Pakistan: ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಸ್ಫೋಟ; ಓರ್ವ ಸಾವು, ಹಲವು ಮಂದಿಗೆ ಗಾಯ! Video

IED ಸ್ಪೋಟ ಉದ್ದೇಶಿತ ದಾಳಿಯ ಗುರಿಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈ ಸ್ಫೋಟದ ವಿಡಿಯೋ ವೈರಲ್ ಆಗಿದ್ದು, ದಟ್ಟವಾದ ಹೊಗೆಯಿಂದ ಜನರು ಓಡುತ್ತಿರುವುದನ್ನು ತೋರಿಸುತ್ತದೆ.
blast during cricket match at stadium
ಸ್ಪೋಟದಿಂದ ಉಂಟಾದ ದಟ್ಟ ಹೊಗೆಯ ಚಿತ್ರ
Updated on

ಖೈಬರ್ ಪಖ್ತುಂಖ್ವಾ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ಟೇಡಿಯಂವೊಂದರಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಶಂಕಿತ ಭಯೋತ್ಪಾದನಾ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

IED ಸ್ಪೋಟ ಉದ್ದೇಶಿತ ದಾಳಿಯ ಗುರಿಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈ ಸ್ಫೋಟದ ವಿಡಿಯೋ ವೈರಲ್ ಆಗಿದ್ದು, ದಟ್ಟವಾದ ಹೊಗೆಯಿಂದ ಜನರು ಓಡುತ್ತಿರುವುದನ್ನು ತೋರಿಸುತ್ತದೆ. ಖಾರ್ ತಹಸಿಲ್‌ನ ಕೌಸರ್ ಕ್ರೀಡಾಂಗಣದಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.

ಇತ್ತೀಚಿಗೆ ಸಂಭವಿಸಿದ ಸರಣಿ ಘಟನೆಗಳಲ್ಲಿ ಖೈಬರ್ ಪಖ್ತುಂಖ್ವಾ ಪೊಲೀಸ್ ಠಾಣೆಯ ಮೇಲೆ ಕಳೆದ ವಾರ ಕ್ವಾಡ್‌ಕಾಪ್ಟರ್ ಮೂಲಕ ದಾಳಿ ನಡೆಸಲಾಗಿತ್ತು. ಪರಿಣಾಮವಾಗಿ ಪೊಲೀಸ್ ಪೇದೆ ಮತ್ತು ನಾಗರಿಕರೊಬ್ಬರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಡಾನ್ ವರದಿ ಮಾಡಿದೆ. ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

ಕೆಲವು ವಾರಗಳ ಹಿಂದೆ ಭದ್ರತಾ ಪಡೆಗಳು ಪ್ರಾರಂಭಿಸಿದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗೆ ಪ್ರತಿಕ್ರಿಯೆಯಾಗಿ ಭಯೋತ್ಪಾದಕರು ಈ ದಾಳಿ ನಡೆಸಿರಬಹುದು ಎಂದು ಭದ್ರತಾ ಅಧಿಕಾರಿಗಳು ಶಂಕಿಸಿದ್ದಾರೆ.

blast during cricket match at stadium
ಸಿಂಧೂ ಜಲ ಒಪ್ಪಂದ: ಪ್ರವಾಹದ ಬಗ್ಗೆ ಭಾರತ ಮಾಹಿತಿ ಹಂಚಿಕೊಂಡರೂ ತಪ್ಪದ ದೂರು! ಪಾಕಿಸ್ತಾನ ಹೇಳೋದೇನು?

ಕಳೆದ ತಿಂಗಳು ಆಗಸ್ಟ್ 14 ರಂದು-ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು-ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಏಳು ಜಿಲ್ಲೆಗಳಾದ್ಯಂತ ಪೊಲೀಸ್ ಠಾಣೆಗಳು, ಚೆಕ್‌ಪೋಸ್ಟ್‌ಗಳ ಮೇಲೆ ನಡೆಸಿದ್ದ ಬಂದೂಕು ಮತ್ತು ಗ್ರೆನೇಡ್ ದಾಳಿಯಲ್ಲಿ ಆರು ಅಧಿಕಾರಿಗಳು ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com