
ಸುಡಾನ್: ಸುಡಾನ್‌ನ ಪಶ್ಚಿಮ ಡಾರ್ಫುರ್ ಪ್ರದೇಶದಲ್ಲಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಇಡೀ ಹಳ್ಳಿಯೇ ನಾಶವಾಗಿದ್ದು, 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಆ ಪ್ರದೇಶವನ್ನು ನಿಯಂತ್ರಿಸುವ ಬಂಡುಕೋರರ ಗುಂಪು ಸೋಮವಾರ ತಡರಾತ್ರಿ ತಿಳಿಸಿದೆ.
ಭಾರೀ ಮಳೆಯ ನಂತರ ಭಾನುವಾರ ಸಂಭವಿಸಿದ ಈ ದುರಂತದಲ್ಲಿ ಮರ್ರಾ ಪರ್ವತ ಪ್ರದೇಶದಲ್ಲಿರುವ ತಾರಾಸಿನ್ ಗ್ರಾಮ ನಾಶವಾಗಿದೆ ಎಂದು ಸುಡಾನ್ ವಿಮೋಚನಾ ಸೇನೆ (SLM)ಹೇಳಿಕೆಯಲ್ಲಿ ತಿಳಿಸಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಹಳ್ಳಿಯ ನಿವಾಸಿಗಳು ಸಾವನ್ನಪ್ಪಿದ್ದು, ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕೇವಲ ಓರ್ವ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ.
ಸಿಟ್ರಸ್ ಉತ್ಪಾದನೆಗೆ ಹೆಸರುವಾಸಿಯಾದ ಪ್ರದೇಶ ವಿನಾಶಕಾರಿ ಭೂ ಕುಸಿತದಿಂದ ನಾಶವಾಗಿದೆ SLM ಹೇಳಿದೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗಾಗಿ ವಿಶ್ವಸಂಸ್ಥೆ ಮತ್ತಿತರ ಸಂಸ್ಥೆಗಳಿಗೆ ಮನವಿ ಮಾಡಿದೆ.
ಸೂಡಾನ್ ಸೇನೆ ಮತ್ತು ಕ್ಷಿಪ್ರ ಅರೆಸೈನಿಕ ಪಡೆಗಳ (RSF)ನಡುವಿನ ರಕ್ತಸಿಕ್ತ ಅಂತರ್ಯುದ್ಧದಲ್ಲಿ ಸಿಲುಕಿಕೊಂಡಿದ್ದು, ಇದು ದೇಶವನ್ನು ವಿಶ್ವದ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟಿನಲ್ಲಿ ಸಿಲುಕಿಸಿದೆ.
Advertisement