
ಆಪರೇಷನ್ ಸಿಂಧೂರ್ ಯಶಸ್ವಿ ಕಾರ್ಯಾಚರಣೆ ಬಳಿಕ ಭಾರತದ ಪರಾಕ್ರಮವನ್ನು ಇಡೀ ಜಗತ್ತು ನಿಬ್ಬೆರಗಾಗಿ ನೋಡುವಂತೆ ಮಾಡಿದೆ. ಆದರೆ ಲೋಕಸಭೆ ವಿಪಕ್ಷ ನಾಯಕನ ಪ್ರಶ್ನೆಗಳು ಇದೀಗ ಪಾಕಿಸ್ತಾನದಲ್ಲಿ ಭಾರತ ವಿರುದ್ಧ ಬೊಟ್ಟು ಮಾಡುವಂತೆ ಆಗಿದೆ.
ಆಪರೇಷನ್ ಸಿಂಧೂರ್ ಬಗ್ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿರುದ್ಧ ವಾಗ್ದಾಳಿ ನಡೆಸಿದ್ದು ರಾಹುಲ್ ಗಾಂಧಿ, ಆಪರೇಷನ್ ಸಿಂಧೂರ ಅಡಿಯಲ್ಲಿ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಪಾಕಿಸ್ತಾನಕ್ಕೆ ಮೊದಲೇ ಮಾಹಿತಿ ನೀಡಲಾಗಿದೆಯಾ? ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾರತ ತನ್ನ ವಿಮಾನಗಳನ್ನು ಕಳೆದುಕೊಂಡಿದ್ದೇಯಾ? ಕಳೆದುಕೊಂಡಿದ್ದರೆ ಎಷ್ಟು ವಿಮಾನ? ಅವುಗಳ ಸಂಖ್ಯೆಯನ್ನು ಬಹಿರಂಗಪಡಿಸಬೇಕು. ಈ ಮಾಹಿತಿಯನ್ನು ದೇಶದ ಜನತೆ ತಿಳಿದುಕೊಳ್ಳಬೇಕಿದೆ ಎಂಬ ಪ್ರಶ್ನೆಗಳನ್ನು ಎತ್ತಿದ್ದರು.
ಇದು ಪಾಕಿಸ್ತಾನಿ ಟಿವಿ ಚಾನೆಲ್‌ಗಳಲ್ಲಿ ರಾಹುಲ್ ಗಾಂಧಿ ಬಗ್ಗೆ ಚರ್ಚೆ ನಡೆಯುತ್ತಿವೆ. ಪಾಕಿಸ್ತಾನದ ಪ್ರತಿಯೊಂದು ಚರ್ಚೆಯಲ್ಲೂ ರಾಹುಲ್ ಒಂದು ವಿಷಯವಾಗಿದ್ದಾರೆ. ಮೋದಿ ಅವರಿಗೆ ರಾಹುಲ್ ಗಾಂಧಿ ಅವರು ಮಹತ್ವದ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಮೋದಿ ಸರ್ಕಾರ ಉತ್ತರ ಕೊಡುತ್ತಾ? ಇಲ್ವಾ ಎಂಬ ಚರ್ಚೆಗಳು ನಡೆಯುತ್ತಿವೆ.
Advertisement