ನಮ್ಮನ್ನು ಕೆಣಕಿದ 'ಅಮೆರಿಕಕ್ಕೆ ಕಪಾಳಕ್ಕೆ ಹೊಡೆದಿದ್ದೇವೆ': ಕದನ ವಿರಾಮ ಬೆನ್ನಲ್ಲೇ ಖಮೇನಿ ಮೊದಲ ಸಾರ್ವಜನಿಕ ಹೇಳಿಕೆ!

ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ಕದನ ವಿರಾಮದ ನಂತರ ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು, ತಮ್ಮ ದೇಶವು ಇಸ್ರೇಲ್ ವಿರುದ್ಧ ಗೆದ್ದಿದೆ. ಅಲ್ಲದೆ ಇರಾನ್ 'ಅಮೆರಿಕಕ್ಕೆ ಕಪಾಳಮೋಕ್ಷ ಮಾಡಿದೆ' ಎಂದರು.
Donald Trump-Ayatollah Ali Khamenei
ಡೊನಾಲ್ಡ್ ಟ್ರಂಪ್-ಅಯತೊಲ್ಲಾ ಅಲಿ ಖಮೇನಿ
Updated on

ದುಬೈ: ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ಕದನ ವಿರಾಮದ ನಂತರ ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು, ತಮ್ಮ ದೇಶವು ಇಸ್ರೇಲ್ ವಿರುದ್ಧ ಗೆದ್ದಿದೆ. ಅಲ್ಲದೆ ಇರಾನ್ 'ಅಮೆರಿಕಕ್ಕೆ ಕಪಾಳಮೋಕ್ಷ ಮಾಡಿದೆ' ಎಂದು ಹೇಳಿದರು. ಇರಾನ್‌ನ ರಾಜ್ಯ ದೂರದರ್ಶನದಲ್ಲಿ ಪ್ರಸಾರವಾದ ವೀಡಿಯೊ ಸಂದೇಶದಲ್ಲಿ ಖಮೇನಿ ಈ ಹೇಳಿಕೆಗಳನ್ನು ನೀಡಿದ್ದಾರೆ.

ಇಸ್ರೇಲ್ ಸೇನೆ ಟೆಹ್ರಾನ್ ಮೇಲೆ ವಾಯುದಾಳಿಯನ್ನು ಶುರುಮಾಡಿದ್ದು ಸುಮಾರು 12 ದಿನಗಳ ಯುದ್ಧದ ಸಮಯದಲ್ಲಿ 86 ವರ್ಷದ ಖಮೇನಿ ರಹಸ್ಯ ಸ್ಥಳದಲ್ಲಿ ಆಶ್ರಯ ಪಡೆದಿದ್ದರು. ಇನ್ನು ತಮ್ಮ ಹೇಳಿಕೆಯಲ್ಲಿ ಖಮೇನಿ, ಯಹೂದಿ ಆಡಳಿತವು ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಭಾವಿಸಿದ್ದರಿಂದ ಅಮೆರಿಕ ಯುದ್ಧದಲ್ಲಿ ಮಧ್ಯಪ್ರವೇಶಿಸಿತು ಎಂದು ಹೇಳಿದರು. ಆದಾಗ್ಯೂ ಅಮೆರಿಕ 'ಈ ಯುದ್ಧದಿಂದ ಏನನ್ನೂ ಗಳಿಸಲಿಲ್ಲ' ಎಂದು ಅವರು ಹೇಳಿದರು.

ಕಳೆದ ಸೋಮವಾರ ಕತಾರ್‌ನಲ್ಲಿರುವ ಅಮೆರಿಕ ಸೇನಾ ನೆಲೆಯ ಮೇಲೆ ಇರಾನಿನ ಕ್ಷಿಪಣಿ ದಾಳಿಯನ್ನು ಉಲ್ಲೇಖಿಸಿ, ಇಸ್ಲಾಮಿಕ್ ಗಣರಾಜ್ಯವು ವಿಜಯಶಾಲಿಯಾಗಿ ಹೊರಹೊಮ್ಮಿದ್ದು ಅಮೆರಿಕದ ಮುಖಕ್ಕೆ ಹೊಡೆದಿದೆ ಎಂದು ಹೇಳಿದರು. ಭವಿಷ್ಯದಲ್ಲಿ ಇಂತಹ ಕ್ರಮಗಳು ಪುನರಾವರ್ತನೆಯಾಗಬಹುದು. ಇರಾನ್ ಈ ಪ್ರದೇಶದಲ್ಲಿನ ಪ್ರಮುಖ ಅಮೆರಿಕದ ನೆಲೆಗಳಿಗೆ ಸುಲಭವಾಗಿ ಪ್ರವೇಶಿಸುತ್ತದೆ. ಅಗತ್ಯವೆಂದು ಭಾವಿಸಿದಾಗಲೆಲ್ಲಾ ನಾವು ದಾಳಿ ಮಾಡುತ್ತೇವೆ ಎಂದು ಖಮೇನಿ ಎಚ್ಚರಿಸಿದರು.

ನಮ್ಮ ದಾಳಿ ನಡೆದರೆ ಶತ್ರು ದೇಶ ಖಂಡಿತವಾಗಿಯೂ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಖಮೇನಿ ಹೇಳಿದರು. ಜೂನ್ 13ರಂದು ಯುದ್ಧ ಪ್ರಾರಂಭವಾದ ನಂತರ ರಹಸ್ಯ ಸ್ಥಳದಲ್ಲಿ ಆಶ್ರಯ ಪಡೆದ ನಂತರ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇರಾನಿನ ಪರಮಾಣು ಸ್ಥಾವರಗಳು, ಉನ್ನತ ಮಿಲಿಟರಿ ಕಮಾಂಡರ್‌ಗಳು ಮತ್ತು ವಿಜ್ಞಾನಿಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿತ್ತು. ನಂತರ ಜೂನ್ 22ರಂದು ಅಮೆರಿಕವು ಬಂಕರ್-ಬಸ್ಟರ್ ಬಾಂಬ್‌ಗಳಿಂದ ಇರಾನ್‌ನ ಪರಮಾಣು ತಾಣಗಳನ್ನು ಗುರಿಯಾಗಿಸಿಕೊಂಡಿತು. ಇದರ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಮತ್ತು ಇರಾನ್ ನಡುವೆ ಕದನ ವಿರಾಮವನ್ನು ಘೋಷಿಸಿದರು. ಅದು ಮಂಗಳವಾರದಿಂದ ಜಾರಿಗೆ ಬಂದಿತು.

Donald Trump-Ayatollah Ali Khamenei
ಇಸ್ರೇಲ್ ದಾಳಿಯಲ್ಲಿ ಗಾಯಗೊಂಡಿದ್ದ ಇರಾನ್ ಸೇನಾ ಮುಖ್ಯಸ್ಥ ಅಲಿ ಶದ್ಮನಿ ಸಾವು

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದಾಗಿ ಎರಡೂ ದೇಶಗಳು ಬಹಳಷ್ಟು ನಷ್ಟ ಅನುಭವಿಸಿವೆ. ಅನೇಕ ಗಗನಚುಂಬಿ ಕಟ್ಟಡಗಳು ನೆಲಸಮವಾಗಿವೆ. ಹಲವಾರು ಮಂದಿ ಬಲಿಯಾಗಿದ್ದಾರೆ. ಆದಾಗ್ಯೂ, ಯುದ್ಧದ ನಂತರದ ಹಾನಿಯ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ಬರಬೇಕಿದೆ. ಯುದ್ಧದಿಂದಾಗಿ ಆಸ್ಪತ್ರೆಗಳು ಮತ್ತು ಕಟ್ಟಡಗಳು ಸೇರಿದಂತೆ ಅನೇಕ ಪ್ರಮುಖ ಕಟ್ಟಡಗಳು ಹಾನಿಗೊಳಗಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com