
ಗಾಜಾ ಪಟ್ಟಿ: ಗಾಜಾ ಪಟ್ಟಿಯ ಉತ್ತರ ಭಾಗದಲ್ಲಿರುವ ಬೀಟ್ ಲಾಹಿಯಾ ಪಟ್ಟಣದ ಮೇಲೆ ಶನಿವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಲವು ಪತ್ರಕರ್ತರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ನಾಗರಿಕ ರಕ್ಷಣಾ ಸಂಸ್ಥೆ ಹೇಳಿದೆ.
ವಾಹನದ ಮೇಲೆ ಇಸ್ರೇಲ್ ಡ್ರೋನ್ ದಾಳಿ ನಡೆಸಿದ್ದು, ದಾಳಿಯಲ್ಲಿ "ಹಲವು ಪತ್ರಕರ್ತರು ಮತ್ತು ಅಲ್-ಖೈರ್ ಚಾರಿಟೇಬಲ್ ಆರ್ಗನೈಸೇಶನ್‌ನ ಹಲವಾರು ಕಾರ್ಮಿಕರು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ" ಎಂದು ಗಾಜಾ ನಾಗರಿಕ ರಕ್ಷಣಾ ಸಂಸ್ಥೆಯ ವಕ್ತಾರ ಮಹಮೂದ್ ಬಸ್ಸಲ್ AFP ಗೆ ತಿಳಿಸಿದ್ದಾರೆ.
ಹಮಾಸ್ ಈ ದಾಳಿಯನ್ನು ಖಂಡಿಸಿದ್ದು, ಇಸ್ರೇಲ್ ಗಾಜಾ ಕದನ ವಿರಾಮ ಒಪ್ಪಂದವನ್ನು "ಸ್ಪಷ್ಟವಾಗಿ ಉಲ್ಲಂಘಿಸಿದೆ" ಎಂದು ಆರೋಪಿಸಿದೆ.
ಹಮಾಸ್ ವಕ್ತಾರ ಹಜೆಮ್ ಖಾಸೆಮ್ ಈ ಘಟನೆಯನ್ನು "ಭಯಾನಕ ಹತ್ಯಾಕಾಂಡ" ಎಂದು ಟೀಕಿಸಿದ್ದಾರೆ.
"ಇಸ್ರೇಲ್, ಉತ್ತರ ಗಾಜಾ ಪಟ್ಟಿಯಲ್ಲಿ ಪತ್ರಕರ್ತರು ಮತ್ತು ಮಾನವೀಯ ಕಾರ್ಯಕರ್ತರ ಗುಂಪನ್ನು ಗುರಿಯಾಗಿಸಿಕೊಂಡು ಭಯಾನಕ ಹತ್ಯಾಕಾಂಡ ನಡೆಸಿದೆ", ಇದು ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಖಾಸೆಮ್ ಹೇಳಿದ್ದಾರೆ.
ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ದಾಳಿಗೆ ಒಬ್ಬ ಬಲಿ
ದಕ್ಷಿಣ ಲೆಬನಾನ್‌ನಲ್ಲಿ ವಾಹನವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಶನಿವಾರ ನಡೆಸಿದ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ತಿಳಿಸಿರುವುದಾಗಿ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
"ಬುರ್ಜ್ ಅಲ್-ಮುಲುಕ್ ಪಟ್ಟಣದಲ್ಲಿ(ಇಸ್ರೇಲಿ ಗಡಿಯ ಬಳಿ) ಕಾರಿನ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಒಬ್ಬ ನಾಗರಿಕ ಸಾವನ್ನಪ್ಪಿದ್ದಾನೆ" ಎಂದು ಸಚಿವಾಲಯ ಹೇಳಿದೆ.
ಕಳೆದ ನವೆಂಬರ್ 27 ರಂದು ಗಾಜಾದಲ್ಲಿ 15 ತಿಂಗಳ ಸಂಘರ್ಷದ ಬಳಿಕ ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಕದನ ವಿರಾಮ ಘೋಷಣೆಯಾಗಿತ್ತು.
Advertisement