
ಇಸ್ಲಾಮಾಬಾದ್: ಭಾರತೀಯ ವಿಮಾನಗಳಿಗೆ ತನ್ನ ವಾಯುಮಾರ್ಗದಲ್ಲಿ ಸಂಚರಿಸದಂತೆ ವಿಧಿಸಿರುವ ನಿಷೇಧವನ್ನು ಮತ್ತೊಂದು ತಿಂಗಳು ವಿಸ್ತರಿಸಲು ಪಾಕಿಸ್ತಾನ ನಿರ್ಧರಿಸಿದೆ ಎಂದು ಬುಧವಾರ ಮಾಧ್ಯಮ ವರದಿಯೊಂದು ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ತೆಗೆದುಕೊಂಡ ಹಲವು ಕಠಿಣ ಕ್ರಮಗಳ ನಂತರ ಪಾಕಿಸ್ತಾನ ಕಳೆದ ತಿಂಗಳಿಂದ ಭಾರತಕ್ಕೆ ತನ್ನ ವಾಯು ಮಾರ್ಗವನ್ನು ನಿಷೇಧಿಸಿದೆ.
ಒಂದು ಬಾರಿಗೆ ಒಂದು ತಿಂಗಳಿಗಿಂತ ಹೆಚ್ಚು ಕಾಲ ವಾಯು ಮಾರ್ಗಕ್ಕೆ ನಿರ್ಬಂಧಗಳನ್ನು ವಿಧಿಸಲಾಗುವುದಿಲ್ಲ ಎಂಬ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ(ICAO) ನಿಯಮಗಳ ಪ್ರಕಾರ, ಮೇ 23 ರವರೆಗೆ ಒಂದು ತಿಂಗಳ ಕಾಲ ನಿಷೇಧವನ್ನು ವಿಧಿಸಲಾಗಿದೆ.
ನಿಷೇಧವನ್ನು ವಿಸ್ತರಿಸುವ ನಿರ್ಧಾರವನ್ನು ಬುಧವಾರ ಅಥವಾ ಗುರುವಾರ ಘೋಷಿಸುವ ನಿರೀಕ್ಷೆಯಿದೆ ಮತ್ತು ಈ ಸಂಬಂಧ ವಾಯುಪಡೆಯವರಿಗೆ(ನೋಟಮ್) ನೋಟಿಸ್ ನೀಡಲಾಗುವುದು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
Advertisement