ಪಾಕ್‌ಗೆ ತ್ರಿವಳಿ ಆಘಾತ: Indian Army, ಬಲೂಚ್ ಬಳಿಕ ರಣಾಂಗಣಕ್ಕಿಳಿದ Taliban; Pak ಸೇನಾ ವಾಹನ ಉಡೀಸ್, 20 ಸೈನಿಕರು ಸಾವು, Video Viral!

ತೆಹ್ರೀಕ್-ಇ-ತಾಲಿಬಾನ್ (TTP) ನಡೆಸಿದ ದಾಳಿಯಲ್ಲಿ 20 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನಿ ಸೈನಿಕರನ್ನು ಲೇಸರ್ ರೈಫಲ್‌ಗಳನ್ನು ಬಳಸಿ ಕೊಲ್ಲಲಾಗಿದೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಆಪರೇಷನ್ ಸಿಂಧೂರ್ ಮೂಲಕ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಪೆಟ್ಟು ನೀಡುತ್ತಿದೆ. ಭಾರತೀಯ ಸೇನೆ ಮುಂದೆ ನಿಲ್ಲಲು ಸಾಧ್ಯವಾಗದೆ ಪಾಕಿಸ್ತಾನ ಸೇನೆ ಪತರುಗುಟ್ಟಿದೆ. ಇದೇ ಸಮಯದಲ್ಲಿ ಅತ್ತ ಬಲೂಚಿಸ್ತಾನದ ಆರ್ಮಿ ಪಡೆ ಸಹ ಪಾಕಿಸ್ತಾನದ ಸೇನೆ ಮೇಲೆ ಮುಗಿಬಿದ್ದಿದೆ. 12 ಪಾಕಿಸ್ತಾನ ಸೈನಿಕರು ತೆರಳುತ್ತಿದ್ದ ವಾಹನವನ್ನು ಸ್ಫೋಟಿಸಿದ್ದು ಸೈನಿಕರ ದೇಹಗಳು ಚೂರು ಚೂರಾಗಿದ್ದವು. ಈ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ತಾಲಿಬಾನ್ ಸಹ ಪಾಕಿಸ್ತಾನ ಸೇನೆ ಮೇಲೆ ಮುಗಿಬಿದ್ದಿದೆ.

ತೆಹ್ರೀಕ್-ಇ-ತಾಲಿಬಾನ್ (TTP) ನಡೆಸಿದ ದಾಳಿಯಲ್ಲಿ 20 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನಿ ಸೈನಿಕರನ್ನು ಲೇಸರ್ ರೈಫಲ್‌ಗಳನ್ನು ಬಳಸಿ ಕೊಲ್ಲಲಾಗಿದೆ ಎಂದು ಹೇಳಲಾಗಿದೆ. ಭಾರತದೊಂದಿಗಿನ ಉದ್ವಿಗ್ನತೆಯ ಮಧ್ಯೆ ಪಾಕಿಸ್ತಾನಕ್ಕೆ ಇದು ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗುತ್ತಿದೆ. ಈ ದಾಳಿಯನ್ನು ತೆಹ್ರೀಕ್-ಇ ತಾಲಿಬಾನ್ ನಡೆಸಿದ್ದು, ದಕ್ಷಿಣ ವಜೀರಿಸ್ತಾನದ ಶಕೈನಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಪಾಕಿಸ್ತಾನದ ಸೇನಾ ವಾಹನಗಳು ಸಹ ನಾಶವಾಗಿದೆ. ಅಲ್ಲದೆ, ಈ ದಾಳಿಯಲ್ಲಿ, ಟಿಟಿಪಿ ಪಾಕಿಸ್ತಾನಿ ಸೇನೆಯ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಂಡಿದೆ.

ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸುತ್ತಿರುವ ಆಪರೇಷನ್ ಸಿಂಧೂರ್ ಮಧ್ಯೆ ಪಾಕಿಸ್ತಾನ ಸೇನೆಗೆ ಎರಡು ಬಾರಿ ಹೊಡೆತ ಬಿದ್ದಿದ್ದು, ಬಲೂಚಿಸ್ತಾನ್ ಪ್ರಾಂತ್ಯದ ಬೋಲಾನ್ ಮತ್ತು ಕೆಚ್ ಪ್ರದೇಶಗಳಲ್ಲಿ ನಡೆದ ಎರಡು ಪ್ರತ್ಯೇಕ ದಾಳಿಗಳ ಹೊಣೆಯನ್ನು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಹೊತ್ತುಕೊಂಡಿದೆ. ಈ ದಾಳಿಯಲ್ಲಿ 14 ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಸಂಗ್ರಹ ಚಿತ್ರ
Operation Sindoor ಟೈಟಲ್ ಗೆ ಮುಗಿಬಿದ್ದ ನಿರ್ಮಾಪಕರು: Sandalwood, ಬಾಲಿವುಡ್‌ನಲ್ಲಿ 15 ಸಂಸ್ಥೆಗಳ ನಡುವೆ ಪೈಪೋಟಿ!

ಮೊದಲ ದಾಳಿಯಲ್ಲಿ, ಬಿಎಲ್‌ಎಯ ವಿಶೇಷ ಯುದ್ಧತಂತ್ರದ ಕಾರ್ಯಾಚರಣೆ ದಳವು ಶೋರ್ಕಂಡ್ ಪ್ರದೇಶದಲ್ಲಿ ಪಾಕಿಸ್ತಾನಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ರಿಮೋಟ್-ಕಂಟ್ರೋಲ್ಡ್ ಐಇಡಿ ಸ್ಫೋಟಿಸಿತು. ವಿಶೇಷ ಕಾರ್ಯಾಚರಣೆ ಕಮಾಂಡರ್ ತಾರಿಕ್ ಇಮ್ರಾನ್ ಮತ್ತು ಸುಬೇದಾರ್ ಉಮರ್ ಫಾರೂಕ್ ಸೇರಿದಂತೆ ಎಲ್ಲಾ 12 ಸೈನಿಕರು ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸ್ಫೋಟದಲ್ಲಿ ಸೇನಾ ವಾಹನಗಳು ಸಂಪೂರ್ಣವಾಗಿ ನಾಶವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com