'ಗಂಡಸರಾಗಿದ್ದರೆ ನಮ್ಮನ್ನು ಎದುರಿಸಿ; ತಾಯಿಯ ಎದೆ ಹಾಲು ಕುಡಿದಿದ್ದರೆ ನಮ್ಮೊಂದಿಗೆ ಹೋರಾಡಿ': ಅಸಿಮ್ ಮುನೀರ್‌ಗೆ TTP ಸವಾಲು

ಪಾಕಿಸ್ತಾನಿ ಸೇನೆಯು ತನ್ನ ಸೈನಿಕರನ್ನು ಕಳುಹಿಸಿ ಅವರು ಸಾಯುವುದನ್ನು ತಪ್ಪಿಸಬೇಕು. ಬದಲಾಗಿ ಸೇನೆಯ ಉನ್ನತ ಅಧಿಕಾರಿಗಳು ಯುದ್ಧಭೂಮಿಗೆ ಬರಬೇಕು ಎಂದು ಟಿಟಿಪಿಯ ಉನ್ನತ ಕಮಾಂಡರ್ ಮುನೀರ್ ಅವರಿಗೆ ವಿಡಿಯೋ ಮೂಲಕ ಬೆದರಿಕೆ ಹಾಕಿದೆ.
Asim Munir
ಅಸೀಮ್ ಮುನೀರ್
Updated on

ನವದೆಹಲಿ: ನೀನು ಗಂಡಸಾಗಿದ್ದರೇ ನಮ್ಮನ್ನು ಎದುರಿಸಿ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಿಗೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಸವಾಲು ಹಾಕಿದೆ.

ಸರಣಿ ವಿಡಿಯೋ ಬಿಡುಗಡೆ ಮಾಡಿರುವ ಟಿಟಿಪಿ, ಪಾಕಿಸ್ತಾನಿ ಸೇನೆಯು ತನ್ನ ಸೈನಿಕರನ್ನು ಕಳುಹಿಸಿ ಅವರು ಸಾಯುವುದನ್ನು ತಪ್ಪಿಸಬೇಕು. ಬದಲಾಗಿ ಸೇನೆಯ ಉನ್ನತ ಅಧಿಕಾರಿಗಳು ಯುದ್ಧಭೂಮಿಗೆ ಬರಬೇಕು ಎಂದು ಟಿಟಿಪಿಯ ಉನ್ನತ ಕಮಾಂಡರ್ ಮುನೀರ್ ಅವರಿಗೆ ವಿಡಿಯೋ ಮೂಲಕ ಬೆದರಿಕೆ ಹಾಕಿದೆ.

ಅಕ್ಟೋಬರ್ 8 ರಂದು ಖೈಬರ್ ಪಖ್ತುನ್ಖ್ವಾದ ಕುರ್ರಂನಲ್ಲಿ ನಡೆದ ದಾಳಿಯ ದೃಶ್ಯಗಳನ್ನು ಈ ವೀಡಿಯೊಗಳು ಒಳಗೊಂಡಿವೆ, ಇದರಲ್ಲಿ ಟಿಟಿಪಿ 22 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ. ವಶಪಡಿಸಿಕೊಂಡ ಮದ್ದುಗುಂಡುಗಳು ಮತ್ತು ವಾಹನಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಮತ್ತೊಂದು ಕ್ಲಿಪ್‌ನಲ್ಲಿ, ಪಾಕಿಸ್ತಾನಿ ಅಧಿಕಾರಿಗಳಿಂದ ಕಮಾಂಡರ್ ಕಾಜಿಮ್ ಎಂದು ಗುರುತಿಸಲ್ಪಟ್ಟ ಹಿರಿಯ ಟಿಟಿಪಿ ವ್ಯಕ್ತಿಯೊಬ್ಬರು ಕ್ಯಾಮೆರಾದಲ್ಲಿ ಕಾಣಿಸಿಕೊಂಡು, "ನೀವು ಗಂಡಸಾಗಿದ್ದರೇ ನಮ್ಮನ್ನು ಎದುರಿಸಿ" ನೀವು ನಿಮ್ಮ ತಾಯಿಯ ಎದೆ ಹಾಲು ಕುಡಿದಿದ್ದರೆ ನಮ್ಮೊಂದಿಗೆ ಹೋರಾಡಿ ಎಂದು ಹೇಳಿದ್ದಾನೆ.

Asim Munir
ಪಾಕಿಸ್ತಾನದಲ್ಲಿ ಪ್ರಾದೇಶಿಕ ಉದ್ವಿಗ್ನತೆ: ಭಾರತದ ವಿರುದ್ಧ ಮತ್ತೆ ಕೆಂಡಕಾರಿದ ಅಸೀಮ್ ಮುನೀರ್; ಪ್ರತೀಕಾರದ ಶಪಥ!

ಅಕ್ಟೋಬರ್ 21 ರಂದು, ಪಾಕಿಸ್ತಾನಿ ಅಧಿಕಾರಿಗಳು ಕಾಜಿಮ್ ಬಂಧಿಸಲು ಮಾಹಿತಿ ನೀಡಿದರೇ 10 ಕೋಟಿ ಪಾಕಿಸ್ತಾನಿ ರೂಪಾಯಿಗಳ (PKR) ಬಹುಮಾನ ಘೋಷಿಸಿದ್ದಾರೆ.

ಗಡಿಯಾಚೆಗಿನ ಶೆಲ್ ದಾಳಿ, ವಾಯುದಾಳಿಯಿಂದಾಗಿ ಎರಡೂ ಕಡೆಯ ನಾಗರಿಕರು ಬಲಿಯಾಗಿದ್ದಾರೆ. ಪಾಕಿಸ್ತಾನ ಮತ್ತು ಕಾಬೂಲ್‌ನಲ್ಲಿರುವ ತಾಲಿಬಾನ್ ನೇತೃತ್ವದ ಅಧಿಕಾರಿಗಳು ಅಕ್ಟೋಬರ್ ಮಧ್ಯದಲ್ಲಿ ಕತಾರ್ ಮತ್ತು ಟರ್ಕಿಯ ಮಧ್ಯಸ್ಥಿಕೆಯಲ್ಲಿ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡರು.

ಕದನ ವಿರಾಮವನ್ನು ದೋಹಾದಲ್ಲಿ ಸಾರ್ವಜನಿಕವಾಗಿ ಘೋಷಿಸಲಾಯಿತು ಮತ್ತು ರಂಧ್ರವಿರುವ ಡುರಾಂಡ್ ರೇಖೆಯ ಉದ್ದಕ್ಕೂ ಪ್ರಕ್ಷುಬ್ದ ವಾತಾವರಣ ನಿಯಂತ್ರಿಸಲು ಅಗತ್ಯವಾದ ಕ್ರಮ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com