ಬೆಂಗಳೂರಿನ IISC, RSS ಕಚೇರಿ ಮೇಲಿನ ದಾಳಿಯ ಮಾಸ್ಟರ್ ಮೈಂಡ್: ಪಾಕಿಸ್ತಾನದಲ್ಲಿ ಅಪರಿಚಿತರ ಗುಂಡೇಟಿಗೆ LeT ಕಮಾಂಡರ್ ಸೈಫುಲ್ಲಾ ಖಾಲಿದ್ ಬಲಿ!

ಖಾಲಿದ್ ಹಲವಾರು ವರ್ಷಗಳ ಕಾಲ ನೇಪಾಳದಲ್ಲಿ ನೆಲೆಸಿದ್ದನು. ಅಲ್ಲಿ ಆತ ಸುಳ್ಳು ಗುರುತಿನಡಿಯಲ್ಲಿ ವಾಸಿಸುತ್ತಿದ್ದನು.
ಸೈಫುಲ್ಲಾ ಖಾಲಿದ್
ಸೈಫುಲ್ಲಾ ಖಾಲಿದ್
Updated on

ಭಾರತದಲ್ಲಿ ಮೂರು ಪ್ರಮುಖ ದಾಳಿಗಳ ಹಿಂದಿನ ಲಷ್ಕರ್‌ನ ಪ್ರಮುಖ ಭಯೋತ್ಪಾದಕ ಸೈಫುಲ್ಲಾ ಖಾಲಿದ್‌ನನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹತ್ಯೆ ಮಾಡಲಾಗಿದೆ. ಕೆಲವು ಅಪರಿಚಿತ ಬಂಧೂಕುದಾರಿಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. 2001ರಲ್ಲಿ ರಾಂಪುರದಲ್ಲಿ ಸಿಆರ್‌ಪಿಎಫ್ (CRPF) ಶಿಬಿರದ ಮೇಲಿನ ದಾಳಿ, 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಕಾಂಗ್ರೆಸ್ (IISC) ಮೇಲಿನ ದಾಳಿ ಮತ್ತು 2006ರಲ್ಲಿ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಧಾನ ಕಚೇರಿಯ ಮೇಲಿನ ದಾಳಿಯ ಮೂರು ಪ್ರಮುಖ ದಾಳಿಗಳಲ್ಲಿ ಖಾಲಿದ್ ಪ್ರಮುಖ ಸಂಚುಕೋರನಾಗಿದ್ದನು. ಐದು ವರ್ಷಗಳ ಅವಧಿಯಲ್ಲಿ ನಡೆಸಲಾದ ಈ ದಾಳಿಗಳು ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಭಾರತೀಯ ನೆಲದಲ್ಲಿ ಲಷ್ಕರ್-ಎ-ತೊಯ್ಬಾದ ಚಟುವಟಿಕೆಗಳಲ್ಲಿ ತೀವ್ರ ಹೆಚ್ಚಳಕ್ಕೆ ಕಾರಣವಾಯಿತು.

ಖಾಲಿದ್ ಹಲವಾರು ವರ್ಷಗಳ ಕಾಲ ನೇಪಾಳದಲ್ಲಿ ನೆಲೆಸಿದ್ದನು. ಅಲ್ಲಿ ಆತ ಸುಳ್ಳು ಗುರುತಿನಡಿಯಲ್ಲಿ ವಾಸಿಸುತ್ತಿದ್ದನು. ಅಲ್ಲದೆ ಸ್ಥಳೀಯ ಮಹಿಳೆ ನಗ್ಮಾ ಬಾನು ಎಂಬಾಕೆಯನ್ನು ವಿವಾಹವಾಗಿದ್ದನು. ನೇಪಾಳದವನಾದ ಈತ ಲಷ್ಕರ್-ಎ-ತೊಯ್ಬಾದ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದನೆಂದು ನಂಬಲಾಗಿದೆ. ನೇಮಕಾತಿ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದನು.

ಸೈಫುಲ್ಲಾ ಖಾಲಿದ್
Pakistan ಅಪ್ರಚೋದಿತ ಶೆಲ್ ದಾಳಿ: ಒಟ್ಟಿಗೆ ಜನಿಸಿದ ಅವಳಿಗಳು ದುರಂತ ಸಾವು; ಅಕ್ಕಪಕ್ಕದಲ್ಲೇ ಸಮಾಧಿ!

ಇತ್ತೀಚೆಗೆ, ಖಾಲಿದ್ ತನ್ನ ಅಡಗುತಾಣವನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬದಿನ್ ಜಿಲ್ಲೆಯ ಮಟ್ಲಿಗೆ ಸ್ಥಳಾಂತರಿಸಿದ್ದನು. ಅಲ್ಲಿ ಆತ ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಪಾಕಿಸ್ತಾನಿ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ ಮತ್ತು ಅದರ ಮತ್ತೊಂದು ಸಂಘಟನೆಯಾದ ಜಮಾತ್-ಉದ್-ದವಾಕ್ಕಾಗಿ ಕೆಲಸ ಮಾಡುವುದನ್ನು ಮುಂದುವರೆಸಿದ್ದನು. ಆತನ ಮುಖ್ಯ ಗಮನವು ಭಯೋತ್ಪಾದಕ ಕಾರ್ಯಾಚರಣೆಗಳಿಗೆ ನೇಮಕಾತಿ ಮತ್ತು ನಿಧಿಸಂಗ್ರಹಣೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com