
ಇಸ್ಲಾಮಾಬಾದ್: ಇತ್ತೀಚಿಗೆ ನಡೆದ ಸೇನಾ ಕಾರ್ಯಾಚರಣೆ ವೇಳೆಯಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಿರುವುದಾಗಿ ಬೊಗಳೆ ಪ್ರಚಾರ ನಡೆಸುತ್ತಿರುವ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮುಜುಗರ ಎದುರಾಗಿದೆ.
ಹೌದು. ಹೈ ಪ್ರೊಫೈಲ್ ಔತಣ ಕೂಟದಲ್ಲಿ ಹಳೆಯದಾದ ಫ್ರೇಮ್ ಮಾಡಿದ ಫೋಟೋವೊಂದನ್ನು ಪ್ರಧಾನಿ ಶರೀಫ್ ಅವರಿಗೆ ಗಿಫ್ಟ್ ಆಗಿ ನೀಡಿದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಜನರಲ್ ಅಸಿಮ್ ಮುನೀರ್ ಅವರನ್ನು ಪಾಕಿಸ್ತಾನ ಸೇರಿದಂತೆ ವಿಶ್ವದಾದ್ಯಂತ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಇದು ಹಳೆಯದಾದ ಚೀನಾದ ಮಿಲಿಟರಿ ಕಾರ್ಯಾಚರಣೆಯಂತೆ ತೋರುತ್ತದೆ. ಇದು ಆನ್ ಲೈನ್ ಬಳಕೆದಾರರ ಕಣ್ಣಿಗೆ ಬೀಳುತ್ತಿದ್ದಂತೆಯೇ ಇದು ನಾಲ್ಕು ವರ್ಷ ಹಳೆಯದಾದ ಚೀನಾ ಮಿಲಿಟರಿ ಕಾರ್ಯಾಚರಣೆಯ ಫೋಟೋ ಎಂಬುದು ಕಂಡುಬಂದಿದೆ. ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ ಕಾರ್ಯಾಚರಣೆಯ ಫೋಟೋಗಳನನು ನೇರವಾಗಿ ತೆಗೆದುಹಾಕಲಾಗಿದೆ ಎಂದು ಹಲವಾರು ಬಳಕೆದಾರರು ಹೇಳಿದ್ದು, ಆಪರೇಷನ್ ಬನ್ಯಾನ್' ಕಾರ್ಯಾಚರಣೆ ಕುರಿತ ಪಾಕಿಸ್ತಾನದ ದೃಢತೆಯನ್ನು ಪ್ರಶ್ನಿಸುತ್ತಿದ್ದಾರೆ.
ಭಾರತದ ವಿರುದ್ಧ ಪಾಕ್ ಸೇನೆಯ ದಾಳಿಯದು ಎಂದು ವಿವರಿಸಲು ಪಾಕಿಸ್ತಾನದ ಸೇನಾ ಮುಖ್ಯಸ್ಥರು ಪಿಎಂ ಶೆಹಬಾಜ್ ಷರೀಫ್ ಅವರಿಗೆ ಚೀನಾದ ಮಿಲಿಟರಿ ಕಾರ್ಯಾಚರಣೆಯ ಫೋಟೋವೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಹೀಗಾಗಿ ಕೇವಲ ನಕಲಿ ಗೆಲುವಿನ ನಿರೂಪಣೆ ಮಾತ್ರವಲ್ಲದೇ ಅದರೊಂದಿಗೆ ನಕಲಿ ಫೋಟೋ ಕೂಡ ಇದೆ. ವಾಟ್ ಎ ಜೋಕ್ ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಪಾಕಿಸ್ತಾನದವರು ಅವರ ಮಿಲಿಟರಿ ಕಾರ್ಯಾಚರಣೆಯ ಮೂಲ ದೃಶ್ಯಗಳನ್ನು ಸಹ ತಯಾರಿಸಲು ಸಾಧ್ಯವಾಗಿಲ್ಲ ಎಂದು ಮತ್ತೋರ್ವ ಎಕ್ಸ್ ಬಳಕೆದಾರರು ವ್ಯಂಗ್ಯವಾಡಿದ್ದಾರೆ. ಒಟ್ಟಿನಲ್ಲಿ ಈ ಘಟನೆಯಿಂದಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಇಬ್ಬರೂ ಭಾರೀ ಮುಜುಗರದ ಸನ್ನಿವೇಶವನ್ನು ಎದುರಿಸುತ್ತಿದ್ದಾರೆ.
Advertisement