ಬ್ರಹ್ಮೋಸ್ ಕ್ಷಿಪಣಿ ದಾಳಿಯಿಂದ ನಡುಗಿದ ಭೂಮಿ?: ಪಾಕಿಸ್ತಾನದಲ್ಲಿ ಮತ್ತೆ ಭೂಕಂಪ; 3 ದಿನದಲ್ಲಿ ಎರಡನೇ ಕಂಪನ!

ಪಾಕಿಸ್ತಾನದಲ್ಲಿ ಮೊದಲು ಮೇ 9 ರಂದು 4.0 ತೀವ್ರತೆಯ ಭೂಕಂಪ ದಾಖಲಾಗಿತ್ತು. ಇಂದು 4.6ರ ತೀವ್ರತೆ ಕಂಡುಬಂದಿದೆ. ಆಪರೇಷನ್ ಸಿಂಧೂರ್ ಮೂಲಕ ಭಾರತೀಯ ಪಡೆಗಳು ಪಾಕಿಸ್ತಾನದಲ್ಲಿ ಕ್ಷಿಪಣಿ ದಾಳಿಗಳು ನಡೆಸಿದ್ದವು.
ಬ್ರಹ್ಮೋಸ್ ಕ್ಷಿಪಣಿ ದಾಳಿಯಿಂದ ನಡುಗಿದ ಭೂಮಿ?: ಪಾಕಿಸ್ತಾನದಲ್ಲಿ ಮತ್ತೆ ಭೂಕಂಪ; 3 ದಿನದಲ್ಲಿ ಎರಡನೇ ಕಂಪನ!
Updated on

ಇಸ್ಲಾಮಾಬಾದ್: ಆಪರೇಷನ್ ಸಿಂಧೂರ್ ಮೂಲಕ ಭಾರತೀಯ ಪಡೆಗಳು ಪಾಕಿಸ್ತಾನದಲ್ಲಿ ವಿಧ್ವಂಸ ಸೃಷ್ಠಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಇಂದು ಮಧ್ಯಾಹ್ನ 1:26ಕ್ಕೆ ಮತ್ತೆ ಭೂಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ಈ ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.6 ರಷ್ಟು ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ಪಾಕಿಸ್ತಾನದಲ್ಲಿ 29.12 ಡಿಗ್ರಿ ಉತ್ತರದಲ್ಲಿ ಮತ್ತು 67.26 ಡಿಗ್ರಿ ಪೂರ್ವ ರೇಖಾಂಶದಲ್ಲಿದ್ದು, 10 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ.

ಎನ್‌ಸಿಎಸ್ ಹಂಚಿಕೊಂಡ ನಕ್ಷೆಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಪಾಕಿಸ್ತಾನದ ಬಲೂಚಿಸ್ತಾನ್ ಪ್ರದೇಶದಲ್ಲಿತ್ತು. ಇದು ಅಫ್ಘಾನಿಸ್ತಾನದ ಗಡಿಯ ಸಮೀಪದಲ್ಲಿದೆ. ನಕ್ಷೆಯಲ್ಲಿ ತೋರಿಸಿರುವ ಪ್ರಭಾವದ ಪ್ರದೇಶವು ಕ್ವೆಟ್ಟಾ ಮತ್ತು ಸುತ್ತಮುತ್ತಲಿನ ಪಟ್ಟಣಗಳಾದ ಚಮನ್ ಮತ್ತು ಸಿಬಿಯನ್ನು ಒಳಗೊಂಡಿದೆ. ಆದಾಗ್ಯೂ, ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳು ಇನ್ನೂ ಬಂದಿಲ್ಲ.

ಬ್ರಹ್ಮೋಸ್ ಕ್ಷಿಪಣಿ ದಾಳಿಯಿಂದ ನಡುಗಿದ ಭೂಮಿ?: ಪಾಕಿಸ್ತಾನದಲ್ಲಿ ಮತ್ತೆ ಭೂಕಂಪ; 3 ದಿನದಲ್ಲಿ ಎರಡನೇ ಕಂಪನ!
Operation Sindoor: ಪಾಕಿಸ್ತಾನದ ಕಿರಾನಾ ಹಿಲ್ಸ್ ನಲ್ಲಿರುವ ಪರಮಾಣು ಸ್ಥಾವರಗಳನ್ನು ಭಾರತ ಉಡೀಸ್ ಮಾಡಿತ್ತೇ?

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಸಂಭವಿಸಿದ ಎರಡನೇ ಪ್ರಮುಖ ಭೂಕಂಪ ಇದಾಗಿದೆ. ಇದಕ್ಕೂ ಮೊದಲು ಮೇ 9 ರಂದು, 4.0 ತೀವ್ರತೆಯ ಭೂಕಂಪ ದಾಖಲಾಗಿತ್ತು. ಇದರ ಕೇಂದ್ರಬಿಂದು ಬಲೂಚಿಸ್ತಾನದಲ್ಲಿಯೂ ಇತ್ತು. ತಜ್ಞರ ಪ್ರಕಾರ, ಪಾಕಿಸ್ತಾನವು ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್‌ನಲ್ಲಿ ಅಸ್ತಿತ್ವದಲ್ಲಿರುವ ಕಾರಣ ಭೂಕಂಪನಶೀಲ ಸಕ್ರಿಯ ವಲಯದಲ್ಲಿದೆ. ಇದರಿಂದಾಗಿ, ಈ ಪ್ರದೇಶದಲ್ಲಿ ಭೂಕಂಪಗಳು ಸಾಮಾನ್ಯ. ಬಲೂಚಿಸ್ತಾನ್, ಖೈಬರ್ ಪಖ್ತುನ್ಖ್ವಾ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‌ನಂತಹ ಪ್ರದೇಶಗಳು ಯುರೇಷಿಯನ್ ಪ್ಲೇಟ್‌ನ ದಕ್ಷಿಣ ಅಂಚಿನಲ್ಲಿದ್ದರೆ, ಪಂಜಾಬ್ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರಗಳು ಭಾರತೀಯ ಪ್ಲೇಟ್‌ನ ವಾಯುವ್ಯ ಅಂಚಿನಲ್ಲಿವೆ.

ಬ್ರಹ್ಮೋಸ್ ಕ್ಷಿಪಣಿ ದಾಳಿಯಿಂದ ನಡುಗಿದ ಭೂಮಿ?: ಪಾಕಿಸ್ತಾನದಲ್ಲಿ ಮತ್ತೆ ಭೂಕಂಪ; 3 ದಿನದಲ್ಲಿ ಎರಡನೇ ಕಂಪನ!
Operation Sindoor: 'ಭಾರತದ ವಿರುದ್ಧ ಪಾಕ್ ಸೇನೆಗೆ ಜಯ'..; ಪಾಕ್ ಕ್ರಿಕೆಟಿಗ Shahid Afridi ವಿಜಯೋತ್ಸವ ರ‍್ಯಾಲಿ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com