ಟೀ ಚೆಲ್ಲಿದ್ದಕ್ಕೇ 432 ಕೋಟಿ ರೂ ದಂಡ ಹಾಕಿದ ಕೋರ್ಟ್: ಎಲ್ಲಿ..? ಯಾರಿಗೆ?

ಪ್ರಕರಣದ ವಿಚಾರಣೆ ವೆಚ್ಚ, ಬಡ್ಡಿ, ವಕೀಲರ ಶುಲ್ಕ ಸೇರಿದರೆ ಈ ಪರಿಹಾರ ಮೊತ್ತ $60 ಮಿಲಿಯನ್‌ಗಿಂತಲೂ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.
Starbucks
ಸ್ಚಾರ್ ಬಕ್ಸ್
Updated on

ಲಾಸ್ ಏಂಜಲೀಸ್: ಟೀ ಪಾರ್ಸೆಲ್ ನೀಡುವಾಗ ಗ್ರಾಹಕನ ಮೇಲೆ ಟೀ ಬಿದ್ದ ಪರಿಣಾಮ ಟೀ ತಯಾರಿಕಾ ಸಂಸ್ಥೆಗೆ ಕೋರ್ಟ್ ಬರೊಬ್ಬರಿ 50 ಮಿಲಿಯನ್ ಡಾಲರ್ (4,32,81,55,000) ದಂಡ ಹೇರಿದ ಅಚ್ಚರಿ ಘಟನೆ ವರದಿಯಾಗಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಡ್ರೈವ್-ಥ್ರೂನಲ್ಲಿ ಗ್ರಾಹಕನಿಗೆ ಟೀ ಪಾರ್ಸೆಲ್ ನೀಡುವಾಗ ಅಜಾಗರೂಕವಾಗಿ ವರ್ತಿಸಿ ಬಿಸಿ ಚಹಾ ಆತನ ಮೇಲೆ ಬೀಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಚಹಾ ತಯಾರಿಕಾ ಸಂಸ್ಥೆ Starbucks ಗೆ 50 ಮಿಲಿಯನ್ ಡಾಲರ್ ದಂಡ ಹೇರಲಾಗಿದೆ ಎನ್ನಲಾಗಿದೆ.

ಈ ಕುರಿತು ರಾಷ್ಟ್ರೀಯ ಸುದ್ದಿ ವಾಹಿನಿ ವರದಿ ಮಾಡಿದ್ದು, ಬಿಸಿ ಚಹಾ ಮೇಲೆ ಬಿದ್ದು ಸುಟ್ಟುಕೊಂಡ ಗ್ರಾಹಕನಿಗೆ ಸ್ಟಾರ್‌ಬಕ್ಸ್‌ ಸಂಸ್ಥೆ 50 ಮಿಲಿಯನ್ ಡಾಲರ್ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.

Starbucks
ಸೈನಿಕರ ಎದೆನಡುಗಿಸಿದ ಬಲೂಚ್ ಆರ್ಮಿ: ಪಾಕ್ ಸೇನೆ ತೊರೆದು ದೇಶ ಬಿಟ್ಟು ಓಡಿಹೋದ 2500ಕ್ಕೂ ಹೆಚ್ಚು ಯೋಧರು!

ಏನಿದು ಘಟನೆ?

ಫೆಬ್ರವರಿ 2020 ರಲ್ಲಿ ಮೈಕೆಲ್ ಗಾರ್ಸಿಯಾ ಎಂಬುವವರು ಕ್ಯಾಲಿಫೋರ್ನಿಯಾದ ಡ್ರೈವ್-ಥ್ರೂನಲ್ಲಿರುವ ಸ್ಟಾರ್‌ಬಕ್ಸ್‌ ಕೆಫೆಗೆ ಆಗಮಿಸಿದ್ದರು. ಈ ವೇಳೆ ಅವರು ಮೂರು ಸೂಪರ್-ಸೈಜ್ ಚಹಾ ಆರ್ಡರ್ ಮಾಡಿದ್ದರು. ಆರ್ಡರ್ ಪಡೆದ ಸ್ಟಾರ್ ಬಕ್ಸ್ ಮಹಿಳಾ ಸಿಬ್ಬಂದಿ ಮೂರು ಸೂಪರ್-ಸೈಜ್ ಚಹಾ ಕಪ್ ಗಳನ್ನು ಒಂದು ಟ್ರೇನಲ್ಲಿಟ್ಟುಕೊಂಡು ಮೈಕೆಲ್ ಗಾರ್ಸಿಯಾರ ಕಾರಿನ ಕಿಟಕಿಯೊಳಗೆ ನೀಡಿದ್ದಾರೆ. ಈ ವೇಳೆ ಚಹಾ ಕಪ್ ಕಾರಿಗೆ ತಗುಲಿ ನೋಡ ನೋಡುತ್ತಲೇ ಬಿಸಿ ಬಿಸಿ ಚಹಾ ಅವರ ಕಾಲಿನ ಮೇಲೆ ಬಿದ್ದಿದೆ. ಈ ವೇಳೆ ಮೈಕೆಲ್ ರ ಮರ್ಮಾಂಗ, ತೊಡೆಸಂದು ಮತ್ತು ಒಳ ತೊಡೆಗಳಿಗೆ ಮೂರನೇ ಡಿಗ್ರಿ ಸುಟ್ಟಗಾಯಗಳಿಗೆ ಕಾರಣವಾಗಿದೆ..

ಈ ಘಟನೆ ಬಳಿಕ ಮೈಕೆಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ತುಂಬಾ ಆಳವಾಗಿ ಸುಟ್ಟಗಾಯಗಳಾಗಿದ್ದರಿಂದ ಮೈಕೆಲ್ ಅವರಿಗೆ ಬಹು ಚರ್ಮದ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ನಂತರ, ಮೈಕೆಲ್ ಐದು ವರ್ಷಗಳ ಕಾಲ ಸುಟ್ಟಗಾಯಗಳಿಂದ ಉಂಟಾದ ವಿರೂಪ, ನೋವು, ಅಪಸಾಮಾನ್ಯ ಕ್ರಿಯೆ ಮತ್ತು ಮಾನಸಿಕ ಹಾನಿಯೊಂದಿಗೆ ಜೀವನ ನಡೆಸಿದ್ದಾರೆ ಎಂದು ಮೈಕಲ್ ಪರ ವಕೀಲರು ಎಂದು ಟ್ರಯಲ್ ಲಾಯರ್ಸ್ ಫಾರ್ ಜಸ್ಟೀಸ್‌ನ ವಾದಿಸಿದ್ದಾರೆ.

ದೂರು ದಾಖಲು

ಇನ್ನು ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಸಂತ್ರಸ್ಥ ಮೈಕೆಲ್ ದೂರು ದಾಖಲಿಸಿದ್ದು, ಲಾಸ್ ಏಂಜಲೀಸ್‌ ಕೋರ್ಟ್ ನಲ್ಲಿ ಕಳೆದ 5 ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆದಿತ್ತು. ಆರಂಭದಲ್ಲಿ ಸ್ಚಾರ್ ಬಕ್ಸ್ ಸಂಸ್ಥೆ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಮೈಕೆಲ್ ಗೆ $30 ಮಿಲಿಯನ್‌ ಡಾಲರ್ ಹಣ ನೀಡಲು ನಿರಾಕರಿಸಿತ್ತು. ಇದೀಗ ಬರೊಬ್ಬರಿ 5 ವರ್ಷಗಳ ಬಳಿಕ ಮೈಕೆಲ್ ಪರವಾಗಿ ತೀರ್ಪು ಬಂದಿದ್ದು, ಸ್ಟಾರ್ ಬಕ್ಸ್ ಸಂಸ್ಥೆಗೆ ಕೋರ್ಟ್ ಇದೀಗ 30 ಅಲ್ಲ ಬರೊಬ್ಬರಿ 50 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 432 ಕೋಟಿ 81 ಲಕ್ಷದ 55 ಸಾವಿರ ರೂ ಪರಿಹಾರ ನೀಡುವಂತೆ ಆದೇಶಿಸಿದೆ.

ಅಂತೆಯೇ ಪ್ರಕರಣದ ವಿಚಾರಣೆ ವೆಚ್ಚ, ಬಡ್ಡಿ, ವಕೀಲರ ಶುಲ್ಕ ಸೇರಿದರೆ ಈ ಪರಿಹಾರ ಮೊತ್ತ $60 ಮಿಲಿಯನ್‌ಗಿಂತಲೂ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

ಧನ್ಯವಾದ ಹೇಳಿದ ಸಂತ್ರಸ್ಥ

ಇನ್ನು ಕೋರ್ಟ್ ತೀರ್ಪಿಗೆ ಸಂತಸ ವ್ಯಕ್ತಪಡಿಸಿರುವ ಸಂತ್ರಸ್ಥ ಮೈಕೆಲ್, ತನ್ನ ಪರವಾಗಿ ನಿಂತಿದ್ದಕ್ಕಾಗಿ ಕೋರ್ಟ್ ಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.

ಮೇಲ್ಮನವಿಗೆ ಸ್ಟಾರ್ ಬಕ್ಸ್ ಮುಂದು

ಇನ್ನು ಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ಸ್ಟಾರ್ ಬಕ್ಸ್ ಸಂಸ್ಥೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಘೋಷಣೆ ಮಾಡಿದೆ. "ಗಾರ್ಸಿಯಾ ಅವರೊಂದಿಗೆ ನಾವು ಸಹಾನುಭೂತಿ ಹೊಂದಿದ್ದೇವೆ, ಆದರೆ ಈ ಘಟನೆಗೆ ನಾವು ತಪ್ಪಿತಸ್ಥರು ಎಂಬ ತೀರ್ಪುಗಾರರ ನಿರ್ಧಾರವನ್ನು ನಾವು ಒಪ್ಪುವುದಿಲ್ಲ. ಪರಿಹಾರ ಮೊತ್ತ ಅತ್ಯಂತ ದುಬಾರಿಯಾಗಿದ್ದು, ಉನ್ನತ ಕೋರ್ಟ್ ನಲ್ಲಿ ನಮಗೆ ನ್ಯಾಯಾ ದೊರೆಯುವ ವಿಶ್ವಾಸವಿದೆ. ಬಿಸಿ ಪಾನೀಯಗಳ ನಿರ್ವಹಣೆ ಸೇರಿದಂತೆ ನಮ್ಮ ಅಂಗಡಿಗಳಲ್ಲಿ ನಾವು ಯಾವಾಗಲೂ ಅತ್ಯುನ್ನತ ಸುರಕ್ಷತಾ ಮಾನದಂಡಗಳಿಗೆ ಬದ್ಧರಾಗಿದ್ದೇವೆ ಎಂದು ಸಂಸ್ಥೆಯ ಕಾರ್ಪೊರೇಟ್ ಸಂವಹನ ನಿರ್ದೇಶಕಿ ಜೇಸಿ ಆಂಡರ್ಸನ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com