

ಬೆಲೆಮ್: ಬ್ರೆಜಿಲ್‌ನ ಬೆಲೆಮ್ ನಗರದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಶೃಂಗಸಭೆಯ (ಸಿಒಪಿ–30) ಮುಖ್ಯ ಸಭಾಂಗಣದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ.
ಈ ಬೆಂಕಿ ಅವಘಡದಲ್ಲಿ ಕನಿಷ್ಠ 13 ಜನರು ಗಾಯಗೊಂಡಿದ್ದು, ಸಾವಿರಾರು ಜನರು ಜೀವ ರಕ್ಷಿಸಿಕೊಳ್ಳಲು ಹೊರ ಓಡಿದ್ದಾರೆ ಎಂದು ವರದಿಯಾಗಿದೆ. ಮುಖ್ಯ ಸಭಾಂಗಣದಲ್ಲಿ ಬ್ಲೂ ಝೋನ್‌ನಲ್ಲಿ ಸಭೆ, ಮಾತುಕತೆ, ಮಾಧ್ಯಮ ಕೇಂದ್ರ ಮತ್ತು ಪ್ರಮುಖ ಗಣ್ಯರ ಕಚೇರಿಯನ್ನು ಸ್ಥಾಪಿಸಲಾಗಿದೆ. ಗುರುವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹರಡುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಹೊರಕ್ಕೆ ಓಡಿದ್ದಾರೆ ಎಂದು ಹೇಳಲಾಗಿದೆ.
ಬೆಂಕಿ ಅವಘಡ ಸಂಭವಿಸಿದಾಗ ಭಾರತದ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಕೂಡ ಭಾರತೀಯ ನಿಯೋಗದೊಂದಿಗೆ ಬ್ಲೂ ಝೋನ್ ವಲಯದಲ್ಲಿದ್ದರು, ಆದರೆ ಅವರು ಮತ್ತು ಇತರ ಅಧಿಕಾರಿಗಳು ಸುರಕ್ಷಿತವಾಗಿ ಸ್ಥಳದಿಂದ ಹೊರಬಂದರು ಎಂದು ಸಚಿವಾಲಯದ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.
ಮಾತುಕತೆಗಳು, ಮಾಧ್ಯಮ ಕೇಂದ್ರ ಮತ್ತು ಮುಖ್ಯ ಸಮಗ್ರ ಸಭಾಂಗಣ ಸೇರಿದಂತೆ ಎಲ್ಲಾ ಉನ್ನತ ಗಣ್ಯರ ಕಚೇರಿಗಳಿವೆ ಎಂದು ವರದಿಯಾಗಿದೆ. ಬೆಂಕಿ ದುರಂತದ ಸುದ್ದಿ ಹರಡಿದ ತಕ್ಷಣ, ಜನರು ಸುರಕ್ಷತೆಗಾಗಿ ಎಲ್ಲಾ ನಿರ್ಗಮನ ದ್ವಾರಗಳಿಂದ ಹೊರಗೆ ಓಡಿ ಹೋಗಿದ್ದು, ಅಧಿಕಾರಿಗಳು ಸಂಪೂರ್ಣ ಸುರಕ್ಷತಾ ಪರಿಶೀಲನೆಗಾಗಿ ಸ್ಥಳವನ್ನು ಮುಚ್ಚಿದರು.
Advertisement