ಕೆನಡಾ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಅಧಿಕಾರ ಸ್ವೀಕಾರ: ಅಮೆರಿಕದ ಸುಂಕ ಸಮರ ಸೇರಿದಂತೆ ಹಲವು ಸವಾಲು!

ಅಮೆರಿಕದ ವ್ಯಾಪಾರ ಯುದ್ಧ ಮತ್ತು ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡುವ ಟ್ರಂಪ್ ಅವರ ಹೇಳಿಕೆಗಳು ಕೆನಡಿಯನ್ನರನ್ನು ಕೆರಳಿಸಿವೆ.
Mark Carney is sworn in as prime minister during a ceremony at Rideau Hall in Ottawa on Friday, March 14, 2025.
ಒಟ್ಟಾವಾದ ರಿಡೋ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾರ್ಕ್ ಕಾರ್ನಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
Updated on

ಟೊರೊಂಟೊ: ಕೆನಡಾದ ನೂತನ ಪ್ರಧಾನ ಮಂತ್ರಿಯಾಗಿ ಮಾರ್ಕ್ ಕಾರ್ನಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಸಮರ, ಸ್ವಾಧೀನದ ಬೆದರಿಕೆ ಮತ್ತು ನಿರೀಕ್ಷಿತ ಫೆಡರಲ್ ಚುನಾವಣೆಯ ಸಂದರ್ಭದಲ್ಲಿ ದೇಶವನ್ನು ಸಮಸ್ಯೆಗಳಿಂದ ಹೊರತರುವ ಸಮರ್ಥವಾಗಿ ಮುನ್ನಡೆಸುವ ಸವಾಲು ಮಾರ್ಕ್ ಕಾರ್ನಿ ಅವರ ಮೇಲಿದೆ.

ಕಳೆದ ಜನವರಿ ತಿಂಗಳಲ್ಲಿ ರಾಜೀನಾಮೆ ಘೋಷಿಸಿ ಲಿಬರಲ್ ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಅಧಿಕಾರದಲ್ಲಿದ್ದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸ್ಥಾನವನ್ನು 59 ವರ್ಷದ ಮಾರ್ಕ್ ಕಾರ್ನಿ ವಹಿಸಿಕೊಂಡಿದ್ದಾರೆ. ಮುಂಬರುವ ದಿನಗಳು ಅಥವಾ ವಾರಗಳಲ್ಲಿ ಕಾರ್ನಿ ಸಾರ್ವತ್ರಿಕ ಚುನಾವಣೆಗೆ ಒತ್ತು ನೀಡುವ ಸಾಧ್ಯತೆಯಿದೆ,

ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಆರ್ಥಿಕ ಯುದ್ಧವನ್ನು ಘೋಷಿಸುವವರೆಗೆ ಮತ್ತು ಇಡೀ ದೇಶವನ್ನು 51 ನೇ ರಾಜ್ಯವಾಗಿ ಸ್ವಾಧೀನಪಡಿಸಿಕೊಳ್ಳುವ ಬೆದರಿಕೆ ಹಾಕುವವರೆಗೆ ಆಡಳಿತ ಲಿಬರಲ್ ಪಕ್ಷವು ಈ ವರ್ಷ ಚುನಾವಣಾ ಸೋಲಿಗೆ ಸಿದ್ಧವಾಗಿರುವಂತೆ ಕಂಡುಬಂದಿತ್ತು. ಇದೀಗ ಅಧಿಕಾರ ವಹಿಸಿಕೊಂಡಿರುವ ಮಾರ್ಕ್ ಕಾರ್ನಿ ಮತ್ತು ಅವರ ಪಕ್ಷವು ಮೇಲುಗೈ ಸಾಧಿಸಬಹುದು ಎಂದು ಅಂದಾಜಿಸಲಾಗಿದೆ.

ಡೊನಾಲ್ಡ್ ಟ್ರಂಪ್ ಅವರು ಕೆನಡಾದ ಸಾರ್ವಭೌಮತ್ವಕ್ಕೆ ಗೌರವ ತೋರಿಸಿದರೆ ಮತ್ತು ವ್ಯಾಪಾರಕ್ಕೆ ಹೆಚ್ಚು ಸಮಗ್ರವಾದ ಒಂದು ಸಾಮಾನ್ಯ ವಿಧಾನವನ್ನು ತರಲು ಸಿದ್ಧರಿದ್ದರೆ ಅವರನ್ನು ಭೇಟಿ ಮಾಡಿ ಮಾತುಕತೆಗೆ ಸಿದ್ಧವಿದ್ದೇನೆ ಎಂದು ಕಾರ್ನಿ ಹೇಳಿದ್ದಾರೆ.

ಕೆನಡಾದ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ಶೇಕಡಾ 25ರಷ್ಟು ಸುಂಕಗಳನ್ನು ಅಮೆರಿಕ ವಿಧಿಸಿದೆ. ಏಪ್ರಿಲ್ 2 ರಂದು ಕೆನಡಾದ ಎಲ್ಲಾ ಉತ್ಪನ್ನಗಳ ಮೇಲೆ ಸುಂಕಗಳನ್ನು ವಿಧಿಸುವ ಬೆದರಿಕೆ ಹಾಕುತ್ತಿದ್ದಾರೆ. ತಮ್ಮ ಸ್ವಾಧೀನ ಬೆದರಿಕೆಗಳಲ್ಲಿ ಆರ್ಥಿಕ ಬಲವಂತವನ್ನು ಬೆದರಿಸಿದ್ದಾರೆ, ಗಡಿಯು ಒಂದು ಕಾಲ್ಪನಿಕ ರೇಖೆ ಎಂದು ಅಮೆರಿಕ ಹೇಳುತ್ತಿದೆ.

ಅಮೆರಿಕದ ವ್ಯಾಪಾರ ಯುದ್ಧ ಮತ್ತು ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡುವ ಟ್ರಂಪ್ ಅವರ ಹೇಳಿಕೆಗಳು ಕೆನಡಿಯನ್ನರನ್ನು ಕೆರಳಿಸಿವೆ.

Mark Carney is sworn in as prime minister during a ceremony at Rideau Hall in Ottawa on Friday, March 14, 2025.
ಕೆನಡಾದ ಮುಂದಿನ ಪ್ರಧಾನಿ Mark Carney ಯಾರು, ಅವರ ಹಿನ್ನೆಲೆಯೇನು?

ಮಾರ್ಕ್ ಕಾರ್ನಿ

2008 ರಿಂದ ಬ್ಯಾಂಕ್ ಆಫ್ ಕೆನಡಾದ ಮುಖ್ಯಸ್ಥರಾಗಿ ಆರ್ಥಿಕ ಬಿಕ್ಕಟ್ಟುಗಳನ್ನು ನಿಭಾಯಿಸಿದ ಮಾರ್ಕ್ ಕಾರ್ನಿ, ನಂತರ 2013 ರಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ ನ್ನು ನಡೆಸಿದ ಮೊದಲ ಬೇರೆ ದೇಶದ ನಾಗರಿಕರಾಗಿದ್ದರು. ಯುಕೆಯಲ್ಲಿ ಬ್ರೆಕ್ಸಿಟ್‌ನ ಕೆಟ್ಟ ಪರಿಣಾಮಗಳನ್ನು ನಿರ್ವಹಿಸಲು ಸಹಾಯ ಮಾಡಿದರು. ಈಗ ಡೊನಾಲ್ಡ್ ಟ್ರಂಪ್ ತಂದ ವ್ಯಾಪಾರ ಯುದ್ಧದ ಸಂದರ್ಭದಲ್ಲಿ ಕೆನಡಾವನ್ನು ಮುನ್ನಡೆಸಲು ಪ್ರಯತ್ನಿಸುತ್ತಾರೆ.

ರಾಜಕೀಯದಲ್ಲಿ ಯಾವುದೇ ಅನುಭವವಿಲ್ಲದ ಮಾಜಿ ಗೋಲ್ಡ್‌ಮನ್ ಸ್ಯಾಚ್ಸ್ ಕಾರ್ಯನಿರ್ವಾಹಕ ಮಾರ್ಕ್ ಕಾರ್ನಿ ಕೆನಡಾದ 24 ನೇ ಪ್ರಧಾನಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com