ಪಾಕಿಸ್ತಾನ: ಶಂಕಿತ ಡ್ರೋನ್ ದಾಳಿಯಲ್ಲಿ ನಾಲ್ವರು ಮಕ್ಕಳ ಸಾವು; ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ!

ತಾಲಿಬಾನ್‌ನ ಭದ್ರಕೋಟೆಯಾಗಿರುವ ಮೀರ್ ಅಲಿಯಲ್ಲಿ ಸೋಮವಾರ ನಡೆದ ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಮತ್ತು ಘಟನೆಯ ಬಗ್ಗೆ ಸೇನೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾವು ಯಾರನ್ನೂ ದೂಷಿಸುತ್ತಿಲ್ಲ, ಆದರೆ ನಮಗೆ ನ್ಯಾಯ ಬೇಕು.
 thousands of residents to stage a protest by
ಡ್ರೋನ್ ದಾಳಿಯಲ್ಲಿ ಮೃತಪಟ್ಟ ಮಕ್ಕಳ ಫೋಟೋ ಹಿಡಿದು ಪ್ರತಿಭಟನೆ
Updated on

ಪೇಶಾವರ: ಪಾಕಿಸ್ತಾನದ ವಾಯುವ್ಯ ಭಾಗದಲ್ಲಿ ಶಂಕಿತ ಡ್ರೋನ್ ದಾಳಿಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಸಾವಿರಾರು ನಿವಾಸಿಗಳು ನ್ಯಾಯಕ್ಕಾಗಿ ಒತ್ತಾಯಿಸಿ ಮಕ್ಕಳ ಶವಗಳನ್ನು ಮುಖ್ಯ ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ತಾಲಿಬಾನ್‌ನ ಭದ್ರಕೋಟೆಯಾಗಿರುವ ಮೀರ್ ಅಲಿಯಲ್ಲಿ ಸೋಮವಾರ ನಡೆದ ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಮತ್ತು ಘಟನೆಯ ಬಗ್ಗೆ ಸೇನೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾವು ಯಾರನ್ನೂ ದೂಷಿಸುತ್ತಿಲ್ಲ, ಆದರೆ ನಮಗೆ ನ್ಯಾಯ ಬೇಕು. ನಮ್ಮ ಮಕ್ಕಳನ್ನು ಕೊಂದವರು ಯಾರು ಎಂದು ಸರ್ಕಾರ ನಮಗೆ ತಿಳಿಸಬೇಕು ಎಂದು ಸ್ಥಳೀಯ ಬುಡಕಟ್ಟು ನಾಯಕ ಮುಫ್ತಿ ಬೈತುಲ್ಲಾ ಹೇಳಿದರು.

ಅಧಿಕಾರಿಗಳು ಪ್ರತಿಕ್ರಿಯಿಸುವಲ್ಲಿ ವಿಫಲವಾದರೆ ಈಗ ಒಂದು ರಸ್ತೆಯಲ್ಲಿ ನಡೆಸಲಾದ ಪ್ರತಿಭಟನೆಯನ್ನು ಎಲ್ಲಾ ಕಡೆ ವಿಸ್ತರಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಮುಗ್ದ ಮಕ್ಕಳನ್ನು ಕೊಂದವರು ಯಾರು ಎಂದು ನಮಗೆ ತಿಳಿಸುವವರೆಗೂ ಮಕ್ಕಳ ಶವ ಸಂಸ್ಕಾರ ಮಾಡಲ್ಲ ಎಂದು ಪಟ್ಟು ಹಿಡಿದ ನಾಗರಿಕರು, ನಮಗೆ ನ್ಯಾಯ ಬೇಕು ಎಂದು ಘೋಷಣೆ ಕೂಗಿ ಪ್ರತಿಭಟಿಸಿದರು.

ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ನಗರವಾದ ಮೀರ್ ಅಲಿಯಲ್ಲಿ ಪ್ರಬಲ ಪಾಕಿಸ್ತಾನಿ ತಾಲಿಬಾನ್ ವಿರುದ್ಧ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಗಳ ಮಧ್ಯೆ ನಾಗರಿಕ ಸಾವು ನೋವುಗಳು ಸಂಭವಿಸಿವೆ.

ಅಫ್ಘಾನ್ ತಾಲಿಬಾನ್‌ನಿಂದ ಪ್ರತ್ಯೇಕವಾಗಿರುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಎಂದು ಕರೆಯಲ್ಪಡುವ ಪಾಕಿಸ್ತಾನಿ ತಾಲಿಬಾನ್ ಆಗಾಗ್ಗೆ ಈ ಪ್ರದೇಶದಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುತ್ತದೆ. ಈ ದಾಳಿಯನ್ನು ಖಂಡಿಸಿರುವ ಪ್ರಾಂತೀಯ ಸಚಿವ ನಾಯಕ್ ಮುಹಮ್ಮದ್ ದಾವರ್, ಈ ಕುರಿತು ತನಿಖೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

 thousands of residents to stage a protest by
ಇಡೀ ಪಾಕಿಸ್ತಾನ ಭಾರತದ ವ್ಯಾಪ್ತಿಯಲ್ಲಿದೆ: ಉನ್ನತ ಸೇನಾಧಿಕಾರಿ ಜನರಲ್ ಸುಮರ್ ಇವಾನ್ ಡಿ'ಕುನ್ಹಾ

ಅಫ್ಘಾನಿಸ್ತಾನದ ಸಮೀಪವಿರುವ ಮೀರ್ ಅಲಿ, ಸಮೀಪದ ಜಿಲ್ಲೆಗಳು ಪಾಕಿಸ್ತಾನಿ ತಾಲಿಬಾನ್ ಮತ್ತು ಇತರ ಉಗ್ರಗಾಮಿ ಗುಂಪುಗಳಿಗೆ ದೀರ್ಘಕಾಲ ನೆಲೆಯಾಗಿದ್ದವು. ಇತ್ತೀಚಿನ ತಿಂಗಳುಗಳಲ್ಲಿ TTTPಈ ಪ್ರದೇಶದಲ್ಲಿ ದಾಳಿಗಳನ್ನು ಹೆಚ್ಚಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com