

ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಿಂದೂ ಧರ್ಮದೊಂದಿಗೆ ತೊಡಗಿಸಿಕೊಳ್ಳುವಂತೆ ಅಮೆರಿಕಾದ ಹಿಂದೂ ಸಂಘಟನೆಯೊಂದು ಕೇಳಿಕೊಂಡಿದೆ. ತನ್ನ ಧರ್ಮದೊಂದಿಗೆ ಮರು ತೊಡಗಿಸಿಕೊಳ್ಳಲು ತನ್ನ ಪತ್ನಿ ಉಷಾ ಪ್ರೋತ್ಸಾಹಿಸಿರುವುದಾಗಿ ವ್ಯಾನ್ಸ್ ಹೇಳಿದ ನಂತರ ಹಿಂದೂ ಸಂಘಟನೆ ಈ ರೀತಿ ಹೇಳಿದೆ.
ಅಂತರ್ ಧರ್ಮೀಯ ವಿವಾಹದ ಬಗ್ಗೆ ವ್ಯಾನ್ಸ್ ಟೀಕೆಗೆ ಗುರಿಯಾಗಿದ್ದಾರೆ. ಹಿಂದೂ ಕುಟುಂಬದಲ್ಲಿ ಬೆಳೆದ ಉಷಾ, ನಾನು ಕ್ರಿಶ್ಚಿಯನ್ ಧರ್ಮದೊಂದಿಗೆ ಸಂಪರ್ಕ ಕಡಿತದಿಂದ ಪ್ರೇರಿತರಾಗಿದ್ದಾರೆ ಎಂದು ಹೇಳಿದ ನಂತರ ಟೀಕೆಗಳು ಕೇಳಿಬಂದಿದ್ದವು.
ಟೀಕೆಕಾರರಿಗೆ ತಿರುಗೇಟು ನೀಡಿದ ವ್ಯಾನ್ಸ್, ಕ್ರಿಶ್ಚಿಯನ್ ಧರ್ಮದಲ್ಲಿ ಮರು ತೊಡಗಿಸಿಕೊಳ್ಳಲು ತನ್ನ ಹೆಂಡತಿಯೇ ಪ್ರೋತ್ಸಾಹಿಸಿದಳು ಎಂದು ಹೇಳಿದ್ದಾರೆ.
"ನನ್ನ ಹೆಂಡತಿ, ನನ್ನ ಜೀವನದಲ್ಲಿ ನಾನು ಹೊಂದಿರುವ ಅತ್ಯಂತ ಅದ್ಭುತವಾದ ಆಶೀರ್ವಾದ. ಅನೇಕ ವರ್ಷಗಳ ನಂತರ ನನ್ನ ಧರ್ಮದೊಂದಿಗೆ ತೊಡಗಿಸಿಕೊಳ್ಳಲು ಆಕೆ ಪ್ರೋತ್ಸಾಹಿಸಿರುವುದಾಗಿ ಅವರು ಹೇಳಿದ್ದಾರೆ. ವಾನ್ಸ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹಿಂದೂ ಅಮೆರಿಕನ್ ಫೌಂಡೇಶನ್ (HAF)"ಹಿಂದೂ ಧರ್ಮದೊಂದಿಗೆ" ತೊಡಗಿಸಿಕೊಳ್ಳಲು ಕರೆ ನೀಡಿದೆ.
ನಿಮ್ಮ ಹೆಂಡತಿ ನಿಮ್ಮನ್ನು ಪ್ರೋತ್ಸಾಹಿಸಿದರೆ, ಅದಕ್ಕೆ ಪ್ರತಿಯಾಗಿ ಹಿಂದೂ ಧರ್ಮದೊಂದಿಗೆ ಏಕೆ ತೊಡಗಿಸಿಕೊಳ್ಳಬಾರದು? ಎಂದು HAF ಹೇಳಿದೆ ಕೇಳಿದೆ. ಧರ್ಮದ ವಿಷಯದಲ್ಲಿ ನೀವು ಮಾಡಿದಂತೆ ನಿಮ್ಮ ಸಂಗಾತಿಯು ಮಾಡಬೇಕು ಎಂದು ಬಯಸುವ ಅಗತ್ಯವನ್ನು ಹಿಂದೂ ಧರ್ಮವು ಹಂಚಿಕೊಳ್ಳುವುದಿಲ್ಲ ಎಂದು HAF ಹೇಳಿದೆ.
ಸಾರ್ವಜನಿಕ ವ್ಯಕ್ತಿ ಮತ್ತು ಉಪಾಧ್ಯಕ್ಷರಾಗಿ, ವ್ಯಾನ್ಸ್ ಅವರು "ಹಿಂದೂಗಳ ಆಚರಣೆಯ ಹಕ್ಕುಗಳನ್ನು ಒಪ್ಪಿಕೊಳ್ಳಬೇಕು. ನಿಮ್ಮಂತಹ ಕ್ರಿಶ್ಚಿಯನ್ ಸಾರ್ವಜನಿಕ ವ್ಯಕ್ತಿಯೊಬ್ಬರು ಹಿಂದೂಗಳ ಮೇಲೆ ಹಿಂದೂ ಧರ್ಮದ ಧನಾತ್ಮಕ ಪ್ರಭಾವವನ್ನು ಮತ್ತು ಹಿಂದೂಗಳ ಆಚರಣೆಯ ಹಕ್ಕುಗಳನ್ನು ಒಪ್ಪಿಕೊಳ್ಳುವುದು ಸಮಂಜಸವಾಗಿದೆ ಎಂದು ಸಂಘಟನೆ ಹೇಳಿದೆ.
Advertisement