'Second line of defence': ಮದರಸಾ ಮಕ್ಕಳನ್ನೂ ಯುದ್ಧಕ್ಕೆ ಬಳಸುತ್ತೇವೆ..: ಸಂಸತ್ ನಲ್ಲೇ ಪಾಕ್ ಸಚಿವ Khawaja Asif ಹೇಳಿಕೆ

ಪಾಕಿಸ್ತಾನ ಭಾರತದ ಮೇಲೆ ಎಷ್ಟೇ ದಾಳಿಗೆ ಪ್ರಯತ್ನಿಸಿದರು ಅದು ವಿಫಲವಾಗುತ್ತಲೇ ಇದೆ. ಭಾರತ ಕೂಡಾ ಇದಕ್ಕೆ ಪ್ರತಿದಾಳಿಯಾಗಿ ತಕ್ಕ ಉತ್ತರ ನೀಡುತ್ತಿದೆ. ಪಾಕಿಸ್ತಾನವು ಕ್ಷಿಪಣಿಗಳು ಮತ್ತು ಡ್ರೋನ್‌ಗಳೊಂದಿಗೆ ದಾಳಿ ಮಾಡಲು ಪ್ರಯತ್ನಿಸಿತು.
Khawaja Asif hints at deploying madrasa students in case of war
ಮದರಸಾ(ಸಂಗ್ರಹ ಚಿತ್ರ)
Updated on

ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರದಾಳಿ ಮತ್ತು ಅದಕ್ಕೆ ಉತ್ತರವಾಗಿ ಭಾರತದ ನಡೆಸಿದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಉಲ್ಬಣಗೊಂಡಿರುವಂತೆಯೇ ಯುದ್ಧಕ್ಕೆ ಮದರಸಾ ವಿದ್ಯಾರ್ಥಿಗಳನ್ನೂ ಬಳಸಿಕೊಳ್ಳುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿದೆ.

ಹೌದು.. ಪಾಕಿಸ್ತಾನ ಭಾರತದ ಮೇಲೆ ಎಷ್ಟೇ ದಾಳಿಗೆ ಪ್ರಯತ್ನಿಸಿದರು ಅದು ವಿಫಲವಾಗುತ್ತಲೇ ಇದೆ. ಭಾರತ ಕೂಡಾ ಇದಕ್ಕೆ ಪ್ರತಿದಾಳಿಯಾಗಿ ತಕ್ಕ ಉತ್ತರ ನೀಡುತ್ತಿದೆ. ಪಾಕಿಸ್ತಾನವು ಕ್ಷಿಪಣಿಗಳು ಮತ್ತು ಡ್ರೋನ್‌ಗಳೊಂPahalgam terror attackದಿಗೆ ದಾಳಿ ಮಾಡಲು ಪ್ರಯತ್ನಿಸಿತು.

ಆದರೆ ಒಂದೇ ಒಂದು ಕ್ಷಿಪಣಿ ಕೂಡ ಭಾರತ ಪ್ರವೇಶಿಸಲು ಬಿಟ್ಟಿಲ್ಲ ಎಲ್ಲವನ್ನು ಗಾಳಿಯಲ್ಲೇ ಹೊಡೆದುರುಳಿಸಿದೆ. ಹೆಚ್ಚುತ್ತಿರುವ ಸಂಘರ್ಷವನ್ನು ನೋಡಿ ಪಾಕಿಸ್ತಾನಿಗಳು ಪತರುಗುಟ್ಟಿದ್ದಾರೆ. ಈ ಯುದ್ಧ ಪಾಕಿಸ್ತಾನಕ್ಕೆ ತುಂಬಾ ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಈ ನಡುವೆ ಭಾರತದೊಂದಿಗಿನ ಸೇನಾ ಸಂಘರ್ಷ ವ್ಯಾಪಕವಾಗಿರುವಂತೆಯೇ ಭಾರತವನ್ನು ಹಣಿಯಲು ಸಕಲ ಬಲವನ್ನೂ ಪ್ರಯೋಗಿಸುತ್ತಿರುವ ಪಾಕಿಸ್ತಾನ ಇದೀಗ, ತನ್ನ ದೇಶದ ಮದರಸಾ ಮಕ್ಕಳನ್ನೂ ಕೂಡ ಯುದ್ಧದಲ್ಲಿ ಬಳಸಿಕೊಳ್ಳುವುದಾಗಿ ಹೇಳಿದೆ. ಈ ಕುರಿತು ಸ್ವತಃ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿಕೆ ನೀಡಿದ್ದಾರೆ. ಅಚ್ಚರಿ ಎಂದರೆ ಖವಾಜಾ ಆಸಿಫ್ ಈ ಹೇಳಿಕೆಯನ್ನು ಪಾಕಿಸ್ತಾನದ ಸಂಸತ್ ನಲ್ಲೇ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

Khawaja Asif hints at deploying madrasa students in case of war
Operation Sindoor: "ತುಂಬಾ ಅಂಜುಬುರುಕರು.. ಪಬ್‌ಗಳಲ್ಲಿ ಕುಳಿತುಕೊಳ್ಳಿ"; ಭಾರತಕ್ಕೆ ಪಾಠ ಕಲಿಸಲು ಪಾಕ್ ಸರ್ಕಾರಕ್ಕೆ journalist ಸಲಹೆ!

ಅಗತ್ಯ ಬಿದ್ದರೆ ಮದರಸಾ ಮಕ್ಕಳನ್ನೂ ಬಳಸಿಕೊಳ್ಳುತ್ತೇವೆ

'ಮದರಸಾ ವಿದ್ಯಾರ್ಥಿಗಳು ನಮ್ಮ ಎರಡನೇ ಹಂತದ ರಕ್ಷಣಾ ಸಿಬ್ಬಂದಿಗಳು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲಿ ಓದುತ್ತಿರುವ ಯುವಕರನ್ನು ಸಮಯ ಬಂದಾಗ ಅಗತ್ಯವಿರುವಂತೆ ಬಳಸಿಕೊಳ್ಳಲಾಗುವುದು ಎಂದು ಆಸಿಫ್ ಹೇಳಿದರು.

ಉದ್ದೇಶಪೂರ್ವಕವಾಗಿಯೇ ಭಾರತದ ಡ್ರೋನ್ ದಾಳಿ ತಡೆದಿಲ್ಲ

ಇದೇ ವೇಳೆ, 'ನಾವು ಭಾರತದ ಡ್ರೋನ್‌ ದಾಳಿಯನ್ನು ತಡೆದಿಲ್ಲ. ನಮ್ಮ ಸ್ಥಳಗಳ ಬಗ್ಗೆ ಮಾಹಿತಿ ಸೋರಿಕೆಯಾಗಬಾರದು ಎಂಬ ಉದ್ದೇಶದಿಂದ ಹೀಗೆ ಮಾಡಿದೆವು. ನಿನ್ನೆ ಭಾರತವು ನಮ್ಮ ಸ್ಥಳಗಳನ್ನು ಪತ್ತೆಹಚ್ಚಲು ಡ್ರೋನ್‌ ದಾಳಿ ಮಾಡಿತು. ನಾನು ತಾಂತ್ರಿಕ ವಿಷಯಗಳನ್ನು ವಿವರಿಸಲು ಸಾಧ್ಯವಿಲ್ಲ ಎಂದು ಖವಾಜಾ ಆಸಿಫ್ ಸಂಸತ್ ನಲ್ಲಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com