ಗಾಜಾ: ಇಸ್ರೇಲಿ ದಾಳಿಯಲ್ಲಿ ಹಮಾಸ್‌ನ ಹಿರಿಯ ರಾಜಕೀಯ ನಾಯಕ ಸೇರಿದಂತೆ 19 ಪ್ಯಾಲೆಸ್ಟೀನಿಯನ್ನರ ಸಾವು

ಹಮಾಸ್ ತನ್ನ ರಾಜಕೀಯ ಬ್ಯೂರೋ ಮತ್ತು ಪ್ಯಾಲೆಸ್ಟೀನಿಯನ್ ಸಂಸತ್ತಿನ ಸದಸ್ಯ ಸಲಾಹ್ ಬರ್ದಾವಿಲ್, ದಕ್ಷಿಣ ನಗರ ಖಾನ್ ಯೂನಿಸ್ ಬಳಿ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ
Smoke rises from a building after it was targeted by an Israeli army strike
ಗಾಜಾ ಪಟ್ಟಿಯಲ್ಲಿ ಇಸ್ರೇಲಿ ಸೇನೆ ದಾಳಿ
Updated on

ಡಿಯರ್ ಅಲ್-ಬಲಹ್: ದಕ್ಷಿಣ ಗಾಜಾ ಪಟ್ಟಿಯಾದ್ಯಂತ ಭಾನುವಾರ ರಾತ್ರಿ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ ಹಿರಿಯ ಹಮಾಸ್ ರಾಜಕೀಯ ನಾಯಕ ಸೇರಿದಂತೆ ಕನಿಷ್ಠ 19 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಮಾಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಬಂಡುಕೋರರು ಇಸ್ರೇಲ್ ಮೇಲೆ ಮತ್ತೊಂದು ಕ್ಷಿಪಣಿಯನ್ನು ಉಡಾಯಿಸಿದ್ದಾರೆ.

ಗಾಜಾ ನಗರದಲ್ಲಿ ನಿವಾಸಿಗಳನ್ನು ಸ್ಥಳಾಂತರಿಸುವ ಆದೇಶ ನೀಡಲಾಗಿದೆ. ಕಟ್ಟಡವನ್ನು ಗುರಿಯಾಗಿಸಿಕೊಂಡು ಇಸ್ರೇಲಿ ಸೈನ್ಯದ ದಾಳಿ ನಡೆದಿದೆ. ಇಸ್ರೇಲಿ ಬಾಂಬ್‌ಗಳು ಬೀಳುತ್ತಿದ್ದಂತೆ, ಗಾಯಗೊಂಡ ಮಕ್ಕಳನ್ನು ಗಾಜಾ ಆಸ್ಪತ್ರೆಗೆ ದಾಖಲಿಸಲಾಗಿದೆ. ದಕ್ಷಿಣ ಗಾಜಾದಲ್ಲಿರುವ ಯುರೋಪಿಯನ್ ಮತ್ತು ಕುವೈತ್ ಆಸ್ಪತ್ರೆಗಳಲ್ಲಿ 17 ಶವಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿವೆ. ಸತ್ತವರಲ್ಲಿ ಹಲವಾರು ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ.

ಹಮಾಸ್ ತನ್ನ ರಾಜಕೀಯ ಬ್ಯೂರೋ ಮತ್ತು ಪ್ಯಾಲೆಸ್ಟೀನಿಯನ್ ಸಂಸತ್ತಿನ ಸದಸ್ಯ ಸಲಾಹ್ ಬರ್ದಾವಿಲ್, ದಕ್ಷಿಣ ನಗರ ಖಾನ್ ಯೂನಿಸ್ ಬಳಿ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಅವರ ಪತ್ನಿಯೂ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಬರ್ದಾವಿಲ್ ಗುಂಪಿನ ರಾಜಕೀಯ ವಿಭಾಗದ ಪ್ರಸಿದ್ಧ ಸದಸ್ಯರಾಗಿದ್ದರು.

Smoke rises from a building after it was targeted by an Israeli army strike
Watch | ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್ ಬಾಂಬ್; ಹಮಾಸ್‌ ರಾಜಕೀಯ ಬ್ಯೂರೋ ಸದಸ್ಯ ಬಲಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com