ಕದನ ವಿರಾಮ ಉಲ್ಲಂಘನೆ: ಗಾಜಾಪಟ್ಟಿ ಮೇಲೆ ಪ್ರಬಲ ದಾಳಿಗೆ ಆದೇಶಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು!

ಪುನರಾವರ್ತಿತ ಕದನ ವಿರಾಮ ಉಲ್ಲಂಘನೆಗಳಿಗೆ ಇಸ್ರೇಲ್‌ನ ಪ್ರತಿಕ್ರಿಯೆಯನ್ನು ಚರ್ಚಿಸಲು ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ಘೋಷಣೆ ಮಾಡಲಾಗಿದೆ.
Netanyahu orders powerful strikes in Gaza
ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿ
Updated on

ಟೆಲ್ ಅವೀವ್: ಹಮಾಸ್ ಬಂಡುಕೋರರು ಕದನ ವಿರಾಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಇಸ್ರೇಲ್ ಗಾಜಾ ಪಟ್ಟಿಯಲ್ಲಿ(Gaza Strip) ತಕ್ಷಣ ಮತ್ತು ಪ್ರಬಲ ದಾಳಿ ನಡೆಸಲು ಮುಂದಾಗಿದೆ.

ಹೌದು.. ಗಾಜಾ ಪಟ್ಟಿಯಲ್ಲಿ(Gaza Strip) ತಕ್ಷಣ ಮತ್ತು ಪ್ರಬಲ ದಾಳಿ ನಡೆಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ರಕ್ಷಣಾ ಪಡೆಗಳಿಗೆ (ಐಡಿಎಫ್) ನಿರ್ದೇಶಿಸಿದ್ದಾರೆ ಎಂದು ಅವರ ಕಚೇರಿ ಮಂಗಳವಾರ ತಿಳಿಸಿದೆ.

ಪುನರಾವರ್ತಿತ ಕದನ ವಿರಾಮ ಉಲ್ಲಂಘನೆಗಳಿಗೆ ಇಸ್ರೇಲ್‌ನ ಪ್ರತಿಕ್ರಿಯೆಯನ್ನು ಚರ್ಚಿಸಲು ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ಘೋಷಣೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ನೆತನ್ಯಾಹು ಅವರ ಹೊಸ ಆದೇಶದ ನಂತರ ಗಾಝಾದ ಮೇಲೆ ದಾಳಿ ಯಾವಾಗ ಮತ್ತು ಎಲ್ಲಿ ನಡೆಯಲಿದೆ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಆದರೆ ಇಸ್ರೇಲ್ ಸರ್ಕಾರದ ಪ್ರಕಾರ, ಹಮಾಸ್ ಕದನ ವಿರಾಮವನ್ನು ಉಲ್ಲಂಘಿಸಿ, ಗಾಝಾದೊಳಗೆ ಉಳಿದಿರುವ 13 ಬಂಧಿತರ ಶವಗಳನ್ನು ಹಸ್ತಾಂತರಿಸದಿರುವುದು ಈ ಕ್ರಮಕ್ಕೆ ಕಾರಣ ಎನ್ನಲಾಗಿದೆ.

Netanyahu orders powerful strikes in Gaza
Israel ಸೈನಿಕರ ಹತ್ಯೆಯ ನಂತರ ಮುರಿದುಬಿದ್ದ ಕದನ ವಿರಾಮ: ಗಾಜಾದ ಮೇಲೆ ಇಸ್ರೇಲ್ ವಾಯುದಾಳಿಯಲ್ಲಿ 45 ಮಂದಿ ಸಾವು!

ಮತ್ತೊಂದು ಸುತ್ತಿನ ಯುದ್ಧಕ್ಕೆ ಹಮಾಸ್ ಸಿದ್ಧತೆ

ಹಮಾಸ್ ತನ್ನ ಶೋಧ ತಂಡಗಳಿಗೆ ಭಾರೀ ಯಂತ್ರೋಪಕರಣ ಮತ್ತು ನೆರವಿನ ಅಗತ್ಯವಿದೆ ಎಂದು ಹೇಳಿಕೊಂಡಿದೆ. ಇಸ್ರೇಲ್ ಕೆಲವು ಯಂತ್ರೋಪಕರಣಗಳನ್ನು ಬಳಸಲು ಅನುಮತಿಸಿದರೂ, ಎಲ್ಲ ಶವಗಳೂ ಹೊರತೆಗೆದಿಲ್ಲ ಎಂದು ತಿಳಿದು ಬಂದಿದೆ.

ಹಮಾಸ್ ತನ್ನ ಶೋಧ ಕಾರ್ಯಕ್ಕೆ ಇಸ್ರೇಲ್ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದೆ. ಭಾರೀ ಯಂತ್ರೋಪಕರಣ ಮತ್ತು ರೆಡ್ ಕ್ರಾಸ್ ಸಿಬ್ಬಂದಿಗೆ ಗಾಝಾದ ಪ್ರಮುಖ ಪ್ರದೇಶಗಳಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

ಹಮಾಸ್ ಕದನ ವಿರಾಮ ಉಲ್ಲಂಘನೆ

ಹಮಾಸ್ ಕದನ ವಿರಾಮ ಒಪ್ಪಂದವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಇಸ್ರೇಲ್ ಆರೋಪಿಸಿದ್ದು, ಕದನ ವಿರಾಮ ಜಾರಿಗೆ ಬಂದ ಬಳಿಕ ಇಸ್ರೇಲ್ 125 ಬಾರಿ ಉಲ್ಲಂಘನೆ ಮಾಡಿದ್ದು, ಇದರಲ್ಲಿ 94 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಇದು ಕದನ ವಿರಾಮ ಎಷ್ಟು ದುರ್ಬಲವಾಗಿದೆ ಎಂಬುದರ ನಿದರ್ಶನವಾಗಿದೆ ಇಸ್ರೇಲ್ ಪ್ರಧಾನಿ ಕಚೇರಿ ಸ್ಪಷ್ಟಪಡಿಸಿದೆ.

ಹಮಾಸ್ ಹಿಂದಿರುಗಿಸಿದ ಶವಗಳು ಬಂಧಿತರದ್ದಲ್ಲ, ಎರಡು ವರ್ಷಗಳ ಹಿಂದೆ ಪತ್ತೆಯಾದ ಅಪಹರಣಕಾರರದ್ದಾಗಿವೆ ಎಂದು ಇಸ್ರೇಲ್ ಆರೋಪಿಸಿದೆ. ಹಮಾಸ್ ಶವ ಹಸ್ತಾಂತರವನ್ನು “ಪ್ರದರ್ಶನ” ಎಂದು ಇಸ್ರೇಲ್ ಟೀಕಿಸಿದ್ದು, ಡ್ರೋನ್ ದೃಶ್ಯಾವಳಿಗಳ ಆಧಾರದಲ್ಲಿ ಹಮಾಸ್ ರೆಡ್ ಕ್ರಾಸ್ ಸಮ್ಮುಖದಲ್ಲಿ ಶವಗಳನ್ನು ಸ್ಥಳಾಂತರಿಸಿದೆ ಎಂದು ಹೇಳಿದೆ.

ಯುದ್ಧದ ಪರಿಸ್ಥಿತಿ

ದಕ್ಷಿಣ ಗಾಜಾದಲ್ಲಿ ಐಡಿಎಫ್ ಪಡೆಗಳ ಮೇಲೆ ದಾಳಿ ನಡೆದ ಸ್ವಲ್ಪ ಸಮಯದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಆ ಪ್ರದೇಶದಲ್ಲಿ ಮತ್ತೆ ಉದ್ವಿಗ್ನತೆಯನ್ನು ಉಂಟುಮಾಡಿದೆ. ಒತ್ತೆಯಾಳುಗಳ ಮೃತ ದೇಹಗಳನ್ನು ಹಿಂದಿರುಗಿಸುವುದನ್ನು ಒಳಗೊಂಡ ಘಟನೆಗಳು ಸೇರಿದಂತೆ ಹಮಾಸ್ ಮತ್ತಷ್ಟು ಉಲ್ಲಂಘನೆಗಳ ಬಗ್ಗೆ ಇಸ್ರೇಲಿ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಬಲವಾದ ಮಿಲಿಟರಿ ಪ್ರತಿಕ್ರಿಯೆ ತೀವ್ರಗೊಳಿಸಿದೆ. ಗಾಝಾದ ದಕ್ಷಿಣ ಭಾಗವಾದ ರಫಾದಲ್ಲಿ ಭಾರೀ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ನಡೆದಿರುವ ವರದಿಗಳು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿವೆ.

ಅಂದಹಾಗೆ 2023ರ ಅಕ್ಟೋಬರ್‌ನಲ್ಲಿ ಪ್ರಾರಂಭವಾದ ಇಸ್ರೇಲ್-ಹಮಾಸ್ ಯುದ್ಧದಿಂದ ಇಂದಿನವರೆಗೆ 68,527 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದು, 1,70,395 ಮಂದಿ ಗಾಯಗೊಂಡಿದ್ದಾರೆ. ಅಕ್ಟೋಬರ್ 7, 2023 ರಂದು ಹಮಾಸ್ ನಡೆಸಿದ ದಾಳಿಯಲ್ಲಿ 1,139 ಇಸ್ರೇಲಿಯರು ಮೃತಪಟ್ಟಿದ್ದು, 200 ಜನರನ್ನು ಅಪಹರಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com