ಅಮೆರಿಕದಲ್ಲಿ iPhone ತಯಾರಿಸದಿದ್ದರೆ, ಶೇ. 25ರಷ್ಟು ತೆರಿಗೆ: Apple ಗೆ Donald Trump ಬೆದರಿಕೆ; ಭಾರತಕ್ಕೆ ಗುನ್ನ ಇಟ್ಟ 'ದೊಡ್ಡಣ್ಣ'!

ಅಮೆರಿಕದಲ್ಲಿ ಐಫೋನ್‌ಗಳನ್ನು ತಯಾರಿಸದಿದ್ದರೆ ಆಪಲ್ ಉತ್ಪನ್ನಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಟಿಮ್ ಕುಕ್-ಡೊನಾಲ್ಡ್ ಟ್ರಂಪ್
ಟಿಮ್ ಕುಕ್-ಡೊನಾಲ್ಡ್ ಟ್ರಂಪ್
Updated on

ಅಮೆರಿಕದಲ್ಲಿ ಐಫೋನ್‌ಗಳನ್ನು ತಯಾರಿಸದಿದ್ದರೆ ಆಪಲ್ ಉತ್ಪನ್ನಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ಬೆದರಿಕೆ ಹಾಕಿದ್ದು ಐಫೋನ್‌ಗಳ ಬೆಲೆಯಲ್ಲಿ ನಾಟಕೀಯ ಏರಿಕೆಗೆ ಕಾರಣವಾಗಬಹುದು. ಇದು ಅಮೆರಿಕದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಆಪಲ್‌ನ ಮಾರಾಟ ಮತ್ತು ಲಾಭ ಎರಡಕ್ಕೂ ಭಾರಿ ನಷ್ಟವನ್ನುಂಟುಮಾಡಬಹುದು. ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಬೆದರಿಕೆಯ ನಂತರ, ಆಪಲ್ ಈಗ ಅಮೆಜಾನ್ ಮತ್ತು ವಾಲ್ಮಾರ್ಟ್ ಸೇರಿದಂತೆ ಇತರ ಹಲವು ಪ್ರಮುಖ ಕಂಪನಿಗಳೊಂದಿಗೆ ಟ್ರಂಪ್ ಸರ್ಕಾರದ ಗುರಿಯಾಗಿದೆ. ಟ್ರಂಪ್ ವಿಧಿಸಿದ ಆಮದು ಸುಂಕದಿಂದ ಉಂಟಾಗುವ ಅನಿಶ್ಚಿತತೆಗಳು ಮತ್ತು ಹಣದುಬ್ಬರದ ಒತ್ತಡಗಳಿಗೆ ಈ ಕಂಪನಿಗಳು ಪ್ರತಿಕ್ರಿಯಿಸಲು ಪ್ರಯತ್ನಿಸುತ್ತಿವೆ.

ನಾನು ಬಹಳ ಹಿಂದೆಯೇ ಆಪಲ್ ಸಿಇಒ ಟಿಮ್ ಕುಕ್ ಅವರಿಗೆ, ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳನ್ನು ಭಾರತ ಅಥವಾ ಬೇರೆ ಯಾವುದೇ ಸ್ಥಳದಲ್ಲಿ ಅಲ್ಲ, ಅಮೆರಿಕದಲ್ಲಿ ತಯಾರಿಸಬೇಕೆಂದು ಈ ಹಿಂದೆಯೇ ಸೂಚಿಸಿದ್ದೆ. ಇದು ನಿಜವಾಗದಿದ್ದರೆ, ಆಪಲ್ ಅಮೆರಿಕಕ್ಕೆ ಕನಿಷ್ಠ ಶೇಕಡ 25ರಷ್ಟು ಸುಂಕವನ್ನು ಪಾವತಿಸಬೇಕಾಗುತ್ತದೆ ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಚೀನಾದ ಮೇಲಿನ ಅಮೆರಿಕದ ಸುಂಕ ನೀತಿಯಿಂದಾಗಿ, ಆಪಲ್ ಸಿಇಒ ಟಿಮ್ ಕುಕ್ ಪೂರೈಕೆ ಸರಪಳಿಯನ್ನು ಹಾಗೆಯೇ ಇರಿಸಿಕೊಳ್ಳಲು ಐಫೋನ್ ಉತ್ಪಾದನೆಯನ್ನು ಭಾರತಕ್ಕೆ ಸ್ಥಳಾಂತರಿಸುವ ಬಗ್ಗೆ ಯೋಚಿಸುತ್ತಿದ್ದರು. ಆದರೆ ಆಪಲ್‌ನ ಯೋಜನೆಯು ಅಮೆರಿಕದ ಅಧ್ಯಕ್ಷರಿಗೆ ನಿರಾಶೆಗೆ ಕಾರಣವಾಗಿದೆ. ಅವರು ಇತ್ತೀಚೆಗೆ ಮಧ್ಯಪ್ರಾಚ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಈ ವಿಷಯವನ್ನು ಎತ್ತಿದರು.

ತೈವಾನ್‌ನ ಫಾಕ್ಸ್‌ಕಾನ್ ಕಂಪನಿ ಮತ್ತು ಭಾರತೀಯ ಕಂಪನಿ ಟಾಟಾ ಎಲೆಕ್ಟ್ರಾನಿಕ್ಸ್ ಭಾರತದಲ್ಲಿ ಆಪಲ್ ಐಫೋನ್‌ಗಳನ್ನು ತಯಾರಿಸುತ್ತವೆ. ಆಪಲ್ ಸಿಇಒ ಟಿಮ್ ಕುಕ್ ಇತ್ತೀಚೆಗೆ ಕಂಪನಿಯ ತ್ರೈಮಾಸಿಕ ಫಲಿತಾಂಶಗಳ ನಂತರ, ಜೂನ್ ತ್ರೈಮಾಸಿಕದಲ್ಲಿ ಅಮೆರಿಕದಲ್ಲಿ ಮಾರಾಟವಾಗುವ ಹೆಚ್ಚಿನ ಐಫೋನ್‌ಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಎಂದು ಹೇಳಿದ್ದರು. ಏಕೆಂದರೆ ಆಪಲ್ ತನ್ನ ಪೂರೈಕೆ ಸರಪಳಿಯನ್ನು ಚೀನಾದಿಂದ ದೂರ ಸ್ಥಳಾಂತರಿಸುತ್ತಿದೆ. ಆದರೆ ಜೂನ್ ನಂತರ ಪರಿಸ್ಥಿತಿ ಹೇಗಿರುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

ಟಿಮ್ ಕುಕ್-ಡೊನಾಲ್ಡ್ ಟ್ರಂಪ್
Watch | ಭಾರತದಲ್ಲಿ ಹೂಡಿಕೆ ಮಾಡ್ಬೇಡಿ: Apple CEO ಟಿಮ್ ಕುಕ್ ಗೆ ಟ್ರಂಪ್ ಒತ್ತಡ!

ಆಪಲ್ ಮೇಲೆ ಶೇ.25ರಷ್ಟು ಸುಂಕವನ್ನು ಘೋಷಿಸುವುದರ ಜೊತೆಗೆ, ಯುರೋಪಿಯನ್ ಒಕ್ಕೂಟದ ಮೇಲೆ ಶೇ.50ರಷ್ಟು ಸುಂಕವನ್ನು ವಿಧಿಸಲು ಟ್ರಂಪ್ ಶಿಫಾರಸು ಮಾಡಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನ ವ್ಯಾಪಾರದ ಲಾಭ ಪಡೆಯುವ ಪ್ರಾಥಮಿಕ ಉದ್ದೇಶಕ್ಕಾಗಿ ರಚಿಸಲಾದ ಯುರೋಪಿಯನ್ ಒಕ್ಕೂಟದೊಂದಿಗೆ ವ್ಯವಹರಿಸುವುದು ತುಂಬಾ ಕಷ್ಟಕರವಾಗಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್‌ನಲ್ಲಿ ಬರೆದಿದ್ದಾರೆ. ಅವರ ಪ್ರಬಲ ವ್ಯಾಪಾರ ಅಡೆತಡೆಗಳು, ವ್ಯಾಟ್ ತೆರಿಗೆಗಳು, ಕಾರ್ಪೊರೇಟ್ ದಂಡಗಳು, ವಿತ್ತೀಯವಲ್ಲದ ವ್ಯಾಪಾರ ಅಡೆತಡೆಗಳು, ವಿತ್ತೀಯ ಕುಶಲತೆ, US ಕಂಪನಿಗಳ ವಿರುದ್ಧ ಅನ್ಯಾಯದ ಮೊಕದ್ದಮೆಗಳು ಮತ್ತು ಇತರ ಹಲವು ಅಂಶಗಳು ಪ್ರತಿ ವರ್ಷ ಯುನೈಟೆಡ್ ಸ್ಟೇಟ್ಸ್‌ಗೆ $25,000,000,000 ಕ್ಕಿಂತ ಹೆಚ್ಚಿನ ವ್ಯಾಪಾರ ಕೊರತೆಯನ್ನು ಉಂಟುಮಾಡುತ್ತಿವೆ. ಈ ಸಂಖ್ಯೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಅವರೊಂದಿಗಿನ ನಮ್ಮ ಚರ್ಚೆಗಳು ಯಾವುದೇ ಫಲಿತಾಂಶವನ್ನು ನೀಡುತ್ತಿಲ್ಲ. ಆದ್ದರಿಂದ 2025ರ ಜೂನ್ 1ರಿಂದ EU ಮೇಲೆ ನೇರ ಶೇಕಡ 50ರಷ್ಟು ಸುಂಕವನ್ನು ನಾನು ಶಿಫಾರಸು ಮಾಡುತ್ತಿದ್ದೇನೆ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.

ಟಿಮ್ ಕುಕ್-ಡೊನಾಲ್ಡ್ ಟ್ರಂಪ್
ಹಾರ್ವರ್ಡ್‌ ವಿ.ವಿ ಜೊತೆ ಡೊನಾಲ್ಡ್‌ ಟ್ರಂಪ್‌ ಜಟಾಪಟಿ: ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com