'ನಾವು ಯಾರ ಮುಂದೆಯೂ ಕೈಚಾಚಿಲ್ಲ'; ಆರ್ಥಿಕ ವ್ಯವಹಾರಗಳ ಸಚಿವಾಲಯದ X ಖಾತೆ ಹ್ಯಾಕ್ ಆಗಿದೆ: ಪಾಕಿಸ್ತಾನ
ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕ ವ್ಯವಹಾರಗಳ ಸಚಿವಾಲಯದ ಎಕ್ಸ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಭಾರತದೊಂದಿಗಿನ ಸದ್ಯದ ಉದ್ವಿಗ್ನತೆಯಿಂದ ಉಂಟಾದ 'ಭಾರಿ ನಷ್ಟ'ವನ್ನು ಸರಿದೂಗಿಸಲು ಆರ್ಥಿಕ ನೆರವು ನೀಡುವಂತೆ ನಕಲಿ ಪೋಸ್ಟ್ ಮಾಡಲಾಗಿದೆ ಎಂದು ಪಾಕಿಸ್ತಾನ ಶುಕ್ರವಾರ ಹೇಳಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 'ನಕಲಿ ಟ್ವೀಟ್' ಕುರಿತು ಎಚ್ಚರಿಕೆ ನೀಡಿದ್ದು, ಖಾತೆಯನ್ನು 'ಹ್ಯಾಕ್ ಮಾಡಲಾಗಿದೆ' ಎಂದು ಹೇಳಿದೆ.
X ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ಖಾತೆಯನ್ನು ಸ್ವಿಚ್ ಆಫ್ ಮಾಡುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಹ್ಯಾಕ್ ಮಾಡಿದ ಬಳಿಕ ಸಚಿವಾಲಯದ ಆರ್ಥಿಕ ವ್ಯವಹಾರಗಳ ವಿಭಾಗವು ಮನವಿ ಮಾಡಿದಂತೆ ಪೋಸ್ಟ್ ಮಾಡಲಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದೊಂದಿಗೆ ಉಂಟಾಗಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದೆ ಮತ್ತು ಆರ್ಥಿಕ ಸಹಾಯಕ್ಕೆ ಮೊರೆ ಇಟ್ಟಿದೆ ಎಂದು ಹೇಳಲಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಉದ್ವಿಗ್ನತೆ ಪಾಕಿಸ್ತಾನದ ಷೇರು ಮಾರುಕಟ್ಟೆಯನ್ನು ಕುಸಿಯುವಂತೆ ಮಾಡಿದೆ.
'ಭಾರತದ ದಾಳಿಯಿಂದ ಪಾಕಿಸ್ತಾನಕ್ಕೆ ತೀವ್ರ ನಷ್ಟವಾಗಿದೆ. ಹೀಗಾಗಿ ಆರ್ಥಿಕ ನಷ್ಟವನ್ನು ಸರಿದೂಗಿಸಲು ಹೆಚ್ಚಿನ ಸಾಲ ನೀಡುವಂತೆ ಅಂತರರಾಷ್ಟ್ರೀಯ ಪಾಲುದಾರರಿಗೆ ಪಾಕಿಸ್ತಾನ ಸರ್ಕಾರ ಮನವಿ ಮಾಡುತ್ತದೆ. ಉಲ್ಬಣಗೊಳ್ಳುತ್ತಿರುವ ಯುದ್ಧ ಮತ್ತು ಷೇರು ಮಾರುಕಟ್ಟೆ ಕುಸಿತದ ಮಧ್ಯೆ, ಅಂತರರಾಷ್ಟ್ರೀಯ ಸಮುದಾಯ ಈ ಉಲ್ಬಣವನ್ನು ಕಡಿಮೆ ಮಾಡಲು ಸಹಾಯ ಮಾಡುವಂತೆ ನಾವು ಒತ್ತಾಯಿಸುತ್ತೇವೆ. ರಾಷ್ಟ್ರವು ದೃಢವಾಗಿರಲು ನೆರವು ನೀಡುವಂತೆ ಒತ್ತಾಯಿಸುತ್ತೇವೆ' ಎಂದು ಖಾತೆಯಲ್ಲಿರುವ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ