
ಅಬುದಾಬಿ: ದಕ್ಷಿಣ ಆಫ್ರಿಕಾದ ಎಸ್ಟಾಟಿನಿಯದ ರಾಜ ಎಂಸ್ವಾತಿ 111,ತನ್ನ 15 ಮಡದಿಯರು,100 ಆಪ್ತ ಸಹಾಯಕರೊಂದಿಗೆ ಐಷಾರಾಮಿ ಜೆಟ್ ನಲ್ಲಿ ಅಬುಧಾಬಿ ವಿಮಾನ ನಿಲ್ದಾಣಕ್ಕ ಆಗಮಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದು 2025 ಜುಲೈ 10ರ ಹಳೆಯ ವಿಡಿಯೋ ಎನ್ನಲಾಗಿದೆ. ಸಾಂಪ್ರದಾಯಿಕ ಚಿರತೆ ಮುದ್ರಿತ ಉಡುಪನ್ನು ತೊಟ್ಟು ರಾಜ ಎಸ್ಟಾಟಿನಿಯ ಆಗಮಿಸಿದ್ದಾರೆ. ಅವರ ಹಿಂದೆ 15 ಮಂದಿ ರಾಣಿಯರು, 39 ಮಕ್ಕಳು ಮತ್ತು 100 ಜನ ಸೇವಕರು ವಿಮಾನದಿಂದ ಇಳಿದು ಬರುತ್ತಿರುವ ವಿಡಿಯೋ ಇದಾಗಿದೆ.
ರಾಜ ಎಂಸ್ವಾತಿ 111 ರ ತಂದೆ ರಾಜ ಸೋಬುಜಾ 11, ಅವರಿಗೂ 70ಕ್ಕೂ ಹೆಚ್ಚು ಹೆಂಡತಿಯರು, 20 ಮಕ್ಕಳು ಮತ್ತು ಸುಮಾರು 1,000 ಮೊಮ್ಮಕ್ಕಳಿದ್ದರು ಎನ್ನಲಾಗಿದೆ.
ಇದನ್ನು ನಿಭಾಯಿಸಲು ಏರ್ ಪೋರ್ಟ್ ಸಿಬ್ಬಂದಿ ಕೆಲಕಾಲ ನಿಲ್ದಾಣದ ಮೂರು ಟರ್ಮಿನಲ್ ಗಳನ್ನು ಮುಚ್ಚಿದ್ದರು ಎಂದು ವರದಿಯಾಗಿದೆ. ಎಸ್ಟಾಟಿನಿಯದ ರಾಜ ಎಂಸ್ವಾತಿ 111 ಅವರ ವರ್ಣರಂಜಿತ ಐಷಾರಾಮಿ ಜೀವನದ ಬಗ್ಗೆ ನೆಟ್ಟಿಗರು ಚರ್ಚಿಸುತ್ತಿದ್ದಾರೆ.
Advertisement