
ಕೊಲಂಬೊ: ಶ್ರೀಲಂಕಾದಲ್ಲಿ ಭಾನುವಾರ ಪ್ರಯಾಣಿಕರ ಬಸ್ಸೊಂದು ಬಂಡೆಯಿಂದ ಉರುಳಿ ಬಿದ್ದ ಪರಿಣಾಮ ಕನಿಷ್ಠ 21 ಜನರು ಸಾವಿಗೀಡಾಗಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯ ಪ್ರಾಂತ್ಯದ ಕೋಟ್ಮಲೆಯಲ್ಲಿ ಬಸ್ ಚಾಲಕ ಗುಡ್ಡಗಾಡು ಪ್ರದೇಶದಲ್ಲಿ ಎಡ ತಿರುವು ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಈ ಅಪಘಾತ ಸಂಭವಿಸಿದೆ.
ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್, ದಕ್ಷಿಣ ಯಾತ್ರಾ ಸ್ಥಳವಾದ ಕತರಗಮದಿಂದ ವಾಯುವ್ಯ ಪಟ್ಟಣವಾದ ಕುರುನಗರಕ್ಕೆ ತೆರಳುತ್ತಿತ್ತು. ಬಸ್ಸಿನಲ್ಲಿ 75 ಪ್ರಯಾಣಿಕರು ಇದ್ದರು. ಈ ವೇಳೆ ಬಂಡೆಯಿಂದ 100 ಮೀಟರ್ ಆಳಕ್ಕೆ ಉರುಳಿಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ 21 ಜನರು ಸಾವಿಗೀಡಾಗಿದ್ದಾರೆ. ದುರಂತದಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಸಾರಿಗೆ ಮತ್ತು ಹೆದ್ದಾರಿಗಳ ಉಪ ಸಚಿವ ಪ್ರಸನ್ನ ಗುಣಸೇನ ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ಮಾರಣಾಂತಿಕ ಬಸ್ ಅಪಘಾತಗಳು ಸಾಮಾನ್ಯವಾಗಿವೆ. ಅಜಾಗರೂಕ ಚಾಲನೆ ಮತ್ತು ಕಳಪೆ ನಿರ್ವಹಣೆಯ ರಸ್ತೆಗಳಿಂದಾಗಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತವೆ.
Advertisement