ವಿದೇಶಗಳಿಂದ ಆಮದಾಗುವ ಎಲ್ಲಾ ಕಾರುಗಳ ಮೇಲೆ ಶೇ.25 ರಷ್ಟು ಸುಂಕ: ಡೊನಾಲ್ಡ್ ಟ್ರಂಪ್ ಘೋಷಣೆ

ಕಾರುಗಳನ್ನು ಅಮೆರಿಕದಲ್ಲೇ ನಿರ್ಮಿಸಿದರೆ ಯಾವುದೇ ರೀತಿಯ ಸುಂಕ ವಿಧಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
US president Donald Trump
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ವಿದೇಶಿ ಕಾರು ಹಾಗೂ ಇತರೇ ವಾಹನಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಣೆ ಮಾಡಿದ್ದಾರೆ. ಅಲ್ಲದೇ ಈ ಸುಂಕ ನಿರ್ಧಾರ ಶಾಶ್ವತವಾಗಿರಲಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಕಾರುಗಳನ್ನು ಅಮೆರಿಕದಲ್ಲೇ ನಿರ್ಮಿಸಿದರೆ ಯಾವುದೇ ರೀತಿಯ ಸುಂಕ ವಿಧಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾದ ಬಳಿಕ ಭಾರತ ಸೇರಿದಂತೆ ಕೆಲ ದೇಶಗಳ ಸುಂಕ ನೀತಿ ವಿರುದ್ಧ ಸಮರ ಸಾರಿದ್ದಾರೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರವಾಗಿದ್ದು, ‘ಸುಂಕಗಳ ರಾಜ’ ಎಂದೆಲ್ಲ ಜರಿದಿದ್ದಾರೆ.

ಏಪ್ರಿಲ್‌ 2ರಿಂದ ಸುಂಕ ನೀತಿ ಜಾರಿಯಾಗಲಿದ್ದು, ಏಪ್ರಿಲ್‌ 3ರಿಂದ ಸಂಗ್ರಹ ಪ್ರಾರಂಭವಾಗಲಿದೆ. ಅಮೆರಿಕದ ಈ ನೀತಿಯು ದೇಶಿಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಜೊತೆಗೆ ವಾಹನ ತಯಾರಕರ ಪೂರೈಕೆ ಸರಪಳಿ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಹೇಳಿದ್ದಾರೆ. ಆದ್ರೆ ಟ್ರಂಪ್‌ ಅವರ ಈ ನಿರ್ಧಾರದಿಂದ ಅಮೆರಿಕದ ಗ್ರಾಹಕರು ಹಣದುಬ್ಬರ ಎದುರಿಸಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಉತ್ತರ ಅಮೆರಿಕದ ಮೇಲೆ ಪರಿಣಾಮ ಬೀರುವ ಸುಂಕಗಳಿಂದ ವಾಹನ ತಯಾರಕರಿಗೆ ತಾತ್ಕಾಲಿಕ ವಿನಾಯಿತಿ ನೀಡಿದರು. ಟ್ರಂಪ್‌ವ್ಯಾಪಾರ ಯೋಜನೆಗಳ ಮೇಲಿನ ಅನಿಶ್ಚಿತತೆಯಿಂದ ಆರ್ಥಿಕ ಹಿಂಜರಿತವನ್ನು ಉಂಟುಮಾಡಬಹುದೆಂಬ ಆತಂಕಗಳು ಹಣಕಾಸು ಮಾರುಕಟ್ಟೆಗಳನ್ನು ಅಲುಗಾಡಿಸಿವೆ.

US president Donald Trump
ಸುಂಕ ಸಮರದಲ್ಲಿ ಸೊರಗಲಿದೆ ಜಾಗತಿಕ ವಿತ್ತ ಜಗತ್ತು! (ಹಣಕ್ಲಾಸು)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com