ಡೆನ್ವೆರ್ ಏರ್ ಪೋರ್ಟ್ ಗೇಟ್ ನಲ್ಲಿ ಅಮೆರಿಕನ್ ಏರ್ ಲೈನ್ಸ್ ಗೆ ಬೆಂಕಿ: 12 ಮಂದಿ ಆಸ್ಪತ್ರೆಗೆ ಸ್ಥಳಾಂತರ

ಭಾರತೀಯ ಕಾಲಮಾನ ಪ್ರಕಾರ, ನಿನ್ನೆ ಸಾಯಂಕಾಲ ಈ ಘಟನೆ ಸಂಭವಿಸಿದ್ದು, ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಕ್ಸ್ ಖಾತೆ ಪ್ರಕಾರ, ಆಸ್ಪತ್ರೆಗಳಿಗೆ ಸಾಗಿಸಲಾದ ಎಲ್ಲಾ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
This image courtesy of Branden Williams shows passengers standing on the wing of an American Airlines plane as they are evacuated after it caught fire while at a gate at Denver International Airport in Denver, Colorado, March 13, 2025.
ಪ್ರಯಾಣಿಕರು ಹೊಗೆ ಕಾಣಿಸಿಕೊಂಡ ವಿಮಾನದಿಂದ ಹೊರಬಂದು ರೆಕ್ಕೆಯ ಮೇಲೆ ನಿಂತಿರುವುದು
Updated on

ಡೆನ್ವರ್: ಅಮೆರಿಕನ್ ಏರ್‌ಲೈನ್ಸ್ ವಿಮಾನ ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ ಬೆಂಕಿ ಕಾಣಿಸಿಕೊಂಡು ಹನ್ನೆರಡು ಮಂದಿ ಪ್ರಯಾಣಿಕರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿರುವ ಘಟನೆ ನಡೆದಿದೆ. ಬೆಂಕಿ ಹೊತ್ತಿಕೊಂಡ ಕೂಡಲೇ ಪ್ರಯಾಣಿಕರು ಬೇಗನೆ ಸ್ಥಳಾಂತರಗೊಳ್ಳಲು ಸ್ಲೈಡ್‌ಗಳನ್ನು ನಿಯೋಜಿಸಲಾಯಿತು.

ಭಾರತೀಯ ಕಾಲಮಾನ ಪ್ರಕಾರ, ನಿನ್ನೆ ಸಾಯಂಕಾಲ ಈ ಘಟನೆ ಸಂಭವಿಸಿದ್ದು, ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಕ್ಸ್ ಖಾತೆ ಪ್ರಕಾರ, ಆಸ್ಪತ್ರೆಗಳಿಗೆ ಸಾಗಿಸಲಾದ ಎಲ್ಲಾ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕೊಲೊರಾಡೋ ಸ್ಪ್ರಿಂಗ್ಸ್ ವಿಮಾನ ನಿಲ್ದಾಣದಿಂದ ಡಲ್ಲಾಸ್ ಫೋರ್ಟ್ ವರ್ತ್‌ಗೆ ತೆರಳುತ್ತಿದ್ದ ವಿಮಾನ ಸಂಖ್ಯೆ 1006, ಎಂಜಿನ್ ನಲ್ಲಿ ಶಬ್ದ ಉಂಟಾಗಿ ಡೆನ್ವರ್‌ಗೆ ತಿರುಗಿಸಲ್ಪಟ್ಟಿತು. ಸಂಜೆ 5:15 ರ ಸುಮಾರಿಗೆ ಸುರಕ್ಷಿತವಾಗಿ ಇಳಿಯಿತು, ಬೋಯಿಂಗ್ 737-800 ನ ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡಿತು ಎಂದು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಹೇಳಿಕೆಯಲ್ಲಿ ತಿಳಿಸಿದೆ.

ಹೊಗೆ ವಿಮಾನವನ್ನು ಸುತ್ತುವರೆದಿದ್ದು, ಪ್ರಯಾಣಿಕರು ಸ್ಲೈಡ್‌ಗಳನ್ನು ಬಳಸಿ ಹೊರಬಂದರು. ಗೇಟ್‌ಗೆ ಟ್ಯಾಕ್ಸಿ ಮಾಡಿದ ನಂತರ ವಿಮಾನವು ಎಂಜಿನ್-ಸಂಬಂಧಿತ ಸಮಸ್ಯೆಯನ್ನು ಅನುಭವಿಸಿದೆ. ವಿಮಾನವು ಯಾವಾಗ ಬೆಂಕಿಗೆ ಆಹುತಿಯಾಯಿತು ಎಂಬುದರ ಕುರಿತು ತಕ್ಷಣದ ಸ್ಪಷ್ಟೀಕರಣವಿಲ್ಲ.

172 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಟರ್ಮಿನಲ್‌ಗೆ ಕರೆದೊಯ್ಯಲಾಯಿತು. ವಿಮಾನದಲ್ಲಿರುವ ಪ್ರತಿಯೊಬ್ಬರ ಸುರಕ್ಷತೆಯನ್ನು ಆದ್ಯತೆಯಾಗಿಟ್ಟುಕೊಂಡು ತ್ವರಿತ ಮತ್ತು ನಿರ್ಣಾಯಕ ಕ್ರಮ ಕೈಗೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಅಮೆರಿಕನ್ ಏರ್ ಲೈನ್ಸ್ ಹೇಳಿದೆ.

ಸಂಜೆಯ ಹೊತ್ತಿಗೆ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು ಎಂದು ವಿಮಾನ ನಿಲ್ದಾಣದ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ಎಫ್ ಎಎ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com