
ಬ್ಯಾಂಕಾಕ್: ಥಾಯ್ಲೆಂಡ್ ಪ್ರವಾಸಕ್ಕೆ ಹೋಗುವ ಪ್ರವಾಸಿಗರಿಗೆ ಇಲ್ಲೊಂದು ಮಹತ್ವದ ಸುದ್ದಿ ಇದ್ದು, PhotoShoot ಗೆ ಹೋದ ಭಾರತ ಮೂಲದ ಪ್ರವಾಸಿಗನ ಮೇಲೆ ವ್ಯಾಘ್ರನ ದಾಳಿ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಹೇಳಿ ಕೇಳಿ ಥಾಯ್ಲೆಂಡ್ ಬಹುತೇಕ ಮಧ್ಯಮವರ್ಗದ ಭಾರತೀಯರ ಪ್ರವಾಸದ ಅಚ್ಚುಮೆಚ್ಚಿನ ಪ್ರವಾಸಿ ತಾಣವಾಗಿದ್ದು, ಪ್ರಮುಖವಾಗಿ ಥಾಯ್ಲೆಂಡ್ ನ ಫುಕೆಟ್ ವಿದೇಶಿ ಪ್ರವಾಸಿಗರಿಗೆ ಫೇಮಸ್ ಸ್ಪಾಟ್, ಥೈಲ್ಯಾಂಡ್‌ನ ದ್ವೀಪವಾದ ಇಲ್ಲಿ ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ಹಲವು ಆಕರ್ಷಣೆಗಳಿದ್ದು ಈ ಪೈಕಿ ಟೈಗರ್ ಕಿಂಗ್‌ಡಮ್ ಕೂಡ ಒಂದು.
PhotoShoot ಗೆ ಹೋದವನ ಮೇಲೆ ವ್ಯಾಘ್ರನ ದಾಳಿ
ಇದೇ ಟೈಗರ್ ಕಿಂಗ್ ಡಮ್ ಗೆ ಭಾರತ ಮೂಲದ ಪ್ರವಾಸಿಗರೊಬ್ಬರು ಭೇಟಿ ನೀಡಿದ್ದು, ಈ ವೇಳೆ ಇಲ್ಲಿ ಹುಲಿಯೊಂದು ಆ ಪ್ರವಾಸಿಗನ ಮೇಲೆ ದಾಳಿ ನಡೆಸಿದ ಅನಿರೀಕ್ಷಿತ ಘಟನೆ ನಡೆದಿದೆ.
ಈ ಕುರಿತ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫುಕೆಟ್‌ನಲ್ಲಿರುವ ಟೈಗರ್ ಕಿಂಗ್‌ಡಮ್‌ಗೆ ಭೇಟಿ ನೀಡಿದ ವೇಳೆ ಈ ಘಟನೆ ನಡೆದಿದ್ದು, ಪ್ರವಾಸದ ಮೋಜಿನ ಕ್ಷಣ ಭಯಾನಕ ದುರಂತವಾಗಿ ಬದಲಾಗಿತ್ತು.
ವಿಡಿಯೋ ವೈರಲ್
ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು ಸಿದ್ಧಾರ್ಥ್ ಶುಕ್ಲಾ ಎಂಬುವವರು ಪೋಸ್ಟ್ ಮಾಡಿದ್ದು, ಥೈಲ್ಯಾಂಡ್‌ನಲ್ಲಿ ಭಾರತೀಯ ವ್ಯಕ್ತಿಯೊಬ್ಬರ ಮೇಲೆ ಹುಲಿ ದಾಳಿ ಮಾಡಿದೆ ಎಂದು ತೋರುತ್ತದೆ. ಹುಲಿಗಳನ್ನು ಸಾಕುಪ್ರಾಣಿಗಳಂತೆ ಸಾಕುವುದು ಮತ್ತು ಜನರು ಸೆಲ್ಫಿ ತೆಗೆದುಕೊಳ್ಳುವುದು, ಅವುಗಳಿಗೆ ಆಹಾರ ನೀಡುವುದು ಇತ್ಯಾದಿಗಳನ್ನು ಮಾಡುವ ಸ್ಥಳಗಳಲ್ಲಿ ಇದು ಒಂದು ಎಂದು ಅವರು ಬರೆದುಕೊಂಡಿದ್ದಾರೆ.
ಆಗಿದ್ದೇನು?
ವೈರಲ್ ಆದ ವೀಡಿಯೊದಲ್ಲಿ ದಾಳಿಗೊಳಗಾದ ಆ ವ್ಯಕ್ತಿ ಉದ್ಯಾನವನದಲ್ಲಿ ಹುಲಿಯ ಪಕ್ಕದಲ್ಲಿ ನಡೆದುಕೊಂಡು ಹೋಗುವುದನ್ನು ಮತ್ತು ಫೋಟೋಗಾಗಿ ಪೋಸ್ ನೀಡಲು ಕುಳಿತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಹುಲಿಯ, ತರಬೇತುದಾರನೊಬ್ಬ ಕೋಲನ್ನು ಬಳಸಿ ಹುಲಿಯನ್ನು ಕೂರಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಉಗ್ರ ಸ್ವರೂಪಿಯಾದ ಹುಲಿ ಆಕ್ರಮಣಕಾರಿಯಾಗಿ ಪ್ರವಾಸಿಗನ ಮೇಲೆ ದಾಳಿ ಮಾಡಿದೆ. ಇನ್ನು ದಾಳಿಗೊಳಗಾದ ಪ್ರವಾಸಿಗ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕಮೆಂಟ್ ಒಂದಕ್ಕೆ ಶುಕ್ಲಾ ಉತ್ತರಿಸಿದ್ದಾರೆ.
Advertisement