ಟ್ರಂಪ್ ಭೇಟಿಗೂ ಮುನ್ನ ತೈವಾನ್ ಬಳಿಗೆ 'ಬಾಂಬರ್‌' ಕಳುಹಿಸಿದ ಚೀನಾ!

ಸಮರಾಭ್ಯಾಸಕ್ಕಾಗಿ ಅವುಗಳನ್ನು ಕಳುಹಿಸಲಾಗಿದೆ ಎಂದು ಚೀನಾದ ಮಾಧ್ಯಮವೊಂದು ಭಾನುವಾರ ತಡರಾತ್ರಿ ವರದಿ ಮಾಡಿದೆ.
President Trump and Melania with Japan's Emperor and Empress.
ಜಪಾನ್‌ನ ರಾಜ ದಂಪತಿಯೊಂದಿಗೆ ಅಧ್ಯಕ್ಷ ಟ್ರಂಪ್ ಮತ್ತು ಮೆಲಾನಿಯಾ ಸಾಂದರ್ಭಿಕ ಚಿತ್ರ
Updated on

ತೈವಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ನಿರೀಕ್ಷಿತ ಸಭೆಗೆ ಕೆಲವು ದಿನಗಳು ಇರುವಂತೆಯೇ ತೈವಾನ್ ಗೆ H-6K ಕಾರ್ಯತಂತ್ರದ ಬಾಂಬರ್‌ಗಳನ್ನು ಚೀನಾ ಕಳುಹಿಸಿದೆ.

ಸಮರಾಭ್ಯಾಸಕ್ಕಾಗಿ ಅವುಗಳನ್ನು ಕಳುಹಿಸಲಾಗಿದೆ ಎಂದು ಚೀನಾದ ಮಾಧ್ಯಮವೊಂದು ಭಾನುವಾರ ತಡರಾತ್ರಿ ವರದಿ ಮಾಡಿದೆ.

H-6K ಬಾಂಬರ್‌ಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿವೆ ಎಂದು ಸಿಎನ್ ಎನ್ ವರದಿ ಮಾಡಿದೆ.

ಚೀನಾದ ಮಿಲಿಟರಿಯ ಪೂರ್ವ ಕಮಾಂಡ್‌ನ ವಾಯುಪಡೆಯ ಘಟಕಗಳು ತೈವಾನ್‌ ಸುತ್ತ ಕಾರ್ಯಾಚರಣೆ ನಡೆಸುತ್ತಿದ್ದು, ವಿಚಕ್ಷಣ, ಮುನ್ನೆಚ್ಚರಿಕೆ, ವಾಯು ದಿಗ್ಬಂಧನಗಳು ಮತ್ತು ನಿಖರ ದಾಳಿಗಳ ಮೇಲೆ ಗಮನ ಕೇಂದ್ರೀಕರಿಸಿದ ಸಮರಾಭ್ಯಾಸ ನಡೆಸುತ್ತಿರುವುದಾಗಿ ಚೀನಾದ ಮಿಲಿಟರಿ ಚಾನೆಲ್ ವರದಿ ಮಾಡಿದೆ. ಆದರೆ ಇದರಲ್ಲಿ ಯಾವುದೇ ದಿನಾಂಕ ಇಲ್ಲ.

US ತೈವಾನ್‌ನೊಂದಿಗೆ ಅನಧಿಕೃತ ಸಂಬಂಧಗಳನ್ನು ಹೊಂದಿದೆ. ದ್ವೀಪ ರಾಷ್ಟ್ರಕ್ಕೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದೆ. ಆದರೆ ಚೀನಾದ ಆಕ್ರಮಣದ ಸಂದರ್ಭದಲ್ಲಿ ಅದು ಮಧ್ಯಪ್ರವೇಶಿಸಬಹುದೇ ಎಂಬುದರ ಕುರಿತು ತನ್ನ ಉದ್ದೇಶವನ್ನು ಸ್ಪಷ್ಪಪಡಿಸಿಲ್ಲ.

President Trump and Melania with Japan's Emperor and Empress.
Watch | 'ಬುಡ ಸಹಿತ ಕಿತ್ತು ಬಿಸಾಡುತ್ತೇವೆ': ಹಮಾಸ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com