ಹಾಂಗ್ ಕಾಂಗ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ಸಾವಿನ ಸಂಖ್ಯೆ 44ಕ್ಕೆ ಏರಿಕೆ, 279 ಮಂದಿ ನಾಪತ್ತೆ-Video

ವಾಂಗ್ ಫುಕ್ ಕೋರ್ಟ್ ಸಂಕೀರ್ಣದಲ್ಲಿರುವ ಎಂಟು ಅಂತಸ್ತುಗಳಲ್ಲಿ ಏಳರಲ್ಲಿ ಬೆಂಕಿ ಹರಡುತ್ತಿದ್ದಂತೆ ನೂರಾರು ನಿವಾಸಿಗಳನ್ನು ಸ್ಥಳಾಂತರಿಸಲಾಯಿತು, ಕಿಟಕಿಗಳಿಂದ ಪ್ರಕಾಶಮಾನವಾದ ಜ್ವಾಲೆಗಳು ಮತ್ತು ಹೊಗೆ ಹೊರಬರುತ್ತಿದ್ದವು.
44 people were reported killed in the fire that spread through a dense high-rise residential housing complex Wednesday, and another 279 people were reported missing.
ಬಹುಮಹಡಿ ವಸತಿ ಸಂಕೀರ್ಣದಲ್ಲಿ ಹರಡಿದ ಬೆಂಕಿಯಲ್ಲಿ 44 ಜನರು ಮೃತಪಟ್ಟು 279 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
Updated on

ಹಾಂಗ್ ಕಾಂಗ್: ದಶಕಗಳಲ್ಲಿ ಹಾಂಗ್ ಕಾಂಗ್‌ನಲ್ಲಿ ಸಂಭವಿಸಿದ ಅತ್ಯಂತ ಭೀಕರ ಬೆಂಕಿ ದುರಂತದಲ್ಲಿ ಮೃತಪಟ್ಟ ನಾಗರಿಕರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. 279 ಜನರು ನಾಪತ್ತೆಯಾಗಿದ್ದು ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯಕರ್ತರು ಇನ್ನೂ ಎತ್ತರದ ಅಪಾರ್ಟ್‌ಮೆಂಟ್ ಕಟ್ಟಡಗಳಿಂದ ನಿವಾಸಿಗಳನ್ನು ಹೊರಗೆಳೆಯುತ್ತಿದ್ದಾರೆ.

ನ್ಯೂ ಟೆರಿಟರಿಗಳ ಉಪನಗರವಾದ ತೈ ಪೋ ಜಿಲ್ಲೆಯ ವಸತಿ ಸಮುಚ್ಚಯದಲ್ಲಿ ಭಾರತೀಯ ಕಾಲಮಾನ ನಿನ್ನೆ ಬುಧವಾರ ಮಧ್ಯಾಹ್ನ ಪ್ರಾರಂಭವಾದ ಬೆಂಕಿ ದುರ್ಘಟನೆ ನರಮೇಧ ಎಂದು ಶಂಕಿಸಲಾಗಿದ್ದು, ಶಂಕೆಯ ಮೇಲೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇಂದು ಬೆಳಗ್ಗೆ ಸ್ಥಳೀಯ ಸಮಯದ ಹೊತ್ತಿಗೆ, ಬೆಂಕಿಯನ್ನು ಇನ್ನೂ ನಂದಿಸಲಾಗಿಲ್ಲ ಮತ್ತು ರಕ್ಷಣಾ ಕಾರ್ಯ ಮುಂದುವರೆದಿದೆ.

ವಾಂಗ್ ಫುಕ್ ಕೋರ್ಟ್ ಸಂಕೀರ್ಣದಲ್ಲಿರುವ ಎಂಟು ಅಂತಸ್ತುಗಳಲ್ಲಿ ಏಳರಲ್ಲಿ ಬೆಂಕಿ ಹರಡುತ್ತಿದ್ದಂತೆ ನೂರಾರು ನಿವಾಸಿಗಳನ್ನು ಸ್ಥಳಾಂತರಿಸಲಾಯಿತು, ಕಿಟಕಿಗಳಿಂದ ಪ್ರಕಾಶಮಾನವಾದ ಜ್ವಾಲೆಗಳು ಮತ್ತು ಹೊಗೆ ಹೊರಬರುತ್ತಿದ್ದವು.

44 people were reported killed in the fire that spread through a dense high-rise residential housing complex Wednesday, and another 279 people were reported missing.
ಹಾಂಗ್ ಕಾಂಗ್ ನಲ್ಲಿ ಭೀಕರ ಅಗ್ನಿ ಅವಘಡ: 32 ಅಂತಸ್ತಿನ ಅಪಾರ್ಟ್ ಮೆಂಟ್ ಗೆ ಬೆಂಕಿ, 13 ಮಂದಿ ಸಾವು, 700 ಮಂದಿ ಸ್ಥಳಾಂತರ! Video

44 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕನಿಷ್ಠ 62 ಜನರು ಗಾಯಗೊಂಡಿದ್ದಾರೆ, ಹಲವರು ಸುಟ್ಟಗಾಯಗಳು ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದಾರೆ.

ಬೆಂಕಿಯ ತ್ವರಿತ ಹರಡುವಿಕೆ ಅಸಾಮಾನ್ಯವಾಗಿರುವುದರಿಂದ ಎತ್ತರದ ಕಟ್ಟಡಗಳ ಹೊರ ಗೋಡೆಗಳ ಮೇಲಿನ ಕೆಲವು ವಸ್ತುಗಳು ಬೆಂಕಿ ನಿರೋಧಕ ಮಾನದಂಡಗಳನ್ನು ಪೂರೈಸಲಿಲ್ಲ, ಇದರಿಂದಾಗಿ ಸಾವು ನೋವು ಅಧಿಕವಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ನಿರ್ಮಾಣ ಕಂಪನಿಯೊಂದು ಸ್ಥಾಪಿಸಿರುವ ಗೋಪುರದ ಲಿಫ್ಟ್ ಲಾಬಿ ಬಳಿಯ ಪ್ರತಿ ಮಹಡಿಯ ಕಿಟಕಿಗಳ ಹೊರಗೆ ಹೆಚ್ಚು ದಹಿಸಬಹುದಾದ ಸ್ಟೈರೋಫೋಮ್ ವಸ್ತುಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿರ್ಮಾಣ ಕಂಪನಿಯ ಉಸ್ತುವಾರಿ ವಹಿಸಿದ್ದವರು ತೀವ್ರ ನಿರ್ಲಕ್ಷ್ಯ ಮಾಡಿದರು ಎಂದು ಹಿರಿಯ ಪೊಲೀಸ್ ಅಧೀಕ್ಷಕ ಐಲೀನ್ ಚುಂಗ್ ಹೇಳಿದರು. 52 ರಿಂದ 68 ವರ್ಷ ವಯಸ್ಸಿನ ಬಂಧಿತ ಮೂವರು ವ್ಯಕ್ತಿಗಳು ಸಂಸ್ಥೆಯ ನಿರ್ದೇಶಕರು ಮತ್ತು ಎಂಜಿನಿಯರಿಂಗ್ ಸಲಹೆಗಾರರಾಗಿದ್ದಾರೆ.

ಅಗ್ನಿಶಾಮಕ ಸೇವೆಗಳ ಇಲಾಖೆಯ ಪ್ರಕಾರ, ಇಂದು ಬೆಳಗ್ಗೆ ನಾಲ್ಕು ಕಟ್ಟಡಗಳಲ್ಲಿ ಬೆಂಕಿ ನಿಯಂತ್ರಣಕ್ಕೆ ಬರುತ್ತಿದೆ. ಬೆಂಕಿಯು 32 ಅಂತಸ್ತಿನ ಗೋಪುರವಾದ ಕಟ್ಟಡಗಳಲ್ಲಿ ಒಂದಾದ ಬಾಹ್ಯ ಸ್ಕ್ಯಾಫೋಲ್ಡಿಂಗ್‌ನಲ್ಲಿ ಪ್ರಾರಂಭವಾಯಿತು. ನಂತರ ಕಟ್ಟಡದ ಒಳಗೆ ಮತ್ತು ಹತ್ತಿರದ ಕಟ್ಟಡಗಳಿಗೆ ಹರಡಿತು.

ಚೀನಾದ ನಾಯಕ ಕ್ಸಿ ಜಿನ್‌ಪಿಂಗ್ ಮೃತರಾದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸಂತಾಪ ಸೂಚಿಸಿದರು. ಬಲಿಪಶುಗಳ ಕುಟುಂಬಗಳಿಗೆ ಸಹಾನುಭೂತಿ ವ್ಯಕ್ತಪಡಿಸಿದರು ಎಂದು ರಾಜ್ಯ ಪ್ರಸಾರಕ ಸಿಸಿಟಿವಿ ವರದಿ ಮಾಡಿದೆ. ಸಾವುನೋವುಗಳು ಮತ್ತು ನಷ್ಟಗಳನ್ನು ಕಡಿಮೆ ಮಾಡಲು ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ಇದು ವಸತಿ ಸಂಕೀರ್ಣವಾಗಿದ್ದು, ಎಂಟು ಕಟ್ಟಡಗಳನ್ನು ಹೊಂದಿದ್ದು, ಸುಮಾರು 2,000 ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 4,800 ನಿವಾಸಿಗಳು ವಾಸಿಸುತ್ತಿದ್ದಾರೆ. ಅವರಲ್ಲಿ ಅನೇಕ ವೃದ್ಧರು ಸೇರಿದ್ದಾರೆ. ಇದನ್ನು 1980 ರ ದಶಕದಲ್ಲಿ ನಿರ್ಮಿಸಲಾಯಿತು, ಇತ್ತೀಚೆಗೆ ಪ್ರಮುಖ ನವೀಕರಣಕ್ಕೆ ಒಳಗಾಗಿತ್ತು.

ಸ್ಥಳದಲ್ಲಿ ಹೆಚ್ಚಿನ ತಾಪಮಾನವು ಸಿಬ್ಬಂದಿಗೆ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕಷ್ಟಕರವಾಗಿಸಿದೆ ಎಂದು ಅಗ್ನಿಶಾಮಕ ದಳದ ಮುಖ್ಯಸ್ಥರು ತಿಳಿಸಿದ್ದಾರೆ. ಕಟ್ಟಡಗಳ ಹೊರಭಾಗದ ಸುತ್ತಲೂ ಸ್ಥಾಪಿಸಲಾದ ಬಿದಿರಿನ ಸ್ಕ್ಯಾಫೋಲ್ಡಿಂಗ್ ಮತ್ತು ನಿರ್ಮಾಣ ಜಾಲದ ಮೇಲೆ ಬೆಂಕಿ ತ್ವರಿತವಾಗಿ ಹರಡುತ್ತಿದ್ದಂತೆ ಜ್ವಾಲೆಗಳು ಮತ್ತು ದಟ್ಟವಾದ ಹೊಗೆ ಕಾಣಿಸಿತು. ಸುಮಾರು 900 ಜನರನ್ನು ತಾತ್ಕಾಲಿಕ ಆಶ್ರಯಗಳಿಗೆ ಸ್ಥಳಾಂತರಿಸಲಾಯಿತು.

ನೂರಾರು ಅಗ್ನಿಶಾಮಕ ದಳದವರು, ಪೊಲೀಸ್ ಅಧಿಕಾರಿಗಳು ಮತ್ತು ಅರೆವೈದ್ಯರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಪ್ರಾರಂಭವಾದ ಬೆಂಕಿಯನ್ನು ರಾತ್ರಿಯಾಗುತ್ತಿದ್ದಂತೆ ಲೆವೆಲ್ 5 ಅಲಾರಂಗೆ - ತೀವ್ರತೆಯ ಅತ್ಯಧಿಕ ಮಟ್ಟಕ್ಕೆ ಅಪ್‌ಗ್ರೇಡ್ ಮಾಡಲಾಯಿತು. ಅಗ್ನಿಶಾಮಕ ದಳದವರಿಗೆ ಪರಿಸ್ಥಿತಿಗಳು ತುಂಬಾ ಸವಾಲಿನದ್ದಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ದಳದವರು 200 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಮತ್ತು ಸುಮಾರು 100 ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ನಿಯೋಜಿಸಿದರು.

ತೈ ಪೊ ಎಂಬುದು ಹಾಂಗ್ ಕಾಂಗ್‌ನ ಉತ್ತರ ಭಾಗದಲ್ಲಿರುವ ಮತ್ತು ಚೀನಾದ ಮುಖ್ಯ ಭೂಭಾಗದ ನಗರವಾದ ಶೆನ್‌ಜೆನ್‌ನ ಗಡಿಯ ಬಳಿ ಇರುವ ನ್ಯೂ ಟೆರಿಟರಿಗಳಲ್ಲಿರುವ ಉಪನಗರ ಪ್ರದೇಶವಾಗಿದೆ.

ಈ ಬೆಂಕಿಯು ದಶಕಗಳಲ್ಲಿ ಹಾಂಗ್ ಕಾಂಗ್‌ನಲ್ಲಿ ಅತ್ಯಂತ ಮಾರಕವಾಗಿದೆ. ನವೆಂಬರ್ 1996 ರಲ್ಲಿ, ಕೌಲೂನ್‌ನಲ್ಲಿರುವ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ದುರ್ಘಟನೆಯಲ್ಲಿ 41 ಜನರು ಮೃತಪಟ್ಟಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com