
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಜಾಫರ್ ಎಕ್ಸ್‌ಪ್ರೆಸ್ ಎಂಬ ಪ್ಯಾಸೆಂಜರ್ ರೈಲನ್ನು ಹೈಜಾಕ್ ಮಾಡಿದ ಉಗ್ರರು 20 ಯೋಧರನ್ನು ಹತ್ಯೆ ಮಾಡಿದ್ದು, 182 ಪ್ರಯಾಣಿಕರನ್ನು ಬಲೂಚಿಸ್ತಾನದಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.
ಬಲೂಚ್ ಲಿಬರೇಶನ್ ಆರ್ಮಿ (BLA) ಉಗ್ರ ಸಂಘಟನೆ, ರೈಲು ಹೈಜಾಕ್ ಕೃತ್ಯದ ಹೊಣೆಯನ್ನು ಮಂಗಳವಾರ ಹೊತ್ತುಕೊಂಡಿದೆ.
ರೈಲನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, 20 ಯೋಧರನ್ನು ಕೊಂದು, 182 ಪ್ರಯಾಣಿಕರನ್ನು ಒತ್ತೆಯಾಳುಗಾಗಿ ಇರಿಸಿಕೊಳ್ಳಲಾಗಿದೆ ಎಂದು ಉಗ್ರ ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ. BLA ಮಜೀದ್ ಬ್ರಿಗೇಡ್ ಫತೇ ಸ್ಕ್ವಾಡ್ ಮತ್ತು ಎಸ್‌ಟಿಒಎಸ್‌ನಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಬಿಎಲ್‌ಎ ಉಗ್ರ ಸಂಘಟನೆಯ ವಕ್ತಾರರು ತಿಳಿಸಿದ್ದಾರೆ.
ಜಾಫರ್ ಎಕ್ಸ್‌ಪ್ರೆಸ್ ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಕ್ವಾದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದಾಗ ಉಗ್ರರು ಈ ಕೃತ್ಯವೆಸಗಿದ್ದಾರೆ.
ಯೋಜಿತ ರೀತಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ರೈಲ್ವೆ ಹಳಿಯನ್ನು ಸ್ಫೋಟಿಸಿ ಜಾಫರ್ ಎಕ್ಸ್ ಪ್ರೆಸ್ ರೈಲನ್ನು ನಿಲ್ಲಿಸಲಾಯಿತು. ತದನಂತರ ಕೂಡಲೇ ರೈಲನ್ನು ವಶಕ್ಕೆ ತೆಗೆದುಕೊಂಡಿದ್ದು, ಎಲ್ಲಾ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವುದಾಗಿ ಉಗ್ರ ಸಂಘಟನೆ ತಿಳಿಸಿದೆ.
Advertisement