
ಅಮೆರಿಕಾ: ವಿಶ್ವದ ದೊಡ್ಡಣ್ಣ ವರ್ಜೀನಿಯಾದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ತಂದೆ ಮತ್ತು ಮಗಳು ದಾರುಣವಾಗಿ ಮೃತಪಟ್ಟಿದ್ದಾರೆ.
ವರ್ಜೀನಿಯಾದಲ್ಲಿ ಅಂಗಡಿಯೊಂದರೊಳಗೆ ದುಷ್ಕರ್ಮಿಯೊಬ್ಬ ಏಕಾ ಏಕಿ ಗುಂಡಿನ ದಾಳಿ ನಡೆಸಿದ್ದಾನೆ ಇದರಿಂದ ಗುಜರಾತ್ ಮೂಲದ ತಂದೆ-ಮಗಳು ಸಾವನ್ನಪ್ಪಿದ್ದಾರೆ. ಮೃತರನ್ನು ಪ್ರದೀಪ್‌ಭಾಯ್ ಪಟೇಲ್ (56) ಮತ್ತು ಅವರ 24 ವರ್ಷದ ಮಗಳು ಉರ್ವಿ ಪಟೇಲ್ ಎಂದು ಗುರುತಿಸವಾಗಿದೆ.
ಅಕೋಮ್ಯಾಕ್ ಕೌಂಟಿಯಲ್ಲಿ ಬಂದೂಕುಧಾರಿಯೊಬ್ಬ ದಾಳಿ ನಡೆಸಿದ್ದಾನೆ. ಇವರು ಗುಜರಾತ್‌ನ ಮೆಹ್ಸಾನಾದ ಕನೋಡಾ ಗ್ರಾಮದವರಾಗಿದ್ದು, ಪಾಟಿದಾರ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಗುಂಡೇಟಿನಿಂದ ಪ್ರದೀಪ್ ಬಾಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರ ಮಗಳು ಚಿಕಿತ್ಸೆಯ ಸಮಯದಲ್ಲಿ ಕೊನೆಯುಸಿರೆಳೆದಿದ್ದಾಳೆ, ಅಮೆರಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪ್ರದೀಪ್‌ಭಾಯ್ ಪಟೇಲ್ ಮತ್ತು ಅವರ ಮಗಳು ಉರ್ವಿ ಪಟೇಲ್ ವರ್ಜೀನಿಯಾದ ಅಕೋಮ್ಯಾಕ್ ಕೌಂಟಿಯಲ್ಲಿರುವ ಅಂಗಡಿಯಲ್ಲಿದ್ದರು. ಅಷ್ಟರಲ್ಲಿ, ಒಬ್ಬ ಬಂದೂಕುಧಾರಿ ಅಂಗಡಿಯೊಳಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದ. ತಲೆಗೆ ಗುಂಡು ತಗುಲಿ ಪ್ರದೀಪ್‌ಭಾಯ್ ಸ್ಥಳದಲ್ಲೇ ಮೃತಪಟ್ಟರು. ಏತನ್ಮಧ್ಯೆ, ಅವರ ಮಗಳು ಉರ್ವಿ ಕೂಡ 36 ಗಂಟೆಗಳ ಚಿಕಿತ್ಸೆಯ ನಂತರ ನಿಧನರಾದರು.
ಮಾರ್ಚ್ 20 ರಂದು ಬೆಳಗ್ಗೆ 5:30 ಕ್ಕೆ, ಕೊಲೆ ಆರೋಪಿ ಮದ್ಯ ಖರೀದಿಸಲು ಅಂಗಡಿಗೆ ಬಂದಿದ್ದ. ಇದಾದ ನಂತರ, ಅಂಗಡಿಯನ್ನು ರಾತ್ರಿ ಏಕೆ ತೆರೆಯಲಿಲ್ಲ ಎಂದು ತಂದೆಯೊಂದಿಗೆ ಜಗಳವಾಡಿ ತಂದೆ ಮತ್ತು ಮಗಳು ಇಬ್ಬರ ಮೇಲೂ ಗುಂಡು ಹಾರಿಸಿದ್ದಾನೆ. ಪ್ರದೀಪ್ ಪಟೇಲ್, ಅವರ ಪತ್ನಿ ಹಂಸಬೆನ್ ಮತ್ತು ಮಗಳು ಉರ್ವಿ 6 ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದರು.
ತಮ್ಮ ಸಂಬಂಧಿಕರ ಒಡೆತನದ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದರು. ಮೃತ ಪ್ರದೀಪ್ ಕುಮಾರ್‌ಗೆ ಇನ್ನೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬರು ಅಹಮದಾಬಾದ್‌ನಲ್ಲಿದ್ದರೆ, ಇನ್ನೊಬ್ಬರು ಕೆನಡಾದಲ್ಲಿದ್ದಾರೆ. ಪ್ರದೀಪ್ ಮತ್ತು ಉರ್ಮಿ ಸಾವಿನಿಂದ ಕುಟುಂಬ ಸದಸ್ಯರು ಕಣ್ಣೀರು ಹಾಕುತ್ತಿದ್ದಾರೆ.
Advertisement