
ಲಂಡನ್: ಲಂಡನ್ ನ ಟ್ಯೂಬ್ ರೈಲಿನಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಕೈಯಿಂದ ಊಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ಕೆಲವರು ಇದನ್ನು ಸಾಂಪ್ರದಾಯಿಕ ಅಭ್ಯಾಸ ಎಂದರೆ ಮತ್ತೆ ಕೆಲವರು ಇದನ್ನು 'ಅನೈರ್ಮಲ್ಯ', ಸಾರ್ವಜನಿಕ ಜಾಗದಲ್ಲಿ ಹಾಗೆ ಮಾಡಬಾರದು ಅನುತ್ತಿದ್ದಾರೆ. ಆದರೆ ಏಷ್ಯಾ ಮತ್ತು ಆಫ್ರಿಕಾ ಸೇರಿದಂತೆ ಪ್ರಪಂಚದ ಅನೇಕ ಭಾಗಗಳಲ್ಲಿ ಅತಿ ಹೆಚ್ಚಾಗಿ ರೂಢಿಯಾಗಿರುವ ಕೈಗಳಿಂದ ತಿನ್ನುವುದು ಅನಾರೋಗ್ಯಕರವಾಗಿದೆಯೇ? ಎಂಬ ಪ್ರಶ್ನೆ ಎದ್ದಿದೆ.
ವಿಡಿಯೋದಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಮೊಬೈಲ್ ನಲ್ಲಿ ಮಾತನಾಡುತ್ತಾ ಕೈಯಿಂದ ಕರಿ ಮತ್ತು ಅನ್ನವನ್ನು ತಿನ್ನುತ್ತಿರುವುದು ಸೆರೆಯಾಗಿದೆ. ಇದನ್ನು ಮೊದಲಿಗೆ TikTok ನಲ್ಲಿ ಶೇರ್ ಮಾಡಲಾಗಿದೆ. ತದನಂತರ ಎಕ್ಸ್ ಬಳಕೆದಾರರು ಹೆಚ್ಚೆಚ್ಚು ಶೇರ್ ಮಾಡುತ್ತಾ ವಿಡಿಯೋ ವೈರಲ್ ಆಗಿದೆ.
ಜೊತೆಗೆ ಆನ್ ಲೈನ್ ನಲ್ಲಿ ಕೈಯಲ್ಲಿ ಅನ್ನ ತಿನ್ನುವ ಅಭ್ಯಾಸದ ಕುರಿತು ಪರ ಹಾಗೂ ವಿರುದ್ಧ ತೀವ್ರವಾದ ಚರ್ಚೆ ನಡೆಯುತ್ತಿದೆ. ಪಾಶ್ಚಾತ್ಯರು ಯಾವಾಗಲೂ ಕೈಯಿಂದ ತಿನ್ನುವುದನ್ನು ಕೀಳಾಗಿ ನೋಡುತ್ತಾರೆ. ಆದರೆ ಭಾರತ ಸೇರಿದಂತೆ ವಿಶ್ವದ ಅನೇಕ ಕಡೆಗಳಲ್ಲಿ ಕೈಯಿಂದ ತಿನ್ನುವುದು ರೂಢಿಯಲ್ಲಿದ್ದು, ಕೆಲವರು ಇದು ಆರೋಗ್ಯಕ್ಕೆ ಒಳ್ಳೆಯದಲ್ಲಾ ಎಂಬಂತಹ ಸಲಹೆ ನೀಡಿದ್ದಾರೆ.
ಆಕೆ ಯಾರೊಂದಿಗೂ ಮಾತನಾಡುತ್ತಿಲ್ಲ. ಆಕೆ ತನ್ನ ಊಟವನ್ನು ಎಂಜಾಯ್ ಮಾಡುತ್ತಿದ್ದಾರೆ. ಆಕೆಯನ್ನು ತನ್ನ ಪಾಡಿಗೆ ಇರುವುದನ್ನು ಬಿಟ್ಟು ನಿಮ್ಮದೇನೂ ಅದ್ನ ನೋಡಿಕೊಳ್ಳಿ ಎಂದು ಮತ್ತೋರ್ವ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
Advertisement