ನ್ಯಾಯಾಧೀಶರ ಆದೇಶದ ಹೊರತಾಗಿಯೂ ಟ್ರಂಪ್ ಆಡಳಿತದಿಂದ ನೂರಾರು ವಲಸಿಗರ ಗಡಿಪಾರು!

ಯುಎಸ್ ಜಿಲ್ಲಾ ನ್ಯಾಯಾಧೀಶರಾದ ಜೇಮ್ಸ್ ಇ. ಬೋಸ್ಬರ್ಗ್ ಶನಿವಾರ ಗಡೀಪಾರು ಮಾಡುವಿಕೆಯನ್ನು ತಾತ್ಕಾಲಿಕವಾಗಿ ತಡೆಯುವ ಆದೇಶವನ್ನು ಹೊರಡಿಸಿದರು.
In this photo provided by El Salvador's presidential press office, prison guards transfer deportees from the US, alleged to be Venezuelan gang members, to the Terrorism Confinement Center in Tecoluca, El Salvador.
ವೆನೆಜುವೆಲಾದ ಗ್ಯಾಂಗ್ ಸದಸ್ಯರು ಎಂದು ಆರೋಪಿಸಲಾದ ಅಮೆರಿಕದಿಂದ ಗಡೀಪಾರು ಮಾಡಲ್ಪಟ್ಟವರನ್ನು ಎಲ್ ಸಾಲ್ವಡಾರ್‌ನ ಟೆಕೊಲುಕಾದಲ್ಲಿರುವ ಭಯೋತ್ಪಾದನಾ ಬಂಧನ ಕೇಂದ್ರಕ್ಕೆ ಜೈಲು ಸಿಬ್ಬಂದಿ ವರ್ಗಾಯಿಸುತ್ತಾರೆ.
Updated on

ವಾಷಿಂಗ್ಟನ್: 18 ನೇ ಶತಮಾನದ ಯುದ್ಧಕಾಲದ ಘೋಷಣೆಯಡಿಯಲ್ಲಿ ವೆನೆಜುವೆಲಾದ ಗ್ಯಾಂಗ್ ಸದಸ್ಯರನ್ನು ಗುರಿಯಾಗಿಸಿಕೊಂಡು ಗಡಿಪಾರು ಮಾಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸುವ ಆದೇಶವನ್ನು ಫೆಡರಲ್ ನ್ಯಾಯಾಧೀಶರು ಹೊರಡಿಸಿದ್ದರೂ ಕೂಡ ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತವು ನೂರಾರು ವಲಸಿಗರನ್ನು ಎಲ್ ಸಾಲ್ವಡಾರ್‌ಗೆ ವರ್ಗಾಯಿಸಿದೆ.

ಯುಎಸ್ ಜಿಲ್ಲಾ ನ್ಯಾಯಾಧೀಶರಾದ ಜೇಮ್ಸ್ ಇ. ಬೋಸ್ಬರ್ಗ್ ಶನಿವಾರ ಗಡೀಪಾರು ಮಾಡುವಿಕೆಯನ್ನು ತಾತ್ಕಾಲಿಕವಾಗಿ ತಡೆಯುವ ಆದೇಶವನ್ನು ಹೊರಡಿಸಿದರು, ಈ ವೇಳೆ ವಕೀಲರು ಅವರಿಗೆ ಈಗಾಗಲೇ ಎರಡು ವಲಸಿಗರನ್ನು ಹೊತ್ತೊಯ್ಯುತ್ತಿದ್ದು ಒಂದು ಎಲ್ ಸಾಲ್ವಡಾರ್‌ಗೆ ಮತ್ತು ಇನ್ನೊಂದು ಹೊಂಡುರಾಸ್‌ ಕಡೆಗೆ ಹೋಗುತ್ತಿವೆ ಎಂದರು. ಆಗ ಬೋಸ್ಬರ್ಗ್ ಮೌಖಿಕವಾಗಿ ವಿಮಾನಗಳನ್ನು ತಿರುಗಿಸಲು ಆದೇಶಿಸಿದರು.

ವೈಟ್ ಹೌಸ್ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ನಿನ್ನೆ ತಮ್ಮ ಹೇಳಿಕೆಯಲ್ಲಿ, ಟ್ರಂಪ್ ಆಡಳಿತವು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಿದೆಯೇ ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದರು: ಡೊನಾಲ್ಡ್ ಟ್ರಂಪ್ ಆಡಳಿತವು ನ್ಯಾಯಾಲಯದ ಆದೇಶವನ್ನು 'ಪಾಲಿಸಲು ನಿರಾಕರಿಸಲಿಲ್ಲ'. ಯಾವುದೇ ಕಾನೂನುಬದ್ಧ ಆಧಾರವಿಲ್ಲದ ಆದೇಶವನ್ನು ಭಯೋತ್ಪಾದಕ ಟಿಡಿಎ ವಿದೇಶಿಯರನ್ನು ಈಗಾಗಲೇ ಯುಎಸ್ ಪ್ರದೇಶದಿಂದ ತೆಗೆದುಹಾಕಿದ ನಂತರ ಹೊರಡಿಸಲಾಗಿದೆ.

ಭಾನುವಾರ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯಲ್ಲಿ, ಬೋಸ್ಬರ್ಗ್ ಅವರ ನಿರ್ಧಾರ ವಿರುದ್ಧ ಮೇಲ್ಮನವಿ ಸಲ್ಲಿಸಿರುವ ನ್ಯಾಯಾಂಗ ಇಲಾಖೆ, ಅವರ ನಿರ್ಧಾರವನ್ನು ರದ್ದುಗೊಳಿಸದಿದ್ದರೆ ಅವರು ನಿರ್ಬಂಧಿಸಿ ಟ್ರಂಪ್ ಆಡಳಿತ ಮಾಡಿರುವ ಘೋಷಣೆಯನ್ನು ಮತ್ತಷ್ಟು ಗಡಿಪಾರು ಮಾಡಲು ಬಳಸುವುದಿಲ್ಲ ಎಂದು ಹೇಳಿದೆ.

1812 ರ ಯುದ್ಧ ಮತ್ತು 1 ಮತ್ತು 2ನೇ ವಿಶ್ವಯುದ್ಧ ಕಾಲದ ಅಧಿಕಾರವನ್ನು ಚಲಾಯಿಸಿ ಯಾವುದೇ ವಿಚಾರಣೆ ಇಲ್ಲದೆ ವೆನೆಜುವೆಲಾ ನಾಗರಿಕರನ್ನು ಗಡಿಪಾರು ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ಫೆಡರಲ್ ನ್ಯಾಯಾಧೀಶರು ತಡೆ ನೀಡಿದ್ದರು. ಅಲ್ಲದೆ ಅವರನ್ನು ಗಡೀಪಾರು ಮಾಡುವ ವಿಮಾನಗಳು ಹಾರಾಟ ನಡೆಸುತ್ತಿದ್ದರೆ ಕೂಡಲೇ ಹಿಂತಿರುಗಬೇಕೆಂದು ಆದೇಶಿಸಿದ್ದಾರೆ.

ಟ್ರೆನ್ ಡಿ ಅರಾಗುವಾ ಎಂದು ಕರೆಯಲ್ಪಡುವ ಅಂತಾರಾಷ್ಟ್ರೀಯ ಗ್ಯಾಂಗ್ ನಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ವೆನೆಜುವೆಲಾ ನಾಗರಿಕರನ್ನು ತ್ವರಿತವಾಗಿ ಗಡೀಪಾರು ಮಾಡಲು ಏಲಿಯನ್ ವೈರಿಸ್ ಕಾಯ್ದೆಗೆ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದರು. ಎರಡನೇ ಮಹಾಯುದ್ಧ ಬಳಿಕ ಈ ಕಾಯ್ದೆಯನ್ನು ಬಳಕೆ ಮಾಡಿದ್ದು ಇದೇ ಮೊದಲಾಗಿದೆ.

In this photo provided by El Salvador's presidential press office, prison guards transfer deportees from the US, alleged to be Venezuelan gang members, to the Terrorism Confinement Center in Tecoluca, El Salvador.
ಟ್ರಂಪ್ ಆಡಳಿತದಲ್ಲಿ ಕೀಳುಮಟ್ಟದ ರಾಜಕೀಯ ಭಾಷಣಗಳು ದುಃಸ್ವಪ್ನವಾಗಿ ಕಾಡಬಹುದು: ಸ್ವಯಂ ಗಡಿಪಾರುಗೊಂಡ ವಿದ್ಯಾರ್ಥಿನಿ ಹೇಳಿಕೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com