ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಇಸ್ರೇಲ್ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ನಿನ್ನೆ ಬಿಡುಗಡೆ ಮಾಡಲಾದ ಸುಮಾರು 250 ಕೈದಿಗಳ ಪಟ್ಟಿ ಅಂತಿಮವಾಗಿದೆಯೇ ಎಂಬುದು ತಕ್ಷಣ ಸ್ಪಷ್ಟವಾಗಿಲ್ಲವಾದರೂ, ಹಮಾಸ್ ದೀರ್ಘಕಾಲದಿಂದ ಬಿಡುಗಡೆ ಮಾಡಲು ಬಯಸುತ್ತಿರುವ ಇತರ ಪ್ರಮುಖ ಕೈದಿಗಳನ್ನು ಬಿಡುಗಡೆ ಮಾಡುವುದನ್ನು ಇಸ್ರೇಲ್ ತಿರಸ್ಕರಿಸಿದೆ.
Senior Fatah leader Marwan Barghouti makes the victory sign in front of the media during his arrival to testify in a trial at a Jerusalem court
ಜೆರುಸಲೆಮ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಸಾಕ್ಷಿ ಹೇಳಲು ಆಗಮಿಸಿದ ಸಂದರ್ಭದಲ್ಲಿ ಹಿರಿಯ ಫತಾಹ್ ನಾಯಕ ಮಾರ್ವಾನ್ ಬರ್ಘೌಟಿ ಜಯದ ಸಂಕೇತ ತೋರಿಸುತ್ತಿರುವುದು
Updated on

ರಾಮಲ್ಲಾ(ಪ್ಯಾಲೆಸ್ತೀನ್): ಹೊಸ ಗಾಜಾ ಕದನ ವಿರಾಮ ಒಪ್ಪಂದದಡಿಯಲ್ಲಿ ಹಮಾಸ್ ಬಂಧಿಸಿರುವ ಒತ್ತೆಯಾಳುಗಳಿಗೆ ಬದಲಾಗಿ ಇಸ್ರೇಲ್ ಬಿಡುಗಡೆ ಮಾಡಲು ಉದ್ದೇಶಿಸಿರುವ ಕೈದಿಗಳಲ್ಲಿ ಅತ್ಯಂತ ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮಾರ್ವಾನ್ ಬರ್ಘೌತಿ ಇಲ್ಲ ಎಂದು ತಿಳಿದುಬಂದಿದೆ.

ಇಸ್ರೇಲ್ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ನಿನ್ನೆ ಬಿಡುಗಡೆ ಮಾಡಲಾದ ಸುಮಾರು 250 ಕೈದಿಗಳ ಪಟ್ಟಿ ಅಂತಿಮವಾಗಿದೆಯೇ ಎಂಬುದು ತಕ್ಷಣ ಸ್ಪಷ್ಟವಾಗಿಲ್ಲವಾದರೂ, ಹಮಾಸ್ ದೀರ್ಘಕಾಲದಿಂದ ಬಿಡುಗಡೆ ಮಾಡಲು ಬಯಸುತ್ತಿರುವ ಇತರ ಪ್ರಮುಖ ಕೈದಿಗಳನ್ನು ಬಿಡುಗಡೆ ಮಾಡುವುದನ್ನು ಇಸ್ರೇಲ್ ತಿರಸ್ಕರಿಸಿದೆ.

ಬರ್ಘೌಟಿ ಮತ್ತು ಇತರ ಪ್ರಮುಖ ಕೈದಿಗಳ ಬಿಡುಗಡೆಗೆ ಗುಂಪು ಒತ್ತಾಯಿಸುತ್ತಿದ್ದು, ಅದು ಮಧ್ಯವರ್ತಿಗಳೊಂದಿಗೆ ಚರ್ಚೆಯಲ್ಲಿದೆ ಎಂದು ಹಿರಿಯ ಹಮಾಸ್ ಅಧಿಕಾರಿ ಮೌಸಾ ಅಬು ಮಾರ್ಜೌಕ್ ಅಲ್ ಜಜೀರಾ ಟಿವಿ ನೆಟ್‌ವರ್ಕ್‌ಗೆ ತಿಳಿಸಿದ್ದಾರೆ.

ಇಸ್ರೇಲ್ ಬರ್ಘೌಟಿಯನ್ನು ಭಯೋತ್ಪಾದಕ ನಾಯಕ ಎಂದು ನೋಡುತ್ತದೆ. 2004 ರಲ್ಲಿ ಇಸ್ರೇಲ್‌ನಲ್ಲಿ ಐದು ಜನರ ಸಾವಿಗೆ ಕಾರಣವಾದ ದಾಳಿಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಕೆಲವು ತಜ್ಞರು ಹೇಳುವಂತೆ ಇಸ್ರೇಲ್ ಬರ್ಘೌಟಿಯನ್ನು ಇನ್ನೊಂದು ಕಾರಣಕ್ಕಾಗಿ ಭಯಪಡುತ್ತದೆ: ಆಕ್ರಮಣಕ್ಕೆ ಸಶಸ್ತ್ರ ಪ್ರತಿರೋಧವನ್ನು ಬೆಂಬಲಿಸಿದರೂ ಸಹ ಎರಡು-ದೇಶಗಳ ಪ್ರತಿಪಾದಕ ಬರ್ಘೌಟಿ ಪ್ಯಾಲೆಸ್ತೀನ್ ಪರ ಇರಬಹುದು. ಕೆಲವು ಪ್ಯಾಲೆಸ್ತೀನಿಯರು ಆತನನ್ನು ತಮ್ಮ ದೇಶದ ನೆಲ್ಸನ್ ಮಂಡೇಲಾ ಎಂದೇ ಪರಿಗಣಿಸುತ್ತಾರೆ,

ನಿನ್ನೆ ಶುಕ್ರವಾರ ಜಾರಿಗೆ ಬಂದ ಗಾಜಾದಲ್ಲಿ ಕದನ ವಿರಾಮ ಮತ್ತು ಇಸ್ರೇಲಿ ಪಡೆಗಳನ್ನು ಹಿಂತೆಗೆದುಕೊಳ್ಳುವುದರೊಂದಿಗೆ, ಹಮಾಸ್ ನಾಡಿದ್ದು ಸೋಮವಾರದ ವೇಳೆಗೆ ಸುಮಾರು 20 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದೆ.

Senior Fatah leader Marwan Barghouti makes the victory sign in front of the media during his arrival to testify in a trial at a Jerusalem court
'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಇಸ್ರೇಲ್ ಜೈಲು ಶಿಕ್ಷೆ ಅನುಭವಿಸುತ್ತಿರುವ ಸುಮಾರು 250 ಪ್ಯಾಲೆಸ್ತೀನಿಯನ್ನರನ್ನು ಮತ್ತು ಕಳೆದ ಎರಡು ವರ್ಷಗಳಿಂದ ಗಾಜಾದಿಂದ ವಶಪಡಿಸಿಕೊಂಡು ಯಾವುದೇ ಆರೋಪವಿಲ್ಲದೆ ಬಂಧಿಸಲ್ಪಟ್ಟ ಸುಮಾರು 1,700 ಜನರನ್ನು ಬಿಡುಗಡೆ ಮಾಡಲಿದೆ.

ಇಸ್ರೇಲ್ ಕೈದಿಗಳನ್ನು ಭಯೋತ್ಪಾದಕರು ಎಂದು ನೋಡುತ್ತಿದೆ. ಅವರಲ್ಲಿ ಕೆಲವರು ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಭಾಗಿಯಾಗಿದ್ದಾರೆ. ಅನೇಕ ಪ್ಯಾಲೆಸ್ತೀನಿಯರು ಇಸ್ರೇಲ್ ಬಂಧಿಸಿರುವ ಸಾವಿರಾರು ಜನರನ್ನು ರಾಜಕೀಯ ಕೈದಿಗಳು ಅಥವಾ ದಶಕಗಳ ಮಿಲಿಟರಿ ಆಕ್ರಮಣವನ್ನು ವಿರೋಧಿಸುವ ಸ್ವಾತಂತ್ರ್ಯ ಹೋರಾಟಗಾರರೆಂದು ನೋಡುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com