ಯಾಹ್ಯಾ ಸಿನ್ವಾರ್ ಸಹೋದರ, ಹಮಾಸ್ ನಾಯಕ ಮೊಹಮ್ಮದ್ ಸಿನ್ವಾರ್ ಹತ್ಯೆ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಮೊಹಮ್ಮದ್ ಗಾಜಾದಲ್ಲಿ ಹಮಾಸ್‌ನ ಸಂಭಾವ್ಯ ನಾಯಕ ಮತ್ತು ಕಳೆದ ವರ್ಷ ಇಸ್ರೇಲಿ ಪಡೆಗಳಿಂದ ಕೊಲ್ಲಲ್ಪಟ್ಟ ಯಾಹ್ಯಾ ಸಿನ್ವಾರ್ ಅವರ ಸಹೋದರನಾಗಿದ್ದಾನೆ.
ಯಾಹ್ಯಾ ಸಿನ್ವಾರ್ ಸಹೋದರ, ಹಮಾಸ್ ನಾಯಕ ಮೊಹಮ್ಮದ್ ಸಿನ್ವಾರ್ ಹತ್ಯೆ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
Updated on

ಟೆಲ್ ಅವಿವ್: ಇಸ್ರೇಲ್ ಸೇನೆ ಹಿರಿಯ ಹಮಾಸ್ ನಾಯಕ ಮೊಹಮ್ಮದ್ ಸಿನ್ವಾರ್ ಅವರನ್ನು ಹತ್ಯೆ ಮಾಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಂದು ಹೇಳಿದ್ದಾರೆ.

ನೆತನ್ಯಾಹು ಅವರ ಹೇಳಿಕೆ ಇತ್ತೀಚೆಗೆ ಗಾಜಾ ಪಟ್ಟಿಯ ಆಸ್ಪತ್ರೆಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಅವರ ಸಾವನ್ನು ದೃಢಪಡಿಸಿದೆ.

ಮೊಹಮ್ಮದ್ ಗಾಜಾದಲ್ಲಿ ಹಮಾಸ್‌ನ ಸಂಭಾವ್ಯ ನಾಯಕ ಮತ್ತು ಕಳೆದ ವರ್ಷ ಇಸ್ರೇಲಿ ಪಡೆಗಳಿಂದ ಕೊಲ್ಲಲ್ಪಟ್ಟ ಯಾಹ್ಯಾ ಸಿನ್ವಾರ್ ಅವರ ಸಹೋದರನಾಗಿದ್ದಾನೆ.

ಬುಧವಾರ ಸಂಸತ್ತಿನಲ್ಲಿ ಮಾತನಾಡಿದ ನೆತನ್ಯಾಹು, ಯುದ್ಧಪೀಡಿತ ಪ್ರದೇಶದಲ್ಲಿ ಇಸ್ರೇಲ್ ಕೊಂದ ಹಮಾಸ್ ನಾಯಕರ ಪಟ್ಟಿಯಲ್ಲಿ ಸಿನ್ವಾರ್ ಅವರನ್ನು ಸೇರಿಸಿದ್ದಾರೆ.

"'600 ದಿನಗಳ War of Revival ನಲ್ಲಿ, ನಾವು ನಿಜವಾಗಿಯೂ ಮಧ್ಯಪ್ರಾಚ್ಯದ ಮುಖವನ್ನು ಬದಲಾಯಿಸಿದ್ದೇವೆ... ನಾವು ಭಯೋತ್ಪಾದಕರನ್ನು ನಮ್ಮ ಪ್ರದೇಶದಿಂದ ಓಡಿಸಿದ್ದೇವೆ, ಬಲವಂತವಾಗಿ ಗಾಜಾ ಪಟ್ಟಿಯನ್ನು ಪ್ರವೇಶಿಸಿದ್ದೇವೆ, ಹತ್ತಾರು ಸಾವಿರ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದೇವೆ,... ಮೊಹಮ್ಮದ್ ಸಿನ್ವಾರ್ ಅವರನ್ನು ನಿರ್ಮೂಲನೆ ಮಾಡಿದ್ದೇವೆ" ಎಂದು ನೆತನ್ಯಾಹು ಸಂಸತ್ತಿಗೆ ತಿಳಿಸಿದ್ದಾರೆ.

ಮೇ 13 ರಂದು ದಕ್ಷಿಣ ಗಾಜಾ ನಗರವಾದ ಖಾನ್ ಯೂನಿಸ್‌ನಲ್ಲಿ ಇಸ್ರೇಲ್ ವಾಯುದಾಳಿಗಳಲ್ಲಿ ಸಿನ್ವಾರ್ ನ್ನು ಗುರಿಯಾಗಿಸಿಕೊಂಡಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿದ್ದವು. ಆ ಸಮಯದಲ್ಲಿ, ಇಸ್ರೇಲ್ ಮಿಲಿಟರಿ "ಖಾನ್ ಯೂನಿಸ್‌ನಲ್ಲಿರುವ ಯುರೋಪಿಯನ್ ಆಸ್ಪತ್ರೆಯ ಕೆಳಗೆ ಭೂಗತ ಭಯೋತ್ಪಾದಕ ಮೂಲಸೌಕರ್ಯ ಸ್ಥಳದಲ್ಲಿ ನೆಲೆಗೊಂಡಿರುವ ಹಮಾಸ್ ಭಯೋತ್ಪಾದಕರ ಮೇಲೆ ನಿಖರವಾದ ದಾಳಿ ನಡೆಸಿದೆ" ಎಂದು ಹೇಳಿತ್ತು.

ಯಾಹ್ಯಾ ಸಿನ್ವಾರ್ ಸಹೋದರ, ಹಮಾಸ್ ನಾಯಕ ಮೊಹಮ್ಮದ್ ಸಿನ್ವಾರ್ ಹತ್ಯೆ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಹತ್ಯೆ; ಕೊನೇ ಕ್ಷಣಗಳ ವಿಡಿಯೋ...

ಗಾಜಾದಲ್ಲಿ ಯುದ್ಧಕ್ಕೆ ಕಾರಣವಾದ ಹಮಾಸ್‌ನ ಅಕ್ಟೋಬರ್ 7, 2023 ರ ದಾಳಿಯ ಮಾಸ್ಟರ್‌ಮೈಂಡ್ ಎಂದು ಇಸ್ರೇಲ್ ಆರೋಪಿಸಿದ್ದ ಸಿನ್ವಾರ್ ಅವರ ಸಹೋದರ ಯಾಹ್ಯಾ ಅವರನ್ನು 2024 ರ ಅಕ್ಟೋಬರ್‌ನಲ್ಲಿ ಪ್ರದೇಶದ ದಕ್ಷಿಣದಲ್ಲಿ ಕೊಲ್ಲಲಾಯಿತು.

ಹಮಾಸ್‌ನ ಸಶಸ್ತ್ರ ವಿಭಾಗವಾದ ಎಜ್ಜೆಡೈನ್ ಅಲ್-ಕಸ್ಸಾಮ್ ಬ್ರಿಗೇಡ್‌ಗಳ ಮುಖ್ಯಸ್ಥರಾಗಿ ಮೊಹಮ್ಮದ್ ಸಿನ್ವಾರ್ ಅಧಿಕಾರ ವಹಿಸಿಕೊಂಡ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com