ಪಹಲ್ಗಾಮ್ ಉಗ್ರ ದಾಳಿ: ಯಾವುದೇ ಕ್ಷಣದಲ್ಲೂ ನಿಮ್ಮನ್ನು ಬಿಟ್ಟುಕೊಡಲ್ಲ; ಪಾಕ್ ಅಧ್ಯಕ್ಷ ಜರ್ದಾರಿಗೆ China ರಾಯಭಾರಿ ಅಭಯ!

24 ಹಿಂದೂಗಳು ಸೇರಿ 26 ಮಂದಿಯನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉತ್ತುಂಗದಲ್ಲಿರುವಾಗಲೇ ಚೀನಾ ಇಸ್ಲಾಮಾಬಾದ್‌ಗೆ ಮತ್ತೊಮ್ಮೆ ತನ್ನ ಬೆಂಬಲವನ್ನು ನೀಡಿತು.
ಪಾಕ್ ಅಧ್ಯಕ್ಷನನ್ನು ಭೇಟಿಯಾದ ಚೀನಾ ರಾಯಭಾರಿ
ಪಾಕ್ ಅಧ್ಯಕ್ಷನನ್ನು ಭೇಟಿಯಾದ ಚೀನಾ ರಾಯಭಾರಿ
Updated on

ಇಸ್ಲಾಮಾಬಾದ್: 24 ಹಿಂದೂಗಳು ಸೇರಿ 26 ಮಂದಿಯನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉತ್ತುಂಗದಲ್ಲಿರುವಾಗಲೇ ಚೀನಾ ಇಸ್ಲಾಮಾಬಾದ್‌ಗೆ ಮತ್ತೊಮ್ಮೆ ತನ್ನ ಬೆಂಬಲವನ್ನು ನೀಡಿತು. ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರಿ ಜಿಯಾಂಗ್ ಜೈಡಾಂಗ್ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರನ್ನು ಭೇಟಿ ಮಾಡಿ ಭಾರತದೊಂದಿಗೆ ನಡೆಯುತ್ತಿರುವ ಪರಿಸ್ಥಿತಿಯ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಪಾಕಿಸ್ತಾನದ ಅಧ್ಯಕ್ಷರ ಭವನದಲ್ಲಿ ಜಿಯಾಂಗ್ ಜೈಡಾಂಗ್ ಮತ್ತು ಆಸಿಫ್ ಅಲಿ ಜರ್ದಾರಿಯನ್ನು ಭೇಟಿಯಾದರು ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ತಿಳಿಸಿದೆ. ಸಭೆಯು ದ್ವಿಪಕ್ಷೀಯ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿತು. ಪಹಲ್ಗಾಮ್ ಘಟನೆಯ ನಂತರ ಪಾಕಿಸ್ತಾನ ಮತ್ತು ಭಾರತ ನಡುವೆ ನಡೆಯುತ್ತಿರುವ ಪರಿಸ್ಥಿತಿಯ ಮೇಲೆ ನಿರ್ದಿಷ್ಟವಾಗಿ ಗಮನಹರಿಸಿತು ಎಂದು PPP ಹೇಳಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪಾಕಿಸ್ತಾನದ ವಿರುದ್ಧ ಭಾರತದ ಪ್ರತಿಕ್ರಿಯೆಯನ್ನು ಬೇಜವಾಬ್ದಾರಿ ಮತ್ತು ಆಕ್ರಮಣಕಾರಿ ವಾಕ್ಚಾತುರ್ಯ ಎಂದು ಕರೆದ ಜರ್ದಾರಿ, ಅಂತಹ ಕ್ರಮಗಳು "ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಅಪಾಯವನ್ನುಂಟುಮಾಡುತ್ತವೆ ಎಂದು ಹೇಳಿದರು. ಚೀನಾದ ರಾಯಭಾರಿ ಪಾಕಿಸ್ತಾನಕ್ಕೆ ತಮ್ಮ ದೇಶದ ಬೆಂಬಲವನ್ನು ಪುನರುಚ್ಚರಿಸಿದರು.

ಪಾಕ್ ಅಧ್ಯಕ್ಷನನ್ನು ಭೇಟಿಯಾದ ಚೀನಾ ರಾಯಭಾರಿ
Pahalgam attack: ಭಾರತ-ಪಾಕ್ ನಡುವಣ ಉದ್ವಿಗ್ನತೆ ನಡುವೆ ಮೋದಿಗೆ ರಷ್ಯಾ ಅಧ್ಯಕ್ಷ ಪುಟಿನ್ ಕರೆ! ಯಾಕೆ?

ಚೀನಾ ಮತ್ತು ಪಾಕಿಸ್ತಾನದ ನಡುವಿನ ಶಾಶ್ವತ ಮತ್ತು ಕಾಲ ಪರೀಕ್ಷಿತ ಸ್ನೇಹವನ್ನು ಪುನರುಚ್ಚರಿಸಿದರು. ಸವಾಲಿನ ಸಮಯದಲ್ಲಿ ಯಾವಾಗಲೂ ಪರಸ್ಪರ ಬೆಂಬಲಿಸಿದ 'ಐರನ್ ಬದ್ರರ್ಸ್' ಎಂದು ಸಂಬಂಧವನ್ನು ವಿವರಿಸಿದರು. ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಎರಡೂ ದೇಶಗಳ ಸಾಮಾನ್ಯ ಬಯಕೆಯನ್ನು ಸಾಧಿಸಲು ಚೀನಾ ಯಾವಾಗಲೂ ಪಾಕಿಸ್ತಾನವನ್ನು ಬೆಂಬಲಿಸುತ್ತದೆ ಎಂದು ಜೈಡಾಂಗ್ ಪಾಕಿಸ್ತಾನಿ ಅಧ್ಯಕ್ಷರಿಗೆ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com