ಭಾರತದಲ್ಲಿ ತಯಾರಿಸಿ, ಆದರೆ ಅಮೆರಿಕಾದಲ್ಲಿ ಮಾರಾಟ ಸುಂಕ ಎದುರಿಸಬೇಕು: Apple ಕಂಪೆನಿಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಅಮೆರಿಕದ ಪರಮಾಣು ಶಕ್ತಿಯನ್ನು ಹೆಚ್ಚಿಸಲು ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಅವರು ಬಹು ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕಿದ ಸಂದರ್ಭದಲ್ಲಿ ಅವರ ಹೇಳಿಕೆಗಳು ಬಂದಿವೆ.
Donald Trump and Tim Cook
ಆಪಲ್ ಕಂಪೆನಿ ಮುಖ್ಯಸ್ಥ ಟಿಮ್ ಕುಕ್ ಮತ್ತು ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಆಪಲ್ ಕಂಪೆನಿ ತನ್ನ ಘಟಕವನ್ನು ಭಾರತದಲ್ಲಿ ತೆರೆಯಬಹುದು ಎಂದು ಹೇಳಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕವಿಲ್ಲದೆ ಅಮೆರಿಕದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂಬ ಷರತ್ತು ವಿಧಿಸಿದ್ದಾರೆ.

ಅಮೆರಿಕದ ಪರಮಾಣು ಶಕ್ತಿಯನ್ನು ಹೆಚ್ಚಿಸಲು ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಅವರು ಬಹು ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕಿದ ಸಂದರ್ಭದಲ್ಲಿ ಅವರ ಹೇಳಿಕೆಗಳು ಬಂದಿವೆ.

ಆದರೆ ಟಿಮ್ ಕುಕ್ ಅವರು ಭಾರತಕ್ಕೆ ಹೋಗುವುದಿಲ್ಲ ಎಂದು ನಾನು ಅಂದುಕೊಳ್ಳುತ್ತೇನೆ. ಅವರು ಭಾರತದಲ್ಲಿ ಘಟಕ ಸ್ಥಾಪಿಸುವುದಾಗಿ ಹೇಳಿದರು. ನೀವು ಭಾರತಕ್ಕೆ ಹೋಗುವುದಾದರೆ ಓಕೆ ಸರಿ, ಆದರೆ ನೀವು ಸುಂಕವಿಲ್ಲದೆ ಇಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೇನೆ ಎಂದು ಟ್ರಂಪ್ ಹೇಳಿದರು.

Donald Trump and Tim Cook
ಅಮೆರಿಕದಲ್ಲಿ iPhone ತಯಾರಿಸದಿದ್ದರೆ, ಶೇ. 25ರಷ್ಟು ತೆರಿಗೆ: Apple ಗೆ Donald Trump ಬೆದರಿಕೆ; ಭಾರತಕ್ಕೆ ಗುನ್ನ ಇಟ್ಟ 'ದೊಡ್ಡಣ್ಣ'!

ನಾವು ಐಫೋನ್ ಬಗ್ಗೆ ಮಾತನಾಡುತ್ತಿದ್ದೇವೆ. ಅವರು ಅದನ್ನು ಅಮೆರಿಕದಲ್ಲಿ ಮಾರಾಟ ಮಾಡಲು ಬಯಸಿದರೆ ಇಲ್ಲಿಯೇ ನಿರ್ಮಾಣ ಮಾಡಲಿ ಎಂದರು.

ನಿನ್ನೆ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಟ್ರಂಪ್, ಅಮೆರಿಕದಲ್ಲಿ ಮಾರಾಟವಾಗುವ ಆಪಲ್ ಐಫೋನ್‌ ಭಾರತ ಅಥವಾ ಬೇರೆಲ್ಲಿಯೂ ಅಲ್ಲ, ಅಮೆರಿಕದಲ್ಲಿ ತಯಾರಿಸಬೇಕೆಂದು ನಿರೀಕ್ಷಿಸುವುದಾಗಿ ಹೇಳಿದ್ದರು, ಅದು ಪಾಲಿಸದಿದ್ದರೆ ತಂತ್ರಜ್ಞಾನ ಕಂಪನಿಯ ಉತ್ಪನ್ನಗಳ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com