Abhinandan Varthaman) ರನ್ನು ಹಿಡಿದಿದ್ದ ಪಾಕಿಸ್ತಾನದ ಯೋಧ ಇದೀಗ ಉಗ್ರನ ಗುಂಡೇಟಿಗೆ ಬಲಿಯಾಗಿದ್ದಾರೆ.

ಹೌದು... ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್(Abhinandan Varthaman)ಅವರನ್ನು ಸೆರೆ ಹಿಡಿದಿದ್ದ ಪಾಕಿಸ್ತಾನ(Pakistan)ದ ಮೇಜರ್ ಸೈಯದ್ ಮೊಯಿಜ್ ಅಬ್ಬಾಸ್ ಶಾ ದಕ್ಷಿಣ ವಜೀರಿಸ್ತಾನದ ಸರ್ಗೋಧಾದಲ್ಲಿ ಟಿಟಿಪಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪಾಕಿಸ್ತಾನ ಸೇನೆಯ ಪ್ರಕಾರ, ಮೇಜರ್ ಮೊಯಿಜ್ ಅಬ್ಬಾಸ್ ಶಾ ಮತ್ತು ಲ್ಯಾನ್ಸ್ ನಾಯಕ್ ಜಿಬ್ರಾನ್ ಟಿಟಿಪಿ ದಾಳಿಯಲ್ಲಿ ಸಾವನ್ನಪ್ಪಿದ್ದು,ಈ ಎನ್‌ಕೌಂಟರ್‌ನಲ್ಲಿ ಟಿಟಿಪಿಯ 11 ಸದಸ್ಯರನ್ನು ಕೊಂದಿರುವುದಾಗಿ ಪಾಕಿಸ್ತಾನ ಸೇನೆ ಹೇಳಿಕೊಂಡಿದೆ. ಮಂಗಳವಾರ ಖೈಬರ್ ಪಖ್ತುನ್ಖ್ವಾದ ದಕ್ಷಿಣ ವಜೀರಿಸ್ತಾನ್ ಜಿಲ್ಲೆಯಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಹೇಳಿಕೆಯ ಪ್ರಕಾರ, ಜೂನ್ 24, 2025 ರಂದು, ಭದ್ರತಾ ಪಡೆಗಳು ದಕ್ಷಿಣ ವಜೀರಿಸ್ತಾನ್ ಜಿಲ್ಲೆಯ ಸರೋಘಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದವು. ಈ ಕಾರ್ಯಾಚರಣೆಯಲ್ಲಿ ಮೇಜರ್ ಮೊಯಿಜ್ ಅಬ್ಬಾಸ್ ಶಾ ಮತ್ತು ಲ್ಯಾನ್ಸ್ ನಾಯಕ್ ಜಿಬ್ರಾನ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧದ ಅನೇಕ ಕಾರ್ಯಾಚರಣೆಗಳಲ್ಲಿ ಮೇಜರ್ ಮೊಯಿಜ್ ಅವರ ಧೈರ್ಯಶಾಲಿ ಕ್ರಮಗಳಿಗೆ ಹೆಸರುವಾಸಿಯಾಗಿದ್ದರು. ಇದೀಗ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ. ಅಂದಹಾಗೆ ಮೇಜರ್ ಮೊಯಿಜ್ ಅಬ್ಬಾಸ್ ಶಾ ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧದ ಅನೇಕ ಕಾರ್ಯಾಚರಣೆಗಳಲ್ಲಿ ಧೈರ್ಯಶಾಲಿ ಕ್ರಮಗಳಿಗೆ ಹೆಸರುವಾಸಿಯಾಗಿದ್ದರು.

Pakistani special forces officer Major Syed Muiz
'ನನ್ನ ಭುಜದ ಮೇಲೆ ಭಾರತದ ತ್ರಿವರ್ಣ ಇದೆ': ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಿಂದ Shubhanshu Shukla ಸಂದೇಶ; Video

ಪುಲ್ವಾಮಾ ಉಗ್ರ ದಾಳಿಗೆ ಭಾರತ ಪ್ರತೀಕಾರ

ಬಾಲಕೋಟ್ ದಾಳಿ ಫೆಬ್ರವರಿ 14, 2019 ರಂದು, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕರು ಸಿಆರ್‌ಪಿಎಫ್ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದರು. ಈ ದಾಳಿಯಲ್ಲಿ 40 ಸಿಆರ್‌ಪಿಎಫ್ ಸೈನಿಕರು ಹುತಾತ್ಮರಾದರು. ಇದಕ್ಕೆ ಪ್ರತಿಯಾಗಿ, ಭಾರತ ಫೆಬ್ರವರಿ 26 ರಂದು ಪಾಕಿಸ್ತಾನದ ಬಾಲಕೋಟ್‌ನಲ್ಲಿರುವ ಜೆಇಎಂ ಭಯೋತ್ಪಾದಕ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತು.

ಇದನ್ನು ಭಾರತದಲ್ಲಿ ಬಾಲಕೋಟ್ ವೈಮಾನಿಕ ದಾಳಿ ಎಂದು ಕರೆಯಲಾಗಿತ್ತು. ಈ ದಾಳಿಯಲ್ಲಿ ಜೈಶ್‌ನ ಅನೇಕ ದೊಡ್ಡ ಭಯೋತ್ಪಾದಕರು ಕೊಲ್ಲಲ್ಪಟ್ಟರು. ಮರುದಿನ, ಫೆಬ್ರವರಿ 27 ರಂದು, ಪಾಕಿಸ್ತಾನ ವಾಯುಪಡೆ (ಪಿಎಎಫ್) ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನಿಸಿತು ಮತ್ತು ಭಾರತೀಯ ವಾಯುಪ್ರದೇಶದೊಳಗೆ ನುಸುಳಲು ಪ್ರಯತ್ನಿಸಿತು.

ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಶ್ರೀನಗರದ 51 ನೇ ಸ್ಕ್ವಾಡ್ರನ್‌ನಲ್ಲಿ ನಿಯೋಜಿಸಲಾಗಿತ್ತು ಮತ್ತು ಅವರು ಮಿಗ್ -21 ಬೈಸನ್ ಅನ್ನು ಹಾರಿಸುತ್ತಿದ್ದರು. ಅವರು ಪಿಎಎಫ್ ಎಫ್ -16 ಯುದ್ಧ ವಿಮಾನವನ್ನು ಗುರಿಯಾಗಿಸಿಕೊಂಡರು. ಅಭಿನಂದನ್ ಈ ಪಾಕಿಸ್ತಾನಿ ಎಫ್ -16ಗೆ ಸವಾಲು ಹಾಕಿ ಆಕಾಶದಲ್ಲಿ ಅದನ್ನು ಬೆನ್ನಟ್ಟಲು ಪ್ರಾರಂಭಿಸಿದರು.

ದೀರ್ಘ ಯುದ್ಧದ ನಂತರ, ಅವರು ಎಫ್ -16 ಅನ್ನು ಹೊಡೆದುರುಳಿಸಿದರು. ಈ ಕಾರ್ಯಾಚರಣೆಲ್ಲಿ ಪಾಲ್ಗೊಂಡಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರ ಮಿಗ್ ವಿಮಾನವನ್ನು ಪಾಕಿಸ್ತಾನ ಸೇನೆ ಕ್ಷಿಪಣಿ ಹಾರಿಸಿ ಹೊಡೆದುರುಳಿಸಿತ್ತು. ಈ ವೇಳೆ ಅಭಿನಂದನ್ ಪಾಕ್ ಗಡಿಯೊಳಗೆ ಬಿದ್ದಿದ್ದರು.

ಇದೇ ಸಂದರ್ಭದಲ್ಲಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೋಧ ಮೇಜರ್ ಮೊಯಿಜ್ ಅಬ್ಬಾಸ್ ಶಾ ಅಭಿನಂದನ್ ರನ್ನು ಬಂಧಿಸಿದ್ದರು. ಬಳಿಕ ಭಾರತದ ರಾಜತಾಂತ್ರಿಕ ನಡೆಯ ಫಲವಾಗಿ ಅಂದಿನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ ಅವರನ್ನು ಬಿಡುಗಡೆ ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com