
ಕೈರೋ: ಕದನ ವಿರಾಮ ಯೋಜನೆಯ ಮೊದಲ ಹಂತಕ್ಕೆ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿರುವ ಹಮಾಸ್, ಇದರಂದೆ ಸೋಮವಾರ ಏಳು ಒತ್ತೆಯಾಳುಗಳನ್ನು ರೆಡ್ ಕ್ರಾಸ್‌ನ ವಶಕ್ಕೆ ನೀಡಿದೆ ಎಂದು ತಿಳಿದುಬಂದಿದೆ.
ಪ್ಯಾಲೆಸ್ಟೀನಿನ 1,900 ಕೈದಿಗಳ ಪರವಾಗಿ 20 ಜೀವಂತ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿತ್ತು. ಅಲ್ಲದೆ ಬಿಡುಗಡೆಗೊಳಿಸುವ 20 ಒತ್ತೆಯಾಳುಗಳ ಹೆಸರುಗಳನ್ನು ಪ್ರಕಟಿಸಿತ್ತು.
ಒತ್ತೆಯಾಳುಗಳನ್ನು ರೆಡ್‌ಕ್ರಾಸ್ ಸಂಸ್ಥೆಗೆ ಹಸ್ತಾಂತರಿಸಲಾಗುವುದು ಎಂದು ಇಸ್ರೇಲಿನ ಟಿವಿಗಳಲ್ಲಿ ಪ್ರಸಾರಗೊಳ್ಳುತ್ತಿದ್ದಂತೆಯೇ, ಕುಟುಂಬಸ್ಥರು ಸ್ನೇಹಿತರು ಕಣ್ಣೀರಾದರು. ನಾಗರಿಕರು ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಒತ್ತೆಯಾಳುಗಳ ಹಸ್ತಾಂತರ ಪ್ರಕ್ರಿಯೆಯನ್ನು ಸಾರ್ವಜನಿಕವಾಗಿ ಅಳವಡಿಸಲಾಗಿದ್ದ ಪರದೆಯಲ್ಲಿ ಸಾವಿರಾರು ಇಸ್ರೇಲಿಗರು ವೀಕ್ಷಿಸಿದರು.
ಬಿಡುಗಡೆ ಮಾಡಬೇಕಾದ ಒತ್ತೆಯಾಳುಗಳ ಹೆಸರುಗಳನ್ನು ಸ್ಥಳೀಯ ದೂರದರ್ಶನದಲ್ಲಿ ತಿಳಿಸಿದ ಕೂಡಲೇ ಹೋಸ್ಟೇಜಸ್ ಸ್ಕ್ವೇರ್‌ನಲ್ಲಿ ಸೇರಿದ್ದ ಜನಸಮೂಹವು ಹರ್ಷ ವ್ಯಕ್ತಪಡಿಸಿದರು.
ಈ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಕೊನೆಗೊಂಡಿದೆ ಎಂದು ಘೋಷಿಸಿದ್ದಾರೆ.
ಈಶಾನ್ಯ ಆಫ್ರಿಕಾದ ಈಜಿಪ್ಟ್‌ನಲ್ಲಿ ನಡೆಯಲಿರುವ ಶಾಂತಿ ಶೃಂಗಸಭೆಯಲ್ಲಿ ಭಾಗವಹಿಸಲು ಇಸ್ರೇಲ್‌ಗೆ ತೆರಳುವ ಮುನ್ನ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಯುದ್ಧ ಮುಗಿದಿದೆ, ನಿಮಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.
ಈ ಪ್ರದೇಶದ ಭವಿಷ್ಯದ ಬಗ್ಗೆ ಕೇಳಿದಾಗ, ಇದು ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ತಿಳಿಸಿದರು. ಇದೇ ವೇಳೆ ಇಸ್ರೇಲ್-ಹಮಾಸ್ ಕದನ ವಿರಾಮವನ್ನು ಏರ್ಪಡಿಸುವಲ್ಲಿ ಕತಾರ್‌ನ ಪಾತ್ರವನ್ನು ಶ್ಲಾಘಿಸಿದರು.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು "ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕೆಲವು ಒತ್ತೆಯಾಳುಗಳನ್ನು ನಿರೀಕ್ಷೆಗಿಂತ ಮುಂಚಿತವಾಗಿ ಬಿಡುಗಡೆ ಮಾಡಬಹುದು. ಗಾಜಾ ಪ್ರದೇಶದ ಪುನರ್ನಿರ್ಮಾಣವನ್ನು ಮೇಲ್ವಿಚಾರಣೆ ಮಾಡಲು ಶೀಘ್ರದಲ್ಲೇ ಶಾಂತಿ ಮಂಡಳಿಯನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದರು.
ಯಹೂದಿಗಳಾಗಲಿ, ಮುಸ್ಲಿಮರಾಗಲಿ, ಅಥವಾ ಅರಬ್ ದೇಶಗಳಾಗಲಿ ಎಲ್ಲರೂ ಸಂತೋಷವಾಗಿದ್ದಾರೆ. ನಾವು ಇಸ್ರೇಲ್ ನಂತರ ಈಜಿಪ್ಟ್‌ಗೆ ಹೋಗುತ್ತಿದ್ದೇವೆ. ನಾವು ಬಹಳ ಶಕ್ತಿಶಾಲಿ, ದೊಡ್ಡ ಮತ್ತು ಶ್ರೀಮಂತ ದೇಶಗಳ ನಾಯಕರನ್ನು ಭೇಟಿಯಾಗಲಿದ್ದೇವೆ. ಅವರೆಲ್ಲರೂ ಈ ಒಪ್ಪಂದಕ್ಕೆ ಒಲವು ತೋರುತ್ತಿದ್ದಾರೆಂದು ಹೇಳಿದರು.
Advertisement