
ಇಸ್ಲಾಮಾಬಾದ್: ಭಾರತದೊಂದಿಗಿನ ಇತ್ತೀಚಿನ ಸಂಘರ್ಷದಲ್ಲಿನ ಪಾತ್ರಕ್ಕಾಗಿ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡುವ ನಿರ್ಧಾರವನ್ನು ತಾವೇ ತೆಗೆದುಕೊಂಡಿರುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಬುಧವಾರ ಹೇಳಿದ್ದಾರೆ.
ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜನರಲ್ ಮುನೀರ್ ಅವರನ್ನು ಪಾಕಿಸ್ತಾನದ ಅತ್ಯುನ್ನತ ಮಿಲಿಟರಿ ಶ್ರೇಣಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮಾಜಿ ಮಿಲಿಟರಿ ಆಡಳಿತಗಾರ ಫೀಲ್ಡ್ ಮಾರ್ಷಲ್ ಅಯೂಬ್ ಖಾನ್ ನಂತರ ಪಾಕಿಸ್ತಾನದಲ್ಲಿ ಈ ಅತ್ಯುನ್ನತ ಮಿಲಿಟರಿ ಹುದ್ದೆಗೆ ಬಡ್ತಿ ಪಡೆದ ಎರಡನೇ ವ್ಯಕ್ತಿ ಎಂಬ ಮುನೀರ್ ಆಗಿದ್ದಾರೆ.
ಅಯೂಬ್ ಖಾನ್ ಅವರಿಗೆ 1959 ರಲ್ಲಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡಲಾಗಿತ್ತು.
ಸೇನಾ ಮುಖ್ಯಸ್ಥರಿಗೆ ಬಡ್ತಿ ನೀಡುವ ನಿರ್ಧಾರ ನನ್ನದೇ ಆಗಿತ್ತು ಎಂದು ಪಾಕ್ ಪ್ರಧಾನಿ ಮಾಧ್ಯಮಗಳಿಗೆ ತಿರಿಳಿಸರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.
ಇಂತಹ ನಿರ್ಣಾಯಕ ನಿರ್ಧಾರಗಳ ಬಗ್ಗೆ ತಮ್ಮ ಹಿರಿಯ ಸಹೋದರ ಮತ್ತು ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರನ್ನು ಸಂಪರ್ಕಿಸಿರುವುದಾಗಿ ಪಾಕ್ ಪ್ರಧಾನಿ ತಿಳಿಸಿದ್ದಾರೆ.
ಯುದ್ಧವು ಒಂದು ದೇಶದ ಗೆಲುವು ಮತ್ತು ಇನ್ನೊಂದು ದೇಶದ ನಷ್ಟಕ್ಕೆ ಮಾತ್ರ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದ ಶೆಹಬಾಜ್, "ಶಾಶ್ವತ ಶಾಂತಿ ಮಾತ್ರ ಸುರಕ್ಷಿತ ಭವಿಷ್ಯವನ್ನು ಖಾತರಿಪಡಿಸುತ್ತದೆ" ಎಂದು ಹೇಳಿದರು.
Advertisement