Pakistan ಪ್ಯಾಸೆಂಜರ್ ರೈಲನ್ನೇ ಹೈಜಾಕ್ ಮಾಡಿದ ಬಲೂಚ್ ರೆಬೆಲ್ಸ್, 400ಕ್ಕೂ ಅಧಿಕ ಒತ್ತೆಯಾಳುಗಳು!

BLA ಹೋರಾಟಗಾರರು ರೈಲ್ವೇ ಹಳಿಗಳನ್ನು ಸ್ಫೋಟಿಸಿದರು ಮತ್ತು ರೈಲನ್ನು ನಿಲ್ಲಿಸಲು ಒತ್ತಾಯಿಸಿದರು, ನಂತರ ಅವರು ಅದನ್ನು ಹತ್ತಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
Pakistan Passenger Train Hijacked
ಪಾಕಿಸ್ತಾನದಲ್ಲಿ ರೈಲು ಅಪಹರಣ
Updated on

ಲಾಹೋರ್: ಪಾಕಿಸ್ತಾನದ ವಶದಲ್ಲಿರುವ ಬಲೂಚಿಸ್ತಾನವನ್ನು ಸ್ವತಂತ್ರ್ಯಗೊಳಿಸಬೇಕು ಎಂದು ಹೋರಾಡುತ್ತಿರುವ ಬಲೂಚ್ ಲಿಬರೇಶನ್ ಆರ್ಮಿ (BLA) ಪಾಕಿಸ್ತಾನದ ಪ್ಯಾಸೆಂಜರ್ ರೈಲನ್ನೇ ಹೈಜಾಕ್ ಮಾಡಿದ್ದು, ಅದರಲ್ಲಿದ್ದ ಸುಮಾರು 400ಕ್ಕೂ ಅಧಿಕ ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದೆ.

ಪಾಕಿಸ್ತಾನ ರೈಲ್ವೇ ಇಲಾಖೆಗೆ ಸೇರಿದ ಜಾಫರ್ ಎಕ್ಸ್‌ಪ್ರೆಸ್ ಅನ್ನು ಬಲೂಚಿಸ್ತಾನ ಬಂಡುಕೋರರು ಅಪಹರಣ ಮಾಡಿದ್ದು, ಈ ರೈಲಿನ ಸುಮಾರು 9 ಬೋಗಿಗಳಲ್ಲಿದ್ದ 400ಕ್ಕೂ ಅಧಿಕ ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ.

ಈ ರೈಲು ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಕ್ವಾದ ಪೇಶಾವರ್‌ಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಬಂಡುಕೋರರು ಗುಂಡಿನ ದಾಳಿ ಮಾಡಿ ರೈಲು ಹೈಜಾಕ್ ಮಾಡಿದ್ದಾರೆ. ಈ ಘರ್ಷಣೆಯಲ್ಲಿ ಆರು ಮಂದಿ ಪಾಕಿಸ್ತಾನ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

BLA ಹೋರಾಟಗಾರರು ರೈಲ್ವೇ ಹಳಿಗಳನ್ನು ಸ್ಫೋಟಿಸಿದರು ಮತ್ತು ರೈಲನ್ನು ನಿಲ್ಲಿಸಲು ಒತ್ತಾಯಿಸಿದರು, ನಂತರ ಅವರು ಅದನ್ನು ಹತ್ತಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Pakistan Passenger Train Hijacked
Champions Trophy 2025 'ಪ್ರಶಸ್ತಿ ಪ್ರದಾನದಲ್ಲೂ ನಮಗೆ ಅಪಮಾನ, CEO ಇದ್ದರೂ ಕರೆದಿಲ್ಲ': PCB ಅಳಲು, ICC ಸ್ಪಷ್ಟನೆ ಹೊರತಾಗಿಯೂ ದೂರು!

ಸೇನಾ ಕಾರ್ಯಾಚರಣೆ ನಡೆಸಿದರೆ ಒತ್ತೆಯಾಳುಗಳ ಸಾವು

ಇದೇ ವೇಳೆ ತಮ್ಮ ವಿರುದ್ಧ ಪಾಕಿಸ್ತಾನಿ ಸೇನಾಪಡೆಗಳು ಕಾರ್ಯಾಚರಣೆ ನಡೆಸಿದರೆ ತಮ್ಮ ವಶದಲ್ಲಿರುವ ಒತ್ತೆಯಾಳುಗಳನ್ನು ಕೊಲ್ಲಲಾಗುವುದು ಎಂದು ಬಿಎಲ್‌ಎ ವಕ್ತಾರ ಜೀಯಂಡ್ ಬಲೋಚ್ ಘೋಷಣೆ ಮಾಡಿದ್ದಾರೆ.

"ಯಾವುದೇ ಮಿಲಿಟರಿ ಆಕ್ರಮಣವನ್ನು ಸಮಾನವಾಗಿ ಪ್ರಬಲ ಪ್ರತಿಕ್ರಿಯೆಯೊಂದಿಗೆ ಎದುರಿಸಲಾಗುವುದು. ಇಲ್ಲಿಯವರೆಗೆ, ಆರು ಸೇನಾ ಸಿಬ್ಬಂದಿ ಕೊಲ್ಲಲ್ಪಟ್ಟಿದ್ದಾರೆ ಮತ್ತು ನೂರಾರು ಪ್ರಯಾಣಿಕರು BLA ಕಸ್ಟಡಿಯಲ್ಲಿ ಉಳಿದಿದ್ದಾರೆ. ಬಲೂಚ್ ಲಿಬರೇಶನ್ ಆರ್ಮಿ ಈ ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ" ಎಂದು BLA ವಕ್ತಾರರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಾಕ್ ಸೇನಾಪಡೆಗಳು ದೌಡು

ಇನ್ನು ವಿಚಾರ ತಿಳಿಯುತ್ತಲೇ ಬಲೂಚಿಸ್ತಾನದ ಬೋಲನ್ ಜಿಲ್ಲೆಯ ಮುಷ್ಕಾಫ್ ಪ್ರದೇಶಕ್ಕೆ ಪಾಕಿಸ್ತಾನ ಭದ್ರತಾ ಪಡೆಗಳು ದೌಡಾಯಿಸಿದ್ದು, ಬಲೂಚಿಸ್ತಾನ ಸರ್ಕಾರವು ತುರ್ತು ಕ್ರಮಗಳನ್ನು ವಿಧಿಸಿದೆ ಮತ್ತು ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಸಂಸ್ಥೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಸರ್ಕಾರದ ವಕ್ತಾರ ಶಾಹಿದ್ ರಿಂಡ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com