ಲಾಂಚ್ ಪ್ಯಾಡ್ ಸಮಸ್ಯೆ: ನಾಸಾ ಗಗನಯಾತ್ರಿಗಳನ್ನು ಮರಳಿ ಕರೆತರುವ SpaceX ಹಾರಾಟ ಮತ್ತಷ್ಟು ವಿಳಂಬ!

ಬಾಹ್ಯಾಕಾಶ ಕಕ್ಷೆಯಲ್ಲಿ ಕಳೆದ 9 ತಿಂಗಳಿನಿಂದ ಸಿಲುಕಿಕೊಂಡಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಭೂಮಿಗೆ ಮರಳಬೇಕಾದರೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೊಸ ಗಗನಯಾತ್ರಿಗಳು ಹೋಗಬೇಕಾಗಿದೆ.
A SpaceX Falcon 9 rocket with a crew of four aboard the Crew Dragon spacecraft scrubbed prior to liftoff for a mission to the International Space Station from pad 39A at the Kennedy Space Center in Cape Canaveral, Fla., Wednesday, March 12, 2025.
ಫ್ಲೋರಿಡಾದ ಕೇಪ್ ಕೆನವೆರಲ್‌ನಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದ ಪ್ಯಾಡ್ 39A ನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಾಟ ನಡೆಸುವ ಮೊದಲು ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ನಾಲ್ವರು ಸಿಬ್ಬಂದಿಯೊಂದಿಗೆ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್ ನ್ನು ಹಾರಿಸಲಾಯಿತು.
Updated on

ಕೇಪ್ ಕೆನವೆರಲ್(ಫ್ಲೋರಿಡಾ): ನಾಸಾದಲ್ಲಿ ಸಿಲುಕಿಕೊಂಡಿರುವ ಇಬ್ಬರು ಗಗನಯಾತ್ರಿಗಳನ್ನು ಭೂಮಿಗೆ ಕಳುಹಿಸಲು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಬೇಕಿದ್ದ ಸ್ಪೇಸ್ ಎಕ್ಸ್ ಉಡಾವಣಾ ಪ್ಯಾಡ್ ಸಮಸ್ಯೆಯಿಂದಾಗಿ ಹಾರಾಟ ವಿಳಂಬವಾಗಿದೆ.

ಬಾಹ್ಯಾಕಾಶ ಕಕ್ಷೆಯಲ್ಲಿ ಕಳೆದ 9 ತಿಂಗಳಿನಿಂದ ಸಿಲುಕಿಕೊಂಡಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಭೂಮಿಗೆ ಮರಳಬೇಕಾದರೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೊಸ ಗಗನಯಾತ್ರಿಗಳು ಹೋಗಬೇಕಾಗಿದೆ.

ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಫಾಲ್ಕನ್ ರಾಕೆಟ್‌ನ ಯೋಜಿತ ಉಡಾವಣೆ ನಿನ್ನೆ ಸಂಜೆ ನಿಗದಿಯಾಗಿತ್ತು. ಆದರೆ ಅದಕ್ಕೆ ನಾಲ್ಕು ಗಂಟೆ ಮೊದಲು ನಿರ್ಣಾಯಕ ಹೈಡ್ರಾಲಿಕ್ ವ್ಯವಸ್ಥೆಯ ಸಮಸ್ಯೆ ಉಂಟಾಯಿತು. ಉಡಾವಣೆಗೆ ಕೌಂಟ್‌ಡೌನ್ ಶುರುವಾಗುತ್ತಿದ್ದಂತೆ, ಎಂಜಿನಿಯರ್‌ಗಳು ರಾಕೆಟ್ ನ್ನು ಅದರ ಬೆಂಬಲ ರಚನೆಗೆ ಜೋಡಿಸುವ ಎರಡು ಕೈಗಳಲ್ಲಿ ಒಂದನ್ನು ಬಿಡುಗಡೆ ಮಾಡಲು ಬಳಸುವ ಹೈಡ್ರಾಲಿಕ್‌ಗಳನ್ನು ಮೌಲ್ಯಮಾಪನ ಮಾಡಿದರು. ಈ ರಚನೆಯು ಉಡಾವಣೆಗೆ ಮೊದಲು ಬಲಕ್ಕೆ ಓರೆಯಾಗಬೇಕಾಗುತ್ತದೆ.

ಅದಾಗಲೇ ತಮ್ಮ ಕೋಶಕಕ್ಕೆ ನಿಗದಿಯಾಗಿದ್ದ ನಾಲ್ವರು ಗಗನಯಾತ್ರಿಗಳು ಎಂಜಿನಿಯರ್ ಗಳ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿದ್ದರು, ಹಾರಾಟ ಕೌಂಟ್ ಡೌನ್ ಗೆ ಒಂದು ಗಂಟೆಗಿಂತ ಕಡಿಮೆ ಸಮಯ ಉಳಿದಿದ್ದಾಗ ಕೆಳಗೆ ಬಂದಿತು. ಸ್ಪೇಸ್‌ಎಕ್ಸ್ ದಿನದ ಮಟ್ಟಿಗೆ ರದ್ದುಗೊಂಡಿತು. ಹೊಸ ಉಡಾವಣಾ ದಿನಾಂಕವನ್ನು ತಕ್ಷಣ ಘೋಷಿಸಲಿಲ್ಲ, ಆದರೆ ಮುಂದಿನ ಪ್ರಯತ್ನ ಇಂದು ಗುರುವಾರ ರಾತ್ರಿಯ ಮೊದಲು ಆಗಬಹುದು ಎಂದಿದ್ದಾರೆ.

A SpaceX Falcon 9 rocket with a crew of four aboard the Crew Dragon spacecraft scrubbed prior to liftoff for a mission to the International Space Station from pad 39A at the Kennedy Space Center in Cape Canaveral, Fla., Wednesday, March 12, 2025.
ಗಗನಯಾತ್ರಿ ಸುನಿತಾ ವಿಲಿಯಮ್ಸ್ ಯಾವಾಗ ಭೂಮಿಗೆ ಮರಳುತ್ತಾರೆ?: ನಾಸಾದಿಂದ ಮಹತ್ವದ ಅಪ್ಡೇಟ್ ಇಲ್ಲಿದೆ...

ಬಾಹ್ಯಾಕಾಶ ನಿಲ್ದಾಣಕ್ಕೆ ಬಂದ ನಂತರ, ಜೂನ್‌ನಿಂದ ಅಲ್ಲೇ ಇರುವ ವಿಲ್ಮೋರ್ ಮತ್ತು ವಿಲಿಯಮ್ಸ್ ಅವರನ್ನು ಅಮೆರಿಕ, ಜಪಾನ್ ಮತ್ತು ರಷ್ಯಾದ ಸಿಬ್ಬಂದಿ ಬದಲಾಯಿಸಲಿದ್ದಾರೆ. ಬೋಯಿಂಗ್‌ನ ಹೊಸ ಸ್ಟಾರ್‌ಲೈನರ್ ಕ್ಯಾಪ್ಸುಲ್ ಸಾಗಣೆಯಲ್ಲಿ ಪ್ರಮುಖ ವೈಫಲ್ಯಗಳನ್ನು ಎದುರಿಸಿದ ನಂತರ ಈ ಇಬ್ಬರು ಪರೀಕ್ಷಾ ಪೈಲಟ್‌ಗಳು ದೀರ್ಘಾವಧಿಯ ವಾಸ್ತವ್ಯಕ್ಕಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಥಳಾಂತರಗೊಳ್ಳಬೇಕಾಯಿತು.

ಸ್ಟಾರ್‌ಲೈನರ್‌ನ ಚೊಚ್ಚಲ ಸಿಬ್ಬಂದಿ ಹಾರಾಟವು ಕೇವಲ ಒಂದು ವಾರದಲ್ಲಿ ಮುಗಿಯಬೇಕಿತ್ತು, ಆದರೆ ಕ್ಯಾಪ್ಸುಲ್ ನ್ನು ಖಾಲಿಯಾಗಿ ಹಿಂತಿರುಗಿಸಲು ಆದೇಶಿಸಿ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಅವರನ್ನು ಹಿಂತಿರುಗುವ ಹಂತಕ್ಕಾಗಿ ಸ್ಪೇಸ್‌ಎಕ್ಸ್‌ಗೆ ವರ್ಗಾಯಿಸಿತು.

A SpaceX Falcon 9 rocket with a crew of four aboard the Crew Dragon spacecraft scrubbed prior to liftoff for a mission to the International Space Station from pad 39A at the Kennedy Space Center in Cape Canaveral, Fla., Wednesday, March 12, 2025.
ISS ನಲ್ಲಿ Sunita Williams Christmas ಆಚರಣೆ; 8 ದಿನಕ್ಕಾಗಿ ತೆರಳಿದವರ ಬಳಿ ಸಂಟಾ ಕ್ಲಾಸ್ ಟೋಪಿ ಹೇಗೆ ಬಂತು?: ನೆಟ್ಟಿಗರ ಪ್ರಶ್ನೆ

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com