ಪಾಕಿಸ್ತಾನ ಅಣ್ವಸ್ತ್ರ ಗೋದಾಮು ಧ್ವಂಸ: ವಿಕಿರಣ ಸೋರಿಕೆ ಶಂಕೆ, Egypt ನಿಂದ Boron ಆಮದು? ಏನಿದು ರಾಸಾಯನಿಕ?

ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿರುವ ಭಾರತ ಪಾಕಿಸ್ತಾನದ ಅಣ್ವಸ್ತ್ರ ಶೇಖರಣಾ ಕೇಂದ್ರಗಳ ಮೇಲೂ ಕ್ಷಿಪಣಿ ಮಾಡಿದ್ದು, ಇದೀಗ ಇದೇ ಪ್ರದೇಶದಲ್ಲಿ ವಿಕಿರಣ ಸೋರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.
Kirana Hills
ಪಾಕಿಸ್ತಾನ ಕಿರಾನಾ ಬೆಟ್ಟದಲ್ಲಿ ವಿಕಿರಣ ಸೋರಿಕೆ
Updated on

ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿರುವ ಭಾರತ ಪಾಕಿಸ್ತಾನದ ಅಣ್ವಸ್ತ್ರ ಶೇಖರಣಾ ಕೇಂದ್ರಗಳ ಮೇಲೂ ಕ್ಷಿಪಣಿ ಮಾಡಿದ್ದು, ಇದೀಗ ಇದೇ ಪ್ರದೇಶದಲ್ಲಿ ವಿಕಿರಣ ಸೋರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಗೋಧಾದಲ್ಲಿರುವ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿದ್ದು, ಈ ವಾಯು ನೆಲೆ ಕಿರಾನಾ ಬೆಟ್ಟಗಳೊಂದಿಗೆ ಸಂಪರ್ಕ ಹೊಂದಿದೆ. ಕಿರಾನಾ ಬೆಟ್ಟದಲ್ಲಿ ಪಾಕ್‌ ಅಣ್ವಸ್ತ್ರ ನೆಲೆ ಇದೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳ ಚರ್ಚೆಯಾಗುತ್ತಿವೆ.

ಈ ಚರ್ಚೆಗಳ ನಡುವೆಯೇ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಭಾರತೀಯ ಸೇನಾ ಮುಖ್ಯಸ್ಥರು ಪಾಕಿಸ್ತಾನದ ಕಿರಾನಾ ಬೆಟ್ಟದಲ್ಲಿರುವ ಅಣ್ವಸ್ತ್ರ ನೆಲೆ ಮೇಲೆ ಭಾರತ ದಾಳಿ ಮಾಡಿದೆ ಎಂಬ ವದಂತಿಗಳನ್ನು ತಳ್ಳಿ ಹಾಕಿದ್ದರು.

ಕಿರಾನಾ ಬೆಟ್ಟಗಳಲ್ಲಿ ಪಾಕಿಸ್ತಾನದ ಅಣ್ವಸ್ತ್ರ ನೆಲೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಗುರಿ ಉಗ್ರನೆಲೆಗಳು ಮಾತ್ರ ಆಗಿತ್ತು. ಅವುಗಳನ್ನು ಹೊಡೆದುರುಳಿಸಿದ್ದೇವೆ. ಕಿರಾನಾ ಬೆಟ್ಟಗಳಲ್ಲಿ ನಾವು ದಾಳಿ ಮಾಡಿಲ್ಲ ಎಂದು ಸೇನೆ ಮಾಹಿತಿ ನೀಡಿದೆ.

Kirana Hills
ಪಾಕ್‌ನ ಅಣ್ವಸ್ತ್ರ ದಾಳಿ ಬೆದರಿಕೆ ನಮ್ಮ ಮುಂದೆ ನಡೆಯಲ್ಲ; ಇದು ಯುದ್ಧದ ಯುಗವಲ್ಲ, ಹಾಗಂತ ಉಗ್ರರ ಯುಗವೂ ಅಲ್ಲ: PM Modi

ವಿಶೇಷ ವಿಮಾನಗಳ ಆಗಮನ

ಏತನ್ಮಧ್ಯೆ ಭಾರತೀಯ ಸೇನೆ ದಾಳಿ ಬಳಿಕ ಪಾಕಿಸ್ತಾನದ ಅಣ್ವಸ್ತ್ರ ಗೋದಾಮು ಇದೆ ಎನ್ನಲಾಗುತ್ತಿರುವ ಇದೇ ಕಿರಾನಾ ಬೆಟ್ಟದಲ್ಲಿ ವಿಕಿರಣ ಸೋರಿಕೆಯಾಗುತ್ತಿದೆ ಎಂಬ ವದಂತಿಗಳು ಬಲವಾಗಿ ಹರಡುತ್ತಿದೆ.

ಇದಕ್ಕೆ ಇಂಬು ನೀಡುವಂತೆ ಅಮೆರಿಕ ಮತ್ತು ಈಜಿಪ್ಟ್ ನಿಂದ 2 ವಿಶೇಷ ವಿಮಾನಗಳು ಪಾಕಿಸ್ತಾನಕ್ಕೆ ಆಗಮಿಸಿದ್ದು, ಈ ವಿಶೇಷ ವಿಮಾನಗಳು ವಿಕಿರಣ ಸೋರಿಕೆ ಮತ್ತೆ ಮಾಡುವ ವಿಮಾನಗಳಾಗಿವೆ ಎಂದು ಹೇಳಲಾಗಿದೆ.

ಅಲ್ಲದೆ ಪಾಕಿಸ್ತಾನಕ್ಕೆ ಈಜಪ್ಟಿನಿಂದ ಅಪಾರ ಪ್ರಮಾಣದ ಬೋರಾನ್ ರಾಸಾಯನಿಕವನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ವಿಕಿರಣ ಸೋರಿಕೆಯನ್ನು ತಟಸ್ಥಗೊಳಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

ಕದನ ವಿರಾಮ ಘೋಷಣೆ ಬೆನ್ನಲ್ಲೇ ವಿಕಿರಣ ಸೋರಿಕೆ ತಡೆಗೆ ಹರಸಾಹಸ

ಇನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಘೋಷಣೆಗೂ ಇದೇ ವಿಕಿರಣ ಸೋರಿಕೆ ಕಾರಣ ಎಂದು ಹೇಳಲಾಗುತ್ತಿದ್ದು ಕದನ ವಿರಾಮ ಘೋಷಣೆ ಬೆನ್ನಲ್ಲೇ ಪಾಕಿಸ್ತಾನ, ಅಮೆರಿಕ ದೇಶಗಳು ಇಲ್ಲಿನ ವಿಕಿರಣ ಸೋರಿಕೆ ತಡೆಗೆ ಹರಸಾಹಸ ಪಡುತ್ತಿವೆ ಎನ್ನಲಾಗಿದೆ.

ಫ್ಲೈಟ್‌ರಾಡಾರ್ 24 ದತ್ತಾಂಶದ ಪ್ರಕಾರ, ಈಜಿಪ್ಟ್ ವಾಯುಪಡೆಯ ಸಾರಿಗೆ ವಿಮಾನ EGY1916, ಮೇ 11 ರಂದು ಮಧ್ಯಾಹ್ನ ಭುರ್ಬನ್ ವಿಮಾನ ನಿಲ್ದಾಣದಿಂದ (BHC) ಹೊರಟು ಇದೀಗ ಪಾಕಿಸ್ತಾನ ತಲುಪಿದೆ.

ಅಣ್ವಸ್ತ್ರ ಗೋದಾಮಿನಿಂದ ವಿಕರಣ ಸೋರಿಕೆ

"ಬೋರಾನ್: ಸ್ಪೇಷಿಯಲ್ ಡಿಸ್ಟ್ರಿಬ್ಯೂಷನ್ ಇನ್ ಆನ್ ಏರಿಯಾ ಆಫ್ ನಾರ್ತ್ ನೈಲ್ ಡೆಲ್ಟಾ" ಎಂಬ ಇತ್ತೀಚಿನ ಅಧ್ಯಯನವು ಈ ಪ್ರದೇಶದಲ್ಲಿ ಮೆಟಾಲಾಯ್ಡ್‌ನ ಹೆಚ್ಚಿನ ಸಾಂದ್ರತೆಯನ್ನು ವರದಿ ಮಾಡಿದೆ. ಈಜಿಪ್ಟ್ ವಿಮಾನದ ಪಾಕಿಸ್ತಾನದ ಲ್ಯಾಂಡಿಂಗ್ ಈ ಅಂಶಕ್ಕೆ ಸಂಬಂಧಿಸಿರಬಹುದು ಎಂಬ ಊಹಾಪೋಹ ಹಬ್ಬಿದೆ. ಈ ಬೋರಾನ್ ವಿಕಿರಣವನ್ನು ಹೀರಿಕೊಳ್ಳುವ ಗುಣಲಕ್ಷಣಗಳಿಗಾಗಿ ಪರಮಾಣು ಶಕ್ತಿ ವಲಯ ಸೇರಿದಂತೆ ವ್ಯಾಪಕ ಕೈಗಾರಿಕಾ ಬಳಕೆಯಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತದೆ.

ಬೋರೇಟ್‌ಗಳು, ವಿಶೇಷವಾಗಿ ಐಸೊಟೋಪ್ ಬೋರಾನ್-10, ಪರಮಾಣು ವಿದ್ಯುತ್ ಸ್ಥಾವರಗಳ ಸುರಕ್ಷಿತ ಕಾರ್ಯಾಚರಣೆಗೆ ಅತ್ಯಗತ್ಯ. ಯುರೇನಿಯಂ ವಿದಳನದಿಂದ ಉಷ್ಣ ನ್ಯೂಟ್ರಾನ್‌ಗಳನ್ನು ಹೀರಿಕೊಳ್ಳುವ ಸಾಮರ್ಥ್ಯದಿಂದಾಗಿ, ಒತ್ತಡಕ್ಕೊಳಗಾದ ಮತ್ತು ಕುದಿಯುವ ನೀರಿನ ರಿಯಾಕ್ಟರ್‌ಗಳನ್ನು ನಿಯಂತ್ರಿಸಲು ಮತ್ತು ಸ್ಥಿರಗೊಳಿಸಲು ಬೋರಾನ್-10 ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಏನಿದು ಬೋರಾನ್?

ಬೋರಾನ್ ಎಂಬುದು ವಿಶೇಷ ರಾಸಾಯನಿಕವಾಗಿದ್ದು, ಈ ಬೋರಾನ್ ಬಿ ಚಿಹ್ನೆ ಮತ್ತು ಪರಮಾಣು ಸಂಖ್ಯೆ 5 ಅನ್ನು ಹೊಂದಿದ್ದು, ಸ್ಫಟಿಕ ರೂಪದಲ್ಲಿ ದೊರೆಯುವ ಇದು ಸುಲಭವಾಗಿ, ಗಾಢವಾದ, ಹೊಳಪಿನ ಲೋಹವಾಗಿದೆ. ಇದರ ಪರಿಣಾಮವಾಗಿ ಬೋರಿಕ್ ಆಮ್ಲ, ಖನಿಜ ಸೋಡಿಯಂ ಬೋರೇಟ್ ಮತ್ತು ಬೋರಾನ್ ಕಾರ್ಬೈಡ್ ಮತ್ತು ಬೋರಾನ್ ನೈಟ್ರೈಡ್‌ನ ಅಲ್ಟ್ರಾ-ಹಾರ್ಡ್ ಸ್ಫಟಿಕಗಳಂತಹ ಅನೇಕ ಸಂಯುಕ್ತಗಳು ಉಂಟಾಗುತ್ತವೆ.

ಸಾಮಾನ್ಯವಾಗಿ ಇದನ್ನು ವಿಕಿರಣ ಸೋರಿಕೆಯಂತಹ ಕ್ಲಿಷ್ಠ ಪರಿಸ್ಥಿತಿಗಳಲ್ಲಿ ತಟಸ್ಛಗೊಳಿಸಲು ಬಳಸಲಾಗುತ್ತದೆ. ಈ ಹಿಂದೆ 1986ರ ಚೆರ್ನೋಬಿಲ್ ದುರಂತದ ಸಮಯದಲ್ಲಿ, ವಿಕಿರಣಶೀಲ ಹೊರಸೂಸುವಿಕೆಯನ್ನು ನಿಗ್ರಹಿಸಲು ಮರಳು, ಬೋರಾನ್ ಮತ್ತು ಸೀಸದ ಮಿಶ್ರಣವನ್ನು ತೆರೆದ ರಿಯಾಕ್ಟರ್ ಮೇಲೆ ಬಿಡಲಾಯಿತು. ಬಳಿಕ ಕ್ರಮೇಣ ಇಲ್ಲಿ ವಿಕಿರಣ ಪ್ರಭಾವ ಕಡಿಮೆಯಾಗಿತ್ತು ಎಂದು ಹೇಳಲಾಗಿದೆ.

Kirana Hills
Brahmos ಭಯದಿಂದ ಮಂಡಿಯೂರಿದ ಪಾಕ್: Kirna Hills ಅಣ್ವಸ್ತ್ರ ದಾಸ್ತಾನು ಕೇಂದ್ರದ ಮೇಲೆ ಭಾರತದ ಮಾರಕ ದಾಳಿ; ಭಾರಿ ಪ್ರಮಾಣದ ಪರಮಾಣು ಶಸ್ತ್ರಾಸ್ತ್ರ ನಷ್ಟ?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com