

ನವದೆಹಲಿ: ಕ್ಲೌಡ್ ಫ್ಲೇರ್ ಸರ್ವರ್ ಸಮಸ್ಯೆಯಿಂದಾಗಿ ಜನಪ್ರಿಯ ಎಐ ಚಾಟ್ ಬಾಟ್ ವೇದಿಕೆಗಳಾದ ಚಾಟ್ ಜಿಪಿಟಿ, ಪರ್ಪ್ಲೆಕ್ಸಿಟಿ , ಎಕ್ಸ್, ಕ್ಯಾನ್ವ, ಗೂಗಲ್ ಕ್ಲೌಡ್ ಸೇರಿದಂತೆ ಪ್ರಮುಖ ಜಾಗತಿಕ ಫ್ಲಾಟ್ ಫಾರ್ಮ್ ಗಳಲ್ಲಿ ಇಂಟರ್ ನೆಟ್ ಸೇವೆಯಲ್ಲಿ ಕೆಲಕಾಲ ಸ್ಥಗಿತಗೊಂಡಿತ್ತು. ಇದರಿಂದ ಕೋಟ್ಯಂತರ ಬಳಕೆದಾರರು ಪರದಾಡಿದರು.
ಜನಪ್ರಿಯ ಗೇಮಿಂಗ್ ವೆಬ್ ಸೈಟ್ ಆದ ಲೀಗ್ ಆಫ್ ಲೆಜೆಂಡ್ಸ್ ಮತ್ತು ಲ್ಯಾಲೊರಂಟ್ ನಲ್ಲೂ ಅಡಚಣೆ ಉಂಟಾಗಿರುವುದಾಗಿ ವರದಿಯಾಗಿದೆ. ಇಂಟರ್ ನೆಟ್ ಮೂಲಸೌಕರ್ಯ ಕಂಪನಿಯಾದ ಕ್ಲೌಡ್ ಪ್ಲೇರ್ ನಲ್ಲಿ ಉಂಟಾದ ನೆಟ್ ವರ್ಕ್ ವೈಫಲ್ಯದಿಂದ ಈ ದೋಷ ಕಂಡುಬಂದಿದೆ ಎಂದು ತಿಳಿದುಬಂದಿದೆ.
ಸೇವೆಯನ್ನು ಪುನರ್ ಆರಂಭಿಸುವತ್ತ ಗಮನಹರಿಸಿದ್ದೇವೆ. ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು Cloudflare's system status site ತೋರಿಸುತಿತ್ತು.
ವೆಬ್‌ಸೈಟ್ ಡೌನ್‌ಡೆಕ್ಟರ್ ವರದಿ ಪ್ರಕಾರ, ವಿವಿಧ ಸೇವಾ ಅಡಚಣೆಗಳಿಗಾಗಿ 10,000 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ ಎನ್ನಲಾಗಿದೆ. ಇಂಟರ್ ನೆಟ್ ಸೇವೆ ಸ್ಥಗಿತದಿಂದ ಹತಾಶರಾದ ಕೆಲ ಬಳಕೆದಾರರು ಮಾಡಿರುವ ಮೀಮ್ಸ್ ಗಳು ಗಮನ ಸೆಳೆಯುತ್ತಿವೆ.
Advertisement