
ಭಾರತೀಯ ದಾಳಿಗಳು ನೂರ್ ಖಾನ್ ವಾಯುನೆಲೆಯ ಮೇಲೆ ಭಾರೀ ಹಾನಿಯನ್ನುಂಟುಮಾಡಿದ ಕೆಲವು ದಿನಗಳ ನಂತರ, ಪಾಕಿಸ್ತಾನವು ತನ್ನ ಸೇನಾ ಪ್ರಧಾನ ಕಚೇರಿಯನ್ನು (GHQ) ರಾವಲ್ಪಿಂಡಿಯಿಂದ ದುಬೈಗೆ ಸ್ಥಳಾಂತರಿಸುವ ಬಗ್ಗೆ ಯೋಚಿಸುತ್ತಿದೆ ಎಂದು ದೊಡ್ಡ ಸುದ್ದಿ ಬರುತ್ತಿದೆ. ದಿ ಫೌಕ್ಸಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಪಾಕಿಸ್ತಾನದ ಸಶಸ್ತ್ರ ಪಡೆಗಳ ವಕ್ತಾರರು, "ನಾವು ಭಾರತದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಪ್ರತಿಬಂಧಿಸಲು ಪ್ರಯತ್ನಿಸಿದಾಗ ನಮ್ಮ ಪ್ರಮುಖ ಸ್ಥಳಗಳು ಬಹಿರಂಗಗೊಂಡಿವೆ. ಆದ್ದರಿಂದ ನಾವು ಪ್ರಮುಖ ಕೇಂದ್ರವನ್ನು ಬದಲಾಯಿಸುತ್ತಿದ್ದೇವೆ ಎಂದು ಹೇಳಿದರು. ಇನ್ನು ಪಾಕ್ ಮನವಿಯನ್ನು ದುಬೈ ತಿರಸ್ಕರಿಸುವ ಸಾಧ್ಯತೆ ಇದೆ ಎಂದು ದಿ ಫೌಕ್ಸಿ ಮೂಲಗಳು ತಿಳಿಸಿವೆ.
ಭಾರತ ನಡೆಸಿದ ಆಪರೇಷನ್ ಸಿಂಧೂರ್ ನಿಂದ ಯಾವುದೇ ಹಾನಿಯೂ ಆಗಿಲ್ಲ ಎಂದು ಹೇಳುತ್ತಲೇ ಬಂದಿದ್ದ ಪಾಕಿಸ್ತಾನ ಇದೀಗ ಕೊನೆಗೂ ಸತ್ಯ ಬಾಯ್ಬಿಟ್ಟಿದೆ. ಮೇ 10 ರಂದು ಭಾರತದ ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಇತರ ಸ್ಥಳಗಳನ್ನು ನಾಶಪಡಿಸಿದೆ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಒಪ್ಪಿಕೊಂಡಿದ್ದಾರೆ. ಮೇ 9 ಮತ್ತು 10ರ ನಡುವಿನ ರಾತ್ರಿ 2.30ಕ್ಕೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಸ್ವತಃ ಕರೆ ಮಾಡಿ ಈ ಮಾಹಿತಿ ನೀಡಿದ್ದಾಗಿ ಷರೀಫ್ ಬಹಿರಂಗಪಡಿಸಿದ್ದಾರೆ.
ಆಪರೇಷನ್ ಸಿಂಧೂರ್ ಅಡಿಯಲ್ಲಿ, ಭಾರತವು ಪಾಕಿಸ್ತಾನದಲ್ಲಿ 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದ್ದು 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿತು. ಮಿಲಿಟರಿ ಘರ್ಷಣೆಯ ಸಮಯದಲ್ಲಿ, ಪಾಕಿಸ್ತಾನ ಸೇನೆಯ 40 ಸೈನಿಕರು ಸಾವನ್ನಪ್ಪಿದರು. ಅದರ ಯುದ್ಧ ವಿಮಾನಗಳು ಸಹ ಹಾನಿಗೊಳಗಾದವು. ಭಾರತೀಯ ವಾಯುಪಡೆಯು ಪಾಕಿಸ್ತಾನದ ದಾಳಿಗೊಳಗಾದ ಸ್ಥಳಗಳಿಗೆ ಫೋಟೋಗಳನ್ನು ಬಹಿರಂಗಪಡಿಸಿತ್ತು.
Advertisement