

ಅಮೆರಿಕದ ಇತ್ತೀಚಿನ ನಿರ್ಬಂಧಗಳನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 'ಸ್ನೇಹಿಯಲ್ಲದ ನಡೆ' ಎಂದು ಬಣ್ಣಿಸಿದ್ದು, ಇದು ಅಮೆರಿಕ-ರಷ್ಯಾ ನಡುವಿನ ಸಂಬಂಧಕ್ಕೆ ಸಹಾಯ ಮಾಡುವುದಿಲ್ಲ ಎಂದಿದ್ದಾರೆ.
ಹೊಸ ನಿರ್ಬಂಧಗಳು ರಷ್ಯಾದ ಆರ್ಥಿಕತೆಯ ಮೇಲೆ ಕಡಿಮೆ ಪರಿಣಾಮ ಬೀರುತ್ತವೆ. ಯಾವುದೇ ಸ್ವಾಭಿಮಾನಿ ದೇಶವು ಒತ್ತಡದಲ್ಲಿ ಏನನ್ನೂ ಮಾಡುವುದಿಲ್ಲ ಎಂದು ಹೇಳಿರುವುದಾಗಿ ರಷ್ಯಾ ಟುಡೇ ವರದಿ ಮಾಡಿದೆ.
ಅಮೆರಿಕವು ಪದೇ ಪದೇ ನಿರ್ಬಂಧಗಳನ್ನು ಹೇರುವ ಮೂಲಕ ಒತ್ತಡ ಹೇರಲು ಒಂದು ಸಾಧನವಾಗಿ ಬಳಸುತ್ತಿದೆ, ಆದರೆ ಅಂತಹ ತಂತ್ರಗಳು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.
ಅಮೆರಿಕ ಸರ್ಕಾರ ರಷ್ಯಾದ ತೈಲ ರಫ್ತಿನ ಮೇಲೆ ನಿರ್ಬಂಧಗಳನ್ನು ಹೇರಲು ಒತ್ತಾಯಿಸಿದ್ದಾರೆ. ಅವರು ನಿಜವಾಗಿಯೂ ಯಾರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ ಎಂದು ಪುಟಿನ್ ಪ್ರಶ್ನಿಸಿದ್ದಾರೆ.
ಉಕ್ರೇನ್ ಜೊತೆಗೆ ಯುದ್ಧವನ್ನು ಕೊನೆಗೊಳಿಸಲು ರಷ್ಯಾ ಮೇಲೆ ಒತ್ತಡ ಹೆಚ್ಚಿಸಲು ಯುನೈಟೆಡ್ ಸ್ಟೇಟ್ಸ್ ರಷ್ಯಾದ ಎರಡು ದೊಡ್ಡ ತೈಲ ಕಂಪನಿಗಳಾದ ರೋಸ್‌ನೆಫ್ಟ್ ಮತ್ತು ಲುಕೋಯಿಲ್ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಿದ ನಂತರ ಪುಟಿನ್ ಈ ಹೇಳಿಕೆ ಬಂದಿದೆ.
ತಮ್ಮ ಕ್ರಮವನ್ನು ಘೋಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಂದು ಬಹಳ ದೊಡ್ಡ ದಿನ. ಈ ನಿರ್ಬಂಧ ದೊಡ್ಡದಾಗಿದೆ. ಯುದ್ಧವು ಇತ್ಯರ್ಥವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ನಾವು ವಿವಿಧ ರೀತಿಯ ಕ್ಷಿಪಣಿಗಳು ಮತ್ತು ನಾವು ಪರಿಶೀಲಿಸುತ್ತಿರುವ ಎಲ್ಲದಕ್ಕೂ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ ಎಂದಿದ್ದಾರೆ.
ಈ ಮಧ್ಯೆ, ಬುಡಾಪೆಸ್ಟ್‌ನಲ್ಲಿ ನಡೆಯಬೇಕಿದ್ದ ರಷ್ಯಾ-ಅಮೆರಿಕ ಶೃಂಗಸಭೆಯನ್ನು ಮುಂದೂಡಲಾಗಿದೆ ಎಂದು ಪುಟಿನ್ ದೃಢಪಡಿಸಿದ್ದಾರೆ. ಟ್ರಂಪ್ ಮತ್ತು ಪುಟಿನ್ ನಡುವಿನ ದೂರವಾಣಿ ಕರೆಯ ನಂತರ ಅಮೆರಿಕದ ಕಡೆಯಿಂದ ಆರಂಭದಲ್ಲಿ ಪ್ರಸ್ತಾಪಿಸಲಾದ ಸಭೆಯನ್ನು ಕಳೆದ ವಾರ ಘೋಷಿಸಲಾಯಿತು.
Advertisement