ಬಾಲಕಿ ಮೇಲೆ ಅತ್ಯಾಚಾರ, ಕೈ ಕತ್ತರಿಸಿದ ಸ್ಥಿತಿಯಲ್ಲಿ ಶವ ಪತ್ತೆ; ತಂದೆ ಬಂಧನ

ತನ್ನ ಮಗಳ ನಾಪತ್ತೆ ಬಗ್ಗೆ ಟಿವಿಯಲ್ಲಿ ಕಾಣಿಸಿಕೊಂಡು ಮಾತನಾಡುತ್ತಿದ್ದ ಆಕೆ ತಂದೆಯನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಜೋನ್ಸ್ ಟೊಲೆಡೊ
ಜೋನ್ಸ್ ಟೊಲೆಡೊ
Updated on

ನ್ಯೂಯಾರ್ಕ್: ಅಮೆರಿಕದ ಓಹಿಯೋದಲ್ಲಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದ್ದು, ಕೈಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ ನಿರ್ಜನ ಮನೆಯೊಳಗೆ ಆಕೆಯ ಶವ ಪತ್ತೆಯಾಗಿದೆ.

ತನ್ನ ಮಗಳ ನಾಪತ್ತೆ ಬಗ್ಗೆ ಟಿವಿಯಲ್ಲಿ ಕಾಣಿಸಿಕೊಂಡು ಮಾತನಾಡುತ್ತಿದ್ದ ಆಕೆ ತಂದೆಯನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ನ್ಯೂಯಾರ್ಕ್ ಪೋಸ್ಟ್‌ ವರದಿಯ ಪ್ರಕಾರ, ಕೀಮಾನಿ ಲ್ಯಾಟಿಗ್ ಎಂಬ ಬಾಲಕಿ ನಾಪತ್ತೆಯಾದ ಆರು ದಿನಗಳ ನಂತರ ಆಕೆಯ ಶವ ಸೋಮವಾರ ಟೊಲೆಡೊದಲ್ಲಿನ ಸುಟ್ಟುಹೋದ ಮನೆಯಲ್ಲಿ ಪತ್ತೆಯಾಗಿದೆ. ಆಕೆಯ ಕುಟುಂಬ ವಿವರಿಸಿದ ಪ್ರಕಾರ "ನಾನು ಕೇಳಿದ ಅತ್ಯಂತ ಭಯಾನಕ ಪ್ರಕರಣಗಳಲ್ಲಿ ಇದು ಒಂದು" ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನ್ನ 14 ನೇ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳ ಬಾಕಿ ಇದ್ದಾಗ ಕೀಮಾನಿ ಶವ, ಕೈಗಳನ್ನು ಕತ್ತರಿಸಿದ ಮತ್ತು ತಲೆಯನ್ನು ಸ್ವಲ್ಪ ಕತ್ತರಿಸಿದ ಸ್ಥಿತಿಯಲ್ಲಿ ಖಾಲಿ ಮನೆಯ ಎರಡನೇ ಮಹಡಿಯಲ್ಲಿ ಪತ್ತೆಯಾಗಿದ್ದಾರೆ.

ಕುಟುಂಬ ಸದಸ್ಯರು ಕೀಮಾನಿಯನ್ನು ಹುಡುಕಲು ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಬೇಡಿಕೊಳ್ಳುತ್ತಿರುವಾಗ, ಆಕೆಯ ತಂದೆ ಡಾರ್ನೆಲ್ ಜೋನ್ಸ್ ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಕಾಣಿಸಿಕೊಂಡಿದ್ದು, ಮಾರ್ಚ್ 16 ರ ರಾತ್ರಿ ತನ್ನ ಮಗಳು ಮನೆಯಲ್ಲಿ ಒಬ್ಬಳೆ ಇರಲು ಭಯವಾಗುತ್ತಿದೆ ಎಂದು ಕರೆ ಮಾಡಿ ಹೇಳಿದ್ದಳು. ಇದು ಆಕೆಯೊಂದಿಗಿನ ಕೊನೆಯ ಸಂಭಾಷಣೆ ಎಂದು ಹೇಳಿದ್ದಾರೆ.

ಜೋನ್ಸ್ ಟೊಲೆಡೊ
ಹೈದರಾಬಾದ್: ಅತ್ಯಾಚಾರ ಯತ್ನ; ಚಲಿಸುತ್ತಿದ್ದ ರೈಲಿನಿಂದ ಜಿಗಿದ ಮಹಿಳೆಗೆ ಗಂಭೀರ ಗಾಯ

"ಯಾರೋ ಮನೆಗೆ ನುಗ್ಗಲು ಪ್ರಯತ್ನಿಸುತ್ತಿರುವಂತೆ ತೋರುತ್ತಿತ್ತು. ರಾತ್ರಿ 12:30 ರ ಸುಮಾರಿಗೆ ಮನೆಗೆ ಕಾರು ಚಲಾಯಿಸಿಕೊಂಡು ಬಂದಿರುವುದಾಗಿ ಹೇಳಿದ್ದಳು. ಕೀಮಾನಿ ತನ್ನ ಅಜ್ಜಿ ಡೊರೊಥಿ ಲ್ಯಾಟಿಗ್ ಜೊತೆ ವಾಸಿಸುತ್ತಿದ್ದಳು. ಆದರೆ ಆ ಸಮಯದಲ್ಲಿ ಅಜ್ಜಿ ಮನೆಯಲ್ಲಿ ಇರಲಿಲ್ಲ ಮತ್ತು ಅವರೊಂದಿಗೆ ಎರಡು ನಾಯಿಗಳು ಸಹ ಇದ್ದವು" ಎಂದು ಜೋನ್ಸ್ ತಿಳಿಸಿದ್ದಾರೆ.

ಕೀಮಾನಿ ತಾಯಿ ಟಿಯಾರಾ ಕ್ಯಾಸ್ಟನ್ ಅವರು, ಮಾರ್ಚ್ 15 ರಂದು ಜೋನ್ಸ್, ಬಾಲಕಿಯನ್ನು ತನ್ನ ಮನೆಗೆ ಕರೆತಂದಾಗ ತನ್ನ ಮಗಳನ್ನು ಕೊನೆಯ ಬಾರಿಗೆ ನೋಡಿದೆ ಎಂದು ಹೇಳಿದ್ದಾರೆ.

ಅಜ್ಜಿ ಡೊರೊಥಿ ಲ್ಯಾಟಿಗ್ ಮನೆಗೆ ಬಂದಾಗ, ಮನೆ ಅಸ್ತವ್ಯಸ್ತವಾಗಿರುವುದನ್ನು ಕಂಡಿದ್ದಾರೆ. ಅಲ್ಲದೆ ಹದಿಹರೆಯದ ಬಾಲಕಿಯ ಒಳ ಉಡುಪುಗಳು ಸೋಫಾದ ಪಕ್ಕದಲ್ಲಿ ಮತ್ತು ಅವಳ ಪೈಜಾಮಾಗಳು ಊಟದ ಕೋಣೆಯ ನೆಲದ ಮೇಲೆ ಇದ್ದವು. ಸ್ಟೌವ್ ಉರಿಯುತ್ತಿತ್ತು. ಕೀಮಾನಿಸ್ ಕನ್ನಡಕ ಇನ್ನೂ ಅಲ್ಲೇ ಇದ್ದವು. ಕೀಮಾನಿಸ್ ಗೆ ಕನ್ನಡಕ ಇಲ್ಲದೆ ನೋಡಲು ಸಾಧ್ಯವಾಗುವುದಿಲ್ಲ ಎಂದು ದುಃಖಿತ ಅಜ್ಜಿ WTVG ಗೆ ತಿಳಿಸಿದ್ದಾರೆ.

ಕೀಮಾನಿಸ್ ಇರುವ ಸ್ಥಳ ಮತ್ತು ಇಬ್ಬರೂ ಒಟ್ಟಿಗೆ ಏನು ಮಾಡಿದರು ಎಂಬುದರ ಕುರಿತು ಜೋನ್ಸ್ ಟೊಲೆಡೊ ಪೊಲೀಸರಿಗೆ ಅಸಮಂಜಸ ಹೇಳಿಕೆಗಳನ್ನು ನೀಡಿದ ನಂತರ, ಆತನ ಮೇಲೆಯೇ ಅನುಮಾನಗೊಂಡ ಪೊಲೀಸರು ಭಾನುವಾರ ತಂದೆಯನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com